ಡ್ರಗ್ಸ್‌ ಕೇಸ್‌ನಲ್ಲಿ ಸುಪ್ರೀಂ ಕೋರ್ಟ್‌ನಿಂದ  ಬೇಲ್ ಸಿಕ್ಕಿ ಮೂರು ದಿನವಾದರೂ ನಟಿ ರಾಗಿಣಿಗೆ ಬಿಡುಗಡೆ ಭಾಗ್ಯವಿಲ್ಲ. ಇದಿರಂದ ತುಪ್ಪದ ಬೆಡಗಿ ಹೊರಬರಲು ಪರದಾಡುತ್ತಿದ್ದಾರೆ.

ಬೆಂಗಳೂರು, (ಜ.23): ಸ್ಯಾಂಡಲ್​​ವುಡ್​​ ಡ್ರಗ್ಸ್​​​ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿಗೆ ಜನವರಿ 21ರಂದೇ ಸುಪ್ರೀಂ ಕೋರ್ಟ್​​​ ಜಾಮೀನು ನೀಡಿದೆ. ಆದ್ರೆ, ರಾಗಿಣಿ ಇದುವರೆಗೂ ಬಿಡುಗಡೆಯಾಗಿಲ್ಲ.

ಹೌದು...ಜಾಮೀನು ನೀಡಿದ ಆದೇಶ ಪ್ರತಿ ಸುಪ್ರೀಂಕೋರ್ಟ್​ನಿಂದ NDPS ನ್ಯಾಯಾಲಯಕ್ಕೆ ಮೊನ್ನೆ ತಡವಾಗಿ ಹೋಗಿದೆ. ಅಲ್ಲದೇ 3 ಲಕ್ಷ ಬಾಂಡ್, ಇಬ್ಬರು ಶ್ಯೂರಿಟಿ ನೀಡುವಂತೆ NDPS ನ್ಯಾಯಾಲಯ ಸೂಚನೆ ನೀಡಿದೆ.

ನಟಿ ರಾಗಿಣಿಗೆ ಬಿಗ್ ರಿಲೀಫ್, ಜಾಮೀನು ನೀಡಿದ ಸುಪ್ರೀಂ ಕೋರ್ಟ್!

ಆದರೆ ರಾಗಿಣಿಗೆ ಶ್ಯೂರಿಟಿ ಕೊಡಲು ಯಾರೂ ಮುಂದೆ ಬಾರದ ಕಾರಣ ಇಂದು (ಶನಿವಾರ) ಬಿಡುಗಡೆ ಇಲ್ಲ. ನಾಳೆ (ಭಾನುವಾರ) ಇರುವುದರಿಂದ ಕೋರ್ಟ್‌ ರಜೆ. ಈ ಹಿನ್ನೆಲೆಯಲ್ಲಿ ತುಪ್ಪದ ಬೆಡಗಿಗೆ ಸೋಮವಾರವೇ ಬಿಡುಗಡೆ ಭಾಗ್ಯ. 

ಷರತ್ತುಗಳನ್ನ ಪೂರೈಸಲು ಸಮಯಾವಕಾಶ ಕಡಿಮೆ ಹಿನ್ನಲೆಯಲ್ಲಿ ಸೋಮವಾರ (ಜ.25) ಷರತ್ತು ಪೂರೈಸಿ ಬಿಡುಗಡೆ ಆದೇಶ ಪಡೆಯಲು ರಾಗಿಣಿ ಪರ ವಕೀಲರು ನಿರ್ಧಾರಿಸಿದ್ದಾರೆ.