ಡ್ರಗ್ಸ್‌ ಮಾಫಿಯಾ ಪ್ರಕರಣದ ಹಿನ್ನೆಲೆಯಲ್ಲಿ ಹಲವು ತಿಂಗಳ ಕಾಲ ಕಂಬಿ ಹಿಂದಿದ್ದ ನಟಿ ಸಂಜನಾ ಗಲ್ರಾಣಿ ಜಾಮೀನು ಪಡೆದು ಹೊರ ಬಂದ ನಂತರ ಮೊದಲು ಭೇಟಿಯಾಗಿರುವ ವ್ಯಕ್ತಿ ನಿರ್ಮಾಪಕ ಕೆ.ಮಂಜು. ಸ್ವತಃ ಸಂಜನಾ ಫೋಟೋ ಅಪ್ಲೋಡ್ ಮಾಡಿದ್ದಾರೆ. 

'ಹೈದ್ರಾಬಾದ್ ನನ್ನ ಪ್ರಾಣ, ನಿತ್ಯ ನಮಾಜ್ ಮಾಡ್ತೇನೆ' ಸಂಜನಾ ಲೈವ್! 

ಸಂಜನಾ ಮಾತು:
'ನನ್ನ ಒಳ್ಳೆಯ ಆರೋಗ್ಯಕ್ಕೆ ಹಾರೈಸಲು ಕೆ. ಮಂಜು ಅಣ್ಣ ನಮ್ಮ ಮನೆಗೆ ಬಂದಿದ್ದಾರೆ.  ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು ಅಣ್ಣ,' ಎಂದು ಸಂಜನಾ ಬರೆದುಕೊಂಡಿದ್ದಾರೆ.  ಸಂಜನಾ ಕುಟುಂಬದ ಜೊತೆ ಆಪ್ತರಾಗಿರುವ ಮಂಜು ಭೋಜನ ಸವಿದಿದ್ದಾರೆ. ಜೈಲಿನಲ್ಲಿದ್ದ ಸಂಜನಾಳ ಆರೋಗ್ಯ ತುಂಬಾನೇ ಹದಗೆಟ್ಟಿತ್ತು. ಸೂಕ್ತ ಚಿಕಿತ್ಸೆ ಪಡೆಯಲು ಹೊರ ಬಂದ ನಂತರ ಚೇತರಿಸಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಸಂಜನಾ ಮತ್ತೆ ಸಿನಿಮಾ ಮಾಡುವುದಾಗಿ  ನಿರ್ಧರಿಸಿದ್ದಾರೆ. ಈಗಾಗಲೇ ಸಾಕಷ್ಟು ಚಿತ್ರಕತೆ ಕೇಳಿದ್ದಾರೆ ಎಂಬ ಮಾಹಿತಿಯೂ ಇದೆ. ಇತ್ತೀಚಿಗೆ ಮಾಡಲಾಗಿದ್ದ ಫೇಸ್‌ಬುಕ್‌ ಲೈವ್‌ನಲ್ಲಿ ಮನಬಿಚ್ಚಿ ಮಾತನಾಡಿದ ಸಂಜನಾ, ಕಷ್ಟದ ದಿನಗಳ ಬಗ್ಗೆ ಎಂದೂ ನೆನಪಿಸಿಕೊಳ್ಳಲು ಇಷ್ಟ ಪಡುವುದಿಲ್ಲ ಎಂದಿದ್ದಾರೆ.