"ಸಂಜು ವೆಡ್ಸ್ ಗೀತಾ 2" ಜನವರಿ 17 ರಂದು ಬಿಡುಗಡೆಯಾಗಿದೆ. ಚಿತ್ರತಂಡವು ಪ್ರಚಾರದ ಕೊರತೆಯ ಬಗ್ಗೆ ಬೇಸರ ವ್ಯಕ್ತಪಡಿಸಿದೆ. ಕಲಾವಿದರು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಬಹುದೆಂದು ಚಕ್ರವರ್ತಿ ಚಂದ್ರಚೂಡ್ ಹೇಳಿದ್ದಾರೆ. ಶಿವರಾಜ್‌ಕುಮಾರ್ ಅವರನ್ನು ಆದರ್ಶವಾಗಿಟ್ಟುಕೊಳ್ಳುವಂತೆ ಕಿವಿಮಾತು ಹೇಳಿದ್ದಾರೆ.

ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಜೋಡಿಯಾಗಿ ಅಭಿನಯಿಸಿರುವ ಸಂಜು ವೆಡ್ಸ್ ಗೀತಾ ಸಿನಿಮಾ ಜನವರಿ 17ರಂದು ರಿಲೀಸ್ ಆಗಿದೆ. ನಾನ ಕಾರಣಗಳಿಂದ ರಿಲೀಸ್ ಆಗಬೇಕಿದ್ದ ದಿನಾಂಕ ಹೊರತು ಪಡಿಸಿ ಮತ್ತೊಂದು ದಿನಾಂಕದಲ್ಲಿ ರಿಲೀಸ್ ಕಾಣುತ್ತಿದೆ. ಈಗಾಗಲೆ ಸಾಕಷ್ಟು ಬಾರಿ ಸಿನಿಮಾ ಪ್ರಮೋಷನ್ ಅದ್ಧೂರಿಯಾಗಿ ನಡೆದಿದೆ. ಎಲ್ಲಿ ನೋಡಿದರೂ ಸಂಜು ವೆಡ್ಸ್‌ ಗೀತಾ 2 ಚಿತ್ರದ ಹಾಡು ಕಿವಿಗೆ ಬೀಳುತ್ತಿದೆ. ಈ ನಡುವೆ ಕಲಾವಿದರು ಸಿನಿಮಾ ಪ್ರಮೋಷನ್ ಮಾಡುತ್ತಿಲ್ಲ ಎಂದು ಚಿತ್ರತಂಡ ಬೇಸರ ವ್ಯಕ್ತ ಪಡಿಸಿದೆ. 

ಇತ್ತೀಚಿಗೆ ನಡೆದ ಪ್ರೆಸ್‌ಮೀಟ್‌ನಲ್ಲಿ ನಟ ಶ್ರೀನಗರ ಕಿಟ್ಟಿ ಹೊರತು ಪಡಿಸಿದರೆ ಯಾವ ಕಲಾವಿದರೂ ಕೂಡ ಆಗಮಿಸಿರಲಿಲ್ಲ. ಕೇವಲ ನಿರ್ದೇಶಕರು, ನಿರ್ಮಾಪಕರು ಹಾಗೂ ಬರಹಗಾರರು ಅಷ್ಟೇ ಇದ್ದಿದ್ದು. ಹೀಗಾಗಿ ಯಾಕೆ ಕಲಾವಿದರು ಪ್ರಚಾರಕ್ಕೆ ಬರುತ್ತಿಲ್ಲ ಎಂದು ಪತ್ರಕರ್ತರು ಪ್ರಶ್ನೆ ಮಾಡಿದ್ದಕ್ಕೆ ಸಿಕ್ಕ ಉತ್ತರವಿದು.

ಮಾಜಿ ಮುಖ್ಯಮಂತ್ರಿ ಜೊತೆ ನಟಿ ರಚಿತಾ ರಾಮ್ ಒಡನಾಟ, ಲಾಭ ಅಷ್ಟಿಷ್ಟಲ್ಲ: ಲಾಯರ್ ಜಗದೀಶ್ ಹೇಳಿಕೆ ವೈರಲ್

'ಕಲಾವಿದರು ಮುಖಕ್ಕೆ ಬಣ್ಣ ಹಚ್ಚಿಕೊಳ್ಳಬೇಕು ನಾಲಿಗೆ ಅಲ್ಲ. ನಾಲಿಗೆ ಬಣ್ಣ ಹಚ್ಚಿಕೊಂಡವರು ತುಂಬಾ ಜನ ಬದುಕಿಲ್ಲ ಮುಖಕ್ಕೆ ಹಚ್ಚಿಕೊಂಡವರು ಮಾತ್ರ ಬದುಕಿರುವುದು ಅಂತ ತುಂಬಾ ದೊಡ್ಡ ಹಿರಿಯ ನಿರ್ದೇಶಕರು ಹೇಳಿ ಹೋಗಿದ್ದರು ಅದನ್ನು ನಾನು ಮತ್ತೆ ಹೇಳುತ್ತಿರುವೆ. ಕಲಾವಿದರು ಯಾರು ಬಂದಿಲ್ಲ ಎಂದು ನಿರ್ಮಾಪಕರು ಮತ್ತು ನಿರ್ದೇಶಕಲು ಮಾತನಾಡಲು ಆಗುವುದಿಲ್ಲ ಏಕೆಂದರೆ ಅವರ ತಲೆಯಲ್ಲಿ ಸದ್ಯಕ್ಕೆ ಪೇಪರ್‌ ಅಗ್ರಿಮೆಂಟ್ ಅದು ಇದು ಅಂತ ಓಡುತ್ತಿರುತ್ತದೆ. ರೈಟರ್ ಆಗಿ ನಾನೊಂದು ಪ್ರಶ್ನೆ ಕೇಳುತ್ತೀನಿ, ಎಲ್ಲಾ ಕಲಾವಿದರಿಗೆ ಶೂಟಿಂಗ್ ಇರುತ್ತದೆ ಪ್ರವಾಸ ಇರುತ್ತದೆ ವೈಯಕ್ತಿಕ ಜೀವನ ಇರುತ್ತೆ ಅದಾದ ಮೇಲೆ ಪ್ರತಿ ಸಲ ಫಿಲ್ಮ್ ಚೇಂಬರ್‌ಗೆ ಹೋಗಿ ದೂರು ಕೊಟ್ಟು ಪ್ರಮೋಷನ್‌ಗೆ ಕರೆಸಲು ಆಗಲ್ಲ. ಈಗ ಪ್ರತಿಯೊಬ್ಬರ ಕೈಯಲ್ಲಿ ಸೋಷಿಯಲ್ ಮೀಡಿಯಾ ಇಲ್ವಾ? ಕೈ ಬೆರಗಳುಗಳು ಇಲ್ವಾ? ಅಲ್ಲಿ ಬರೆದುಕೊಳ್ಳಬಹುದು ಅಲ್ವಾ? ಕೆಲಸ ಆಯ್ತು ಪೇಮೆಂಟ್ ತೆಗೆದುಕೊಂಡಿದ್ದೀವಿ ಡಬ್ಬಿಂಗ್ ಮುಗಿಸಿದ್ದೀವಿ ಅಂತ ಇದ್ದಾರೆ. ಈ ಹಿಂದೆ ಹಿರಿಯರು ಮಾಡಿದ್ದರು ಇಷ್ಟು ದಿನ ಪ್ರಚಾರಕ್ಕೆ ಬಂದಿಲ್ಲ ಅಂದ್ರೆ ಪೇಮೆಂಟ್ ಕ್ಲಿಯರ್ ಆಗುತ್ತಿರಲಿಲ್ಲ ಅಂತ. ಆದರೆ ಕೆಲವರು ಪೇಮೆಂಟ್ ಕೊಟ್ಟು ಈ ರೀತಿ ಮಾಡಿಕೊಂಡಿದ್ದಾರೆ' ಎಂದ ಚಕ್ರವರ್ತಿ ಚಂದ್ರಚೂಡ್ ಮಾತನಾಡಿದ್ದಾರೆ.

ಏನ್ ಫ್ರೀ ಅಗಿ ಕೆಲಸ ಮಾಡ್ತಿದ್ದೀನಾ ಹಣ ಎಲ್ಲಿಂದ ಬರುತ್ತೆ ಅಂತ ಕೇಳೋಕೆ? ರಚಿತಾ ರಾಮ್ ಫುಲ್ ಗರಂ

ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌ ಅವರನ್ನು ನೋಡಿದರೆ ನಾವು ಖುಷಿ ಪಡಬೇಕು. ಏಕೆಂದರೆ ಅವರು ಈಗ ಇರುವ ಸ್ಥಿತಿ ನೋಡಿದರೆ...ಅಮೇರಿಕಾದಲ್ಲಿ ಇದ್ದಾರೆ ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಿದ್ದಾರೆ..ಈ ನಡುವೆ ತಮ್ಮ 45 ಸಿನಿಮಾಗೆ ಅಲ್ಲಿಂದ ಪ್ರಚಾರ ಮಾಡುತ್ತಿದ್ದಾರೆ. ದಯವಿಟ್ಟು ಶಿವಣ್ಣ ಅವರನ್ನು ಮಾರ್ಗದರ್ಶನ ಆಗಿ ಇಟ್ಟುಕೊಳ್ಳಿ...ನಾಳೆ ಜನರು ಬಂದು ಸಿನಿಮಾದಲ್ಲಿ ನಿಮ್ಮ ಪಾತ್ರ ಏನು? ಪ್ರಚಾರ ಹೇಗೆ ಮಾಡಿದ್ದೀರಿ ಎಂದು ಕೇಳಿದಾಗ ನಿಮ್ಮ ಮುಖ ನೋಡಬೇಕು ನಾನು ಎಂದು ಚಕ್ರವರ್ತಿ ಚಂದ್ರಚೂಡ್ ಹೇಳಿದ್ದಾರೆ. 

ಯಾರ ಜೊತೆಗೋ ಹೋಗಿ ಇರುವವಳು ನಾನಲ್ಲ; ಲಾಯರ್ ಜಗದೀಶ್ ಕೊಂಕು ಮಾತಿಗೆ ಖಡಕ್ ಉತ್ತರ ಕೊಟ್ಟ ರಚಿತಾ ರಾಮ್