ಬಹುಮುಖ ಪ್ರತಿಭೆ ಚಂದ್ರಚೂಡ್ ನಿರ್ದೇಶನದಲ್ಲಿ ಹೊಸ ಚಿತ್ರವೊಂದು ಬರುತ್ತಿದ್ದು, ಸ್ಕ್ಯಾನ್ ಮಾಡಿ ಮ್ಯಾಜಿಕ್ ನೋಡಿ ಚಿತ್ರದ ಬಗ್ಗೆ ಇಲ್ಲಿದೆ ಅಪ್‌ಡೇಟ್ಸ್.
ಮಯೂರ ಮೋಷನ್ ಪಿಕ್ಚರ್ಸ್‌ನ ನಿರ್ಮಾಪಕರು ಮಂಜುನಾಥ್ D ಅವರು ಅನ್‌ಲಾಕ್ ರಾಘವ ನಂತರ ಮತ್ತೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ. ಮಿಲಿಂದ್ ಗೌತಮ್ ನಾಯಕ ನಟರಾಗಿರುವ ಈ ಸಿನಿಮಾಗೆ ನಿರ್ದೇಶಕರ ಕ್ಯಾಪ್ ತೊಟ್ಟಿರುವುದು ಬಹುಮುಖ ಪ್ರತಿಭೆ ಡಿ. ಜೆ. ಚಕ್ರವರ್ತಿ (ಚಂದ್ರಚೂಡ್). ಬಿಗ್ ಬಾಸ್ ಖ್ಯಾತಿ, ಚಳುವಳಿ, ಬರಹಗಾರ, ನಿರ್ದೇಶಕ ಚಕ್ರವರ್ತಿ ಏಳು ವರ್ಷಗಳ ನಂತರ ನಿರ್ದೇಶನ ಮಾಡುತ್ತಿದ್ದಾರೆ.
ಅನ್‌ಲಾಕ್ ರಾಘವ ನಂತರ ಮಿಲಿಂದ್ ಗೌತಮ್ ಅವರು ಸತತ ಮೂರು ತಿಂಗಳುಗಳಿಂದ ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಬೇರೆ ಬೇರೆ ನಿರ್ದೇಶಕರಿಗೆ ಹಲವು ಸಿನಿಮಾಗಳನ್ನು ಬರೆಯುತ್ತಿರುವ ಚಕ್ರವರ್ತಿ ಈ ಸಿನಿಮಾಕ್ಕೆ ತಾವೇ ಸ್ಕ್ರಿಪ್ಟ್ ಬರೆದು, ನಿರ್ದೇಶಿಸುತ್ತಿದ್ದಾರೆ.
ಶಿಖಂಡಿ, ಸೆಕ್ಯೂರಿಟಿ ಗಾರ್ಡ್ ಕೆಲಸ ಕೊಡ್ತೀನಿ ಬಾ: ಸೂರಪ್ಪ ಬಾಬು ವಿರುದ್ಧ ಚಕ್ರವರ್ತಿ ಚಂದ್ರಚೂಡ್ ಆಕ್ರೋಶ
ಮಣಿಕಾಂತ್ ಕದ್ರಿ ಸಂಗೀತ, ಮಧು ತುಂಬನಕೆರೆ ಸಂಕಲನ, ಯೋಗೇಶ್ವರನ್ ಛಾಯಾಗ್ರಹಣ, ಕಾರ್ಯಕಾರಿ ನಿರ್ಮಾಪಕರಾಗಿ ಪ್ರಶಾಂತ್ ಬಾಗೂರು, ಡಿಜಿಟಲ್ ಮಾರ್ಕೆಟಿಂಗ್ ಸುನೀಲ್ ಮಾನೆ, ಸಹ ನಿರ್ದೇಶಕರಾಗಿ ಚಂದ್ರಶೇಖರ ಮುದಬಾವಿ ಮುಂತಾದವರ ತಂಡವಿದೆ. ಈಗಾಗಲೇ ಕದ್ರಿ ಮಣಿಕಾಂತ್ ಹಾಡುಗಳು ಸಂಯೋಜನೆಯಲ್ಲಿದು, ಚಿತ್ರೀಕರಣಕ್ಕೆ ಪೂರ್ವ ತಯಾರಿ ಭರದಿಂದ ಸಾಗಿದೆ.
ಆಗಸ್ಟ್ 18ರಂದು ಟೀಸರ್ ಚಿತ್ರೀಕರಣ ನಡೆಯಲಿದ್ದು, ಸೆಪ್ಟೆಂಬರ್ 2, ಅಭಿನಯ ಚಕ್ರವರ್ತಿ ಸುದೀಪ್ ಅವರ ಹುಟ್ಟಿದ ದಿನದಂದೇ ಟೀಸರ್ ಬಿಡುಗಡೆ ಮತ್ತು ಎಲ್ಲ ಮಾಹಿತಿಗಳು ಲಭ್ಯವಾಗಲಿದೆ. ನಿರ್ದೇಶಕರ ಹುಟ್ಟಿದ ದಿನದಂದೇ ಟೀಮ್ ಅನೌನ್ಸ್ ಆಗಲಿದೆ. ಸ್ಕ್ಯಾನ್ ಮಾಡಿ ಮ್ಯಾಜಿಕ್ ನೋಡಿ! ನಿಮಗೊಂದು ಅಪರೂಪದ ವಿಷಯ ಸಿಗಲಿದೆ.
'ಪಾದರಾಯ' ಬಿಟ್ಟು 'ಐ ಯಾಮ್ ಕಲ್ಕಿ' ಹಿಂದೆ ಹೊರಟ ಚಕ್ರವರ್ತಿ ಚಂದ್ರಚೂಡ್; ನಾಯಕ ಯಾರು?
