ನಿಖಿಲ್ ಕುಮಾರಸ್ವಾಮಿಯವರ 'ಸೀತಾರಾಮ ಕಲ್ಯಾಣ'ಕ್ಕೆ ಭರ್ಜರಿ ಯಶಸ್ಸು ಸಿಗದೇ ಹೋದರೂ, ಸಿನಿಮಾಗಳಲ್ಲಿ ಓಡುತ್ತಿದೆ. ಈ ಚಿತ್ರ ಬಿಡುಗಡೆಯಾಗಿ 35 ದಿನಗಳಾಗಿವೆ. ಆದರೆ, ಪತ್ರಿಕೆಯೊಂದಕ್ಕೆ ನೀಡಿರುವ ಜಾಹೀರಾತಿನಲ್ಲಿ 38ನೇ ವಾರದಿಂದ ಯಶಸ್ವಿ ಪ್ರದರ್ಶನ... ಎಂದು ಹೇಳಲಾಗಿದೆ. ಈ ಅಚಾತುರ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರಾಲ್ ಆಗುತ್ತಿದೆ. ಟ್ರಾಲ್ ಹೈಕ್ಳಿಗೆ ಸಿಕ್ಕಿದರೆ ಕೇಳಬೇಕಾ?

'ಜಾಗ್ವಾರ್' ಚಿತ್ರದ ಮೂಲಕ ಸಿನಿ ಜರ್ನಿ ಶುರು ಮಾಡಿರುವ ನಿಖಿಲ್ ಕುಮಾರಸ್ವಾಮಿ ಅವರ ಚಿತ್ರವೆಂದು ಈ ತಪ್ಪು ಮಾಹಿತಿ ಎಂದೇ ಆರೋಪಿಸಲಾಗುತ್ತಿದೆ.

ಸಿನಿಮಾ ನೋಡಿದರೆ, ರಚಿತಾ-ನಿಖಿಲ್ ಜೋಡಿಯನ್ನು ಥೇಟ್ ಸೀತಾ- ರಾಮನಂತಿದ್ದಾರೆಂದು ಹೇಳುವುದು ಗ್ಯಾರಂಟಿ. ಕ್ಲಾಸ್ ಅ್ಯಂಡ್ ಮಾಸ್ ಕಾಂಬಿನೇಷನ್‌ನಲ್ಲಿ ಇರುವ ಈ ಚಿತ್ರ ಅಂದುಕೊಂಡಷ್ಟು ಯಶಸ್ವಿಯಾಗಲಿಲ್ಲ ಎಂಬುವುದು ಎಲ್ಲರಿಗೂ ಗೊತ್ತು.