ನಟಿ ರಾಗಿಣಿಗೆ ಬಿಗ್ ರಿಲೀಫ್, ಜಾಮೀನು ನೀಡಿದ ಸುಪ್ರೀಂ ಕೋರ್ಟ್!

ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ರಾಗಿಣಿಗೆ ಕೊನೆಗೂ ರಿಲೀಫ್ ಸಿಕ್ಕಿದೆ. 140 ದಿನಗಳಿಂದ ಜೈಲ್ಲಿನಲ್ಲಿದ್ದ ತುಪ್ಪದ ಹುಡುಗಿ ರಾಗಿಣಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. 

Supreme Court Grants Bail To Kannada Actress Ragini Dwivedi In Sandalwood Drug Case pod

ನವದೆಹಲಿ(ಜ.21): ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ರಾಗಿಣಿಗೆ ಕೊನೆಗೂ ರಿಲೀಫ್ ಸಿಕ್ಕಿದ್ದು ಜೈಲುವಾಸ ಕೊನೆಯಾಗಿದೆ. 140 ದಿನಗಳಿಂದ ಜೈಲ್ಲಿನಲ್ಲಿದ್ದ ತುಪ್ಪದ ಹುಡುಗಿ ರಾಗಿಣಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. 

ನಟಿ ರಾಗಿಣಿ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿರಬಹುದು. ಆದರೆ ಮನೆಯಲ್ಲಿ ಡ್ರಗ್ಸ್ ಸಿಕ್ಕಿಲ್ಲ ಎಂದು ವಕೀಲರು ವಾದ ಮಂಡಿಸಿದ್ದು, ಈ ಆಧಾರದ ಮೇಲೆ ಜಾಮೀನು ಮಂಜೂರು ಮಾಡಲಾಗಿದೆ. ರಾಗಿಣಿ ಜೊತೆ ಮತ್ತೊಬ್ಬ ಆರೋಪಿ ಶಿವ ಪ್ರಕಾಶ್‌ಗೂ ಜಾಮೀನು ನೀಡಲಾಗಿದೆ. 

"

ಸೆ. 04, 2020 ರಂದು ರವಿಶಂಕರ್ ಹೇಳಿಕೆ ಆಧರಿಸಿ ರಾಗಿಣಿಯನ್ನು ಬಂಧಿಸಲಾಗಿತ್ತು. ಅಂದಿನಿಂದ ರಾಗಿಣಿ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ದರು. ಅನೇಕ ಬಾರಿ ಜಾಮೀನು ಪಡೆಯಲು ಅರ್ಜಿ ಸಲ್ಲಿಸಿದ್ದರಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಏನಿದು ಪ್ರಕರಣ?:

ಡ್ರಗ್ಸ್‌ ಜಾಲ ಪ್ರಕರಣದ ಸಂಬಂಧ ಸಿಸಿಬಿ ಪೊಲೀಸರು ಸೆ.4 ರಂದು ರಾಗಿಣಿ ಮತ್ತು ಸೆ.8ರಂದು ಸಂಜನಾರನ್ನು ಬಂಧಿಸಿದ್ದರು. ಪೊಲೀಸ್‌ ಕಸ್ಟಡಿ ಮುಗಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದ ಎನ್‌ಡಿಪಿಎಸ್‌ ವಿಶೇಷ ನ್ಯಾಯಾಲಯ, ಸೆ.28ರಂದು ಜಾಮೀನು ಅರ್ಜಿ ವಜಾಗೊಳಿಸಿತ್ತು.

ಇದರಿಂದ, ರಾಗಿಣಿ ಮತ್ತು ಸಂಜನಾ ಜಾಮೀನು ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಅರ್ಜಿದಾರರ ವಿರುದ್ಧ ಡ್ರಗ್ಸ್‌ ಪೂರೈಕೆ, ಮಾರಾಟ ಹಾಗೂ ಸೇವನೆಯಂಥಹ ಗಂಭೀರ ಆರೋಪಗಳಿದ್ದು, ಎನ್‌ಡಿಪಿಎಸ್‌ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಪ್ರ

Latest Videos
Follow Us:
Download App:
  • android
  • ios