'ಸಂಜಯ್‌ ದತ್‌ ಆರೋಗ್ಯವಷ್ಟೇ ನಮಗೆ ಮುಖ್ಯ, ಚಿತ್ರೀಕರಣದ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಸಂಜಯ್‌ ದತ್‌ ಶೀಘ್ರವೇ ಗುಣಮುಖರಾಗಿ ಬರುತ್ತಾರೆ ಎಂಬ ನಂಬಿಕೆ ನಮ್ಮದು' ಇದು ಕೆಜಿಎಫ್‌ 2 ಚಿತ್ರತಂಡದ ಸ್ಪಷ್ಟಮಾತು.

'ಸಂಜಯ್‌ ದತ್‌ ಆರೋಗ್ಯವಷ್ಟೇ ನಮಗೆ ಮುಖ್ಯ, ಚಿತ್ರೀಕರಣದ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಸಂಜಯ್‌ ದತ್‌ ಶೀಘ್ರವೇ ಗುಣಮುಖರಾಗಿ ಬರುತ್ತಾರೆ ಎಂಬ ನಂಬಿಕೆ ನಮ್ಮದು' ಇದು ಕೆಜಿಎಫ್‌ 2 ಚಿತ್ರತಂಡದ ಸ್ಪಷ್ಟಮಾತು.

ಕೆಜಿಎಫ್‌ 2 ಚಿತ್ರದ ಮುಖ್ಯ ಖಳನಾಯಕ ಅಧೀರ ಪಾತ್ರಧಾರಿ ಸಂಜಯ್‌ ದತ್‌ ಕ್ಯಾನ್ಸರ್‌ ಕಾರಣ ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿರುವುದರಿಂದ ಕೆಜಿಎಫ್‌ 2 ಚಿತ್ರೀಕರಣ ಇನ್ನಷ್ಟುತಡವಾಗುತ್ತದೆ ಎಂಬ ಆತಂಕವನ್ನು ಕೆಜಿಎಫ್‌ ಅಭಿಮಾನಿಗಳು ವ್ಯಕ್ತಪಡಿಸಿದ್ದರು.

ತಾಯಿ, ಮೊದಲ ಪತ್ನಿಗೂ ಇತ್ತು ಕ್ಯಾನ್ಸರ್, ಈಗ ಸಂಜೂನನ್ನೂ ಬಿಡಲಿಲ್ಲ..!

ಒಂದೆಡೆ ಸಂಜಯ್‌ ಅನಾರೋಗ್ಯಗೊಂಡಿರುವ ಬೇಸರ, ಇನ್ನೊಂದೆಡೆ ಅವರ ಪಾತ್ರದ ಚಿತ್ರೀಕರಣ ಹೇಗೆ ಎಂಬ ಆತಂಕ ವ್ಯಕ್ತಪಡಿಸಿದ್ದರು ಅಭಿಮಾನಿಗಳು. ಆದರೆ ಈ ಕುರಿತು ಹೇಳಿಕೆ ನೀಡಲು ಚಿತ್ರತಂಡ ನಿರಾಕರಿಸಿದೆ.

ಮೂಲಗಳ ಪ್ರಕಾರ ಯಶ್‌ ಜತೆಗಿನ ಸಂಜಯ್‌ ದತ್‌ ದೃಶ್ಯಗಳ ಚಿತ್ರೀಕರಣ ಈಗಾಗಲೇ ಮುಗಿದಿದೆ. ಒಂದೆರಡು ಸಣ್ಣ ಪುಟ್ಯ ದೃಶ್ಯಗಳ ಚಿತ್ರೀಕರಣವಷ್ಟೇ ಬಾಕಿ ಇತ್ತು. ಆದರೆ ಆ ಕುರಿತು ಯಾವುದೇ ವಿಚಾರವನ್ನು ಸ್ಪಷ್ಟಪಡಿಸಲು ಚಿತ್ರತಂಡ ನಕಾರ ಸೂಚಿಸಿದೆ.

ನಟ ಸಂಜಯ್‌ ದತ್‌ಗೆ ಶ್ವಾಸಕೋಶ ಕ್ಯಾನ್ಸರ್‌!

ಸಂಜಯ್‌ ದತ್‌ ಅನಾರೋಗ್ಯಕ್ಕೆ ಈಡಾಗಿರುವ ಸಂದರ್ಭದಲ್ಲಿ ನಾವು ಚಿತ್ರೀಕರಣ ಕುರಿತು ಯೋಚಿಸುವುದು ಸರಿಯಲ್ಲ ಎಂದಿರುವ ಚಿತ್ರತಂಡದ ನಿಲುವನ್ನು ಅಭಿಮಾನಿಗಳು ಗೌರವದಿಂದಲೇ ಒಪ್ಪಿಕೊಳ್ಳಬೇಕಾಗಿದೆ.

ಕೆಜಿಎಫ್ ಅಧೀರ, ಬಾಲಿವುಡ್ ನಟ ಸಂಜಯ್ ದತ್ ಉಸಿರಾಟದ ತೊಂದರೆಯಿಂದ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದು, ತಾನು ಹುಷಾರಾಗಿದ್ದೇನೆ ಎಂದು ಅವರು ತಿಳಿಸಿದ್ದರು. ಈಗಾಗಲೇ ಹಿರಿಯ ನಟನಿಗೆ ಕೊರೋನಾ ಟೆಸ್ಟ್ ಮಾಡಿಸಲಾಗಿದ್ದು, ವರದಿ ನೆಗೆಟಿವ್ ಬಂದಿರುವುದು ಅಭಿಮಾನಿಗಳಿಗೆ ನಿರಾಳವಾಗಿದೆ.