1954 ರಿಂದ 1979ರೊಳಗೆ ಈ ನರಸಿಂಹರಾಜು ಅವರು ಬರೋಬ್ಬರಿ 250ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದಾರೆ. ಅವರನ್ನು ಕನ್ನಡ ಚಿತ್ರರಂಗ 'ಹಾಸ್ಯ ಚಕ್ರವರ್ತಿ ಎಂದೇ ಬಿರುದು ನೀಡಿ ಗೌರವಿಸಿದೆ. ಅಂದು ಡಾ ರಾಜ್‌ಕುಮಾರ್ ಅವರ ಸಂಭಾವನೆಗಿಂತ..
ಕನ್ನಡದ 'ಚಾರ್ಲಿ ಚಾಪ್ಲಿನ್ ಯಾರು ಎಂಬ ಪ್ರಶ್ನೆಗೆ ಯಾರಾದ್ರೂ ಸ್ವಲ್ಪ ಜ್ಞಾನ ಇರೋರು 'ನರಸಿಂಹ ರಾಜು' ಬಿಟ್ಟು ಬೇರೆ ಹೆಸರು ಹೇಳೋದು ಡೌಟ್. ಯಾಕಂದ್ರೆ, ಕಾಮಿಡಿ ಅಂತ ಬಂದ್ರೆ ಅದು ಚಾರ್ಲಿ ಚಾಪ್ಲಿನ್ ಎಂಬುದು ಜಗತ್ತಿನಾದ್ಯಂತ ಇರುವ ವಿಚಾರ. ಆದರೆ, ಕನ್ನಡದಲ್ಲಿ ಈ ಮೊದಲು, ಅಂದ್ರೆ 60-70ರ ದಶಕದಲ್ಲಿ ಮೆರೆದ ಹಾಸ್ಯ ನಟ ಅಂದ್ರೆ ಅದು ನರಸಿಂಹರಾಜು. ಅಂದು ಕನ್ನಡದ ಯಾವುದೇ ಒಬ್ಬ ನಟ ನರಸಿಂಹರಾಜು (Narasimharaju) ಅವರಷ್ಟು ಖ್ಯಾತಿ ಪಡೆದಿರಲಿಲ್ಲ ಎಂಬುದು ಅಚ್ಚರಿ ಎನ್ನಿಸುವ ಸತ್ಯ.
ಡಾ ರಾಜ್‌ಕುಮಾರ್ (Dr Rajkumar) ಅವರು 1953 ರಲ್ಲಿ ಬೇಡರ ಕಣ್ಣಪ್ಪ ಚಿತ್ರದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಬಂದರು. ಅದೇ ವೇಳೆ ನಟ ನರಸಿಂಹರಾಜು ಅವರು ಹಾಸ್ಯನಟರಾಗಿ (1954) ರಲ್ಲಿ ಸಿನಿಮಾರಂಗಕ್ಕೆ ಕಾಲಿಟ್ಟರು. ಅಚ್ಚರಿ ಎಂದರೆ, ಡಾ ರಾಜ್‌ಕುಮಾರ್ ಅವರಿಗಿಂತ ಹೆಚ್ಚಾಗಿ ಅಂದು ಹಾಸ್ಯನಟ ನರಸಿಂಹರಾಜು ಅವರೇ ಬ್ಯುಸಿ ಆಗಿದ್ದರು. ಕಾರಣ, ನಾಯಕರು ಒಂದು ಚಿತ್ರ ಮುಗಿಸಲು ತೆಗೆದುಕೊಳ್ಳುವ ಸಮಯದಲ್ಲಿ ಸಹನಟರಾಗಿದ್ದ ನರಸಿಂಹರಾಜು ಅವರು ಅನೇಕ ಚಿತ್ರಗಳನ್ನು ಮಾಡಿ ಮುಗಿಸಿರುತ್ತಿದ್ದರು.
ಮೇರು ಕಲಾವಿದ ನರಸಿಂಹರಾಜು ಕೊರಗುತ್ತ ಕುಗ್ಗಿಹೋಗಿ ಇಹಲೋಕ ತ್ಯಜಿಸಿದ್ದು ಈ ಕಾರಣಕ್ಕೆ..!
1954 ರಿಂದ 1979ರೊಳಗೆ ಈ ನರಸಿಂಹರಾಜು ಅವರು ಬರೋಬ್ಬರಿ 250ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದಾರೆ. ಅವರನ್ನು ಕನ್ನಡ ಚಿತ್ರರಂಗ 'ಹಾಸ್ಯ ಚಕ್ರವರ್ತಿ ಎಂದೇ ಬಿರುದು ನೀಡಿ ಗೌರವಿಸಿದೆ. ಅಂದು ಡಾ ರಾಜ್‌ಕುಮಾರ್ ಅವರ ಸಂಭಾವನೆಗಿಂತ ನಟ ನರಸಿಂಹರಾಜು ಅವರ ಸಂಭಾವನೆಯೇ ಜಾಸ್ತಿ ಇತ್ತು. ಅಷ್ಟರಮಟ್ಟಿಗೆ ಅವರು ಸ್ಟಾರ್ ನಟರಾಗಿದ್ದರು. ಕೆಲವೊಂದು ಚಿತ್ರಗಳಿಗೆ ಆಗಿನ ಕಾಲದಲ್ಲೇ ಅವರು 500 ರಿಂದ 1000 ರೂಪಾಯಿ ಪಡೆಯುತ್ತಿದ್ದರು.
ನಟ ನರಸಿಂಹರಾಜು ಅವರು ಬ್ಲಾಕ್ & ವೈಟ್ ಚಿತ್ರದ, ಅಂದರೆ ಕಪ್ಪ-ಬಿಳುಪು ಕಾಲದಲ್ಲೇ ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದ ನಟ. ಆ ಕಾಲದಲ್ಲೇ ಅವರು ಕನ್ನಡದ ಉಳಿದೆಲ್ಲಾ ನಟರಿಗಿಂತ ಖ್ಯಾತಿ ಪಡೆದಿದ್ದರು. ಆದರೆ, ನಟ ನರಸಿಂಹರಾಜು ಅವರು 1979 ರಲ್ಲಿ ನಿಧನರಾದರು. ಸಹಜವಾಗಿಯೇ ನಮ್ಮಲ್ಲಿ ನಾಯಕನಟರಷ್ಟು ಪ್ರಸಿದ್ಧಿಯನ್ನು ಖಳನಟರು ಹಾಗೂ ಹಾಸ್ಯನಟರು ಪಡೆಯುವುದಿಲ್ಲ. ಆದ್ದರಿಂದ ನರಸಿಂಹರಾಜು ಅವರು ಕಾಲಾನಂತರದಲ್ಲಿ ಕೆಲವೇ ಜನರು ಅವರನ್ನು ನೆನಪಿಸಿಕೊಳ್ಳುತ್ತಾರೆ.
ಕನ್ನಡದ ಮೇರು ನಟರು ಹುಟ್ಟಿದ ಊರು ಯಾವುದು? ಯಾವ ಜಿಲ್ಲೆ? ಉತ್ತರಕ್ಕೆ ಇಲ್ನೋಡಿ..!
