ಸಂಜಯ್‌ ದತ್‌ಗೆ ಗಂಭೀರ ಗಾಯ? ಹರಿದಾಡುತ್ತಿರುವ ಗಾಳಿ ಸುದ್ದಿಗೆ ಸ್ಪಷ್ಟನೆ ಕೊಡುವ ಮೂಲಕ ಬ್ರೇಕ್ ಹಾಕಿದ ನಟ... 

ಕನ್ನಡ ಚಿತ್ರರಂಗದಲ್ಲಿ ಆಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯಿಸುತ್ತಿರುವ ಕೆಡಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್‌ ದತ್‌ ಕೂಡ ನಟಿಸುತ್ತಿದ್ದಾರೆ. ಕಳೆದು ಎರಡು ಮೂರು ಗಂಟೆಗಳಿಂದ ನಟ ಸಂಜಯ್ ದತ್‌ಗೆ ಗಂಭೀರ ಗಾಯವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಪೋಸ್ಟ್‌ ಹಾಕುವ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. 

ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದ ಶೂಟಿಂಗ್‌ ವೇಳೆ ಬಾಲಿವುಡ್‌ ನಟ ಸಂಜಯ್‌ ದತ್‌ ಅವರಿಗೆ ಗಾಯವಾಗಿದೆ. ಬೆಂಗಳೂರಿನ ಹೊರವಲಯದಲ್ಲಿ ಶೂಟಿಂಗ್‌ ನಡೆಯುತ್ತಿತ್ತು. ಆ್ಯಕ್ಷನ್‌ ಸೀಕ್ವೆನ್ಸ್‌ಗಾಗಿ ಬಾಂಬ್‌ ಸ್ಫೋಟಿಸಲಾಗಿದೆ. ಈ ವೇಳೆ ಗಾಜಿನ ಚೂರು ಸಂಜಯ್‌ ದತ್‌ ಅವರ ಕಣ್ಣಿನ ಭಾಗಕ್ಕೆ ಚುಚ್ಚಿದೆ. ಕೂಡಲೇ ಸಂಜಯ್‌ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ ಎಂದು ಚಿತ್ರತಂಡದಲ್ಲಿರುವ ದಶಾವರ ಚಂದ್ರು ತಿಳಿಸಿದ್ದಾರೆ. ಬಳಿಕ ಸಂಜಯ್‌ ಮುಂಬೈಗೆ ತೆರಳಿದ್ದಾರೆ. ಅವರ ಭಾಗದ ಮುಂದಿನ ಚಿತ್ರೀಕರಣ ಮೇ ತಿಂಗಳಲ್ಲಿ ನಡೆಯಲಿದ್ದು, ಸದ್ಯ ಧ್ರುವ ಸರ್ಜಾ ಭಾಗದ ಶೂಟಿಂಗ್‌ ನಡೆಯುತ್ತಿದೆ.

ಸಂಜಯ್ ಸ್ಪಷ್ಟನೆ: 

'ನನಗೆ ಪೆಟ್ಟಾಗಿದೆ ಎಂದು ಎಲ್ಲೆಡೆ ಹರಿದಾಡುತ್ತಿದೆ. ಹರಿದಾಡುತ್ತಿರುವುದು ಸುಳ್ಳು ಸುದ್ದಿ ಸತ್ಯವಿಲ್ಲ. ದೇವರ ದಯೇ ನಾನು ಆರೋಗ್ಯವಾಗಿರುವೆ ಕ್ಷೇಮವಾಗಿರುವೆ. ನಾನು ಕೆಡಿ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿರುವೆ. ನನ್ನ ದೃಶ್ಯ ಚಿತ್ರೀಕರಣದ ವೇಳೆ ಕೆಡಿ ಸಿನಿಮಾ ತುಂಬಾ ಮುಂಜಾಗೃತ ಕ್ರಮಗಳನ್ನು ತೆಗೆದುಕೊಂಡು ನಡೆಸುತ್ತಿದ್ದಾರೆ. ಪ್ರೀತಿ ತೋರಿಸಿ ವಿಚಾರಿಸಿಕೊಂಡ ಪ್ರತಿಯೊಬ್ಬರಿಗೂ ಧನ್ಯವಾದಗಳು' ಎಂದು ಸಂಜಯ್ ದತ್ ಬರೆದುಕೊಂಡಿದ್ದಾರೆ. 

Sanjay Dutt: ತಮಿಳು ಸಿನಿಮಾದಲ್ಲಿ ಮತ್ತೆ ವಿಲನ್ ಆಗಲು 10 ಕೋಟಿ ಡಿಮ್ಯಾಂಡ್ ಮಾಡಿದ ದತ್?

ಕೆಜಿಎಫ್ ಚಾಪ್ಟರ್ 2ರಲ್ಲಿ ಅಧೀರನಾಗಿ ಕಾಣಿಸಿಕೊಂಡ ನಂತರ ಸೌತ್ ಸಿನಿಮಾ ರಸಿಕರಿಗೆ ಸಂಜಯ್ ಬೇಗ ಕನೆಕ್ಟ್‌ ಅಗುತ್ತಾರೆ ಹೀಗಾಗಿ ಕೆಡಿ ಸಿನಿಮಾಗೂ ಅವರನ್ನು ಆಯ್ಕೆ ಮಾಡಿದ್ದಾರೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಇದಾದ ನಂತರ ದಿ ಗುಡ್ ಮಹಾರಾಜಾ, ಚುಡ್‌ಚಾಡಿ, ಲಿಯೋ ಮತ್ತು ಬಾಪು ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. 

ಕೆಡಿ ಸಿನಿಮಾದಲ್ಲಿ ಸಂಜಯ್ ದತ್ ಮಾತ್ರವಲ್ಲ ಶಿಲ್ಪಾ ಶೆಟ್ಟಿ ಕೂಡ ಅಭಿನಯಿಸುತ್ತಿದ್ದಾರೆ. ಕೆಡಿ ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ, ಸತ್ಯವತಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಿಲ್ಪಾ ಶೆಟ್ಟಿ ರೆಟ್ರೋ ಶೈಲಿಯಲ್ಲಿ ಮಿಂಚಿದ್ದಾರೆ. ಬಳಿ ಬಣ್ಣದ ಕೆಂಪು ಚುಕ್ಕಿಗಳಿರುವ ಸೀರೆಯಲ್ಲಿ ಶಿಲ್ಪಾ ಕಾಣಿಸಿಕೊಂಡಿದ್ದಾರೆ. ಉದ್ದ ಕೂದಲು, ಕನ್ನಡಕ ಧರಿಸಿದ್ದಾರೆ. ಬ್ಯಾಗ್ರೌಂಡ್‌ನಲ್ಲಿ ದುಬಾರಿ ಕಾರು ಇದೆ. ಶಿಲ್ಪಾ ಶೆಟ್ಟಿ ಬಳಕುವ ಲುಕ್ ಅಭಿಮಾನಿಗಳ ಹೃದಯ ಗೆದ್ದಿದೆ. ಈ ಪೋಸ್ಟರ್ ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಫೋಸ್ಟರ್ ಹಂಚಿಕೊಂಡು ಯುಗಾದಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಕೆಡಿ ಬಗ್ಗೆ ಬರೆದುಕೊಂಡಿದ್ದಾರೆ. 

ತೂಕ ಇಳಿಸಿಕೊಂಡ ಧ್ರುವ:

 'ಕೆಡಿ ಯುದ್ಧ ಭೂಮಿಗೆ ಎಂಟರ್‌ ಆಗಲು ಧ್ರುವ ಸರ್ಜಾ ರೆಡಿಯಾಗಿದ್ದಾರೆ. 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಯುದ್ಧವು ನಾಯಕನನ್ನು ಬಿಡಿಸಲು ಸಿದ್ಧವಾಗಿದೆ' ಎಂದು ಪ್ರೇಮ್ ಬರೆದುಕೊಂಡಿದ್ದಾರೆ. ಕೆಡಿ ಸಿನಿಮಾ ಅನೌನ್ಸ್ ಮಾಡಿದ ಆರಂಭದಲ್ಲಿ ಸೆರೆ ಹಿಡಿದ ಫೋಟೋ ಮತ್ತು ಈಗ ತೂಕ ಇಳಿಸಿಕೊಂಡ ನಂತರ ಧ್ರುವ ಹೇಗೆ ಕಾಣಿಸಿಕೊಳ್ಳುತ್ತಿದ್ದಾರೆಂದು ಪ್ರೇಮ್ ಅಪ್ಲೋಡ್‌ ಮಾಡಿದ್ದಾರೆ.