ರೋಡಲ್ಲಿ ಆಟೋ ಓಡಿಸುತ್ತಿರುವ ರಾಧಿಕಾ ಕುಮಾರಸ್ವಾಮಿ ನೋಡಿ ಕಂಗಾಲಾದ ಜನರು!
ರಾಧಿಕಾ ಕುಮಾರಸ್ವಾಮಿ ಅವರಿಗೆ ಚಿತ್ರದ ಯಾವುದೇ ಸೀಕ್ರೆಟ್ ಹೇಳಬೇಡಿ ಎಂದಿದ್ದಾರಂತೆ ನಿರ್ದೇಶಕರಾದ ಶ್ರೀಜೈ. ಹೀಗಾಗಿ ನಟಿ ರಾಧಿಕಾ ಅವರು ತಾವು ಭಾಗಿಯಾದ ಎಲ್ಲಾ ಇಂಟರ್‌ವ್ಯೂಗಳಲ್ಲಿ, ಭೈರಾದೇವಿ ಚಿತ್ರದಲ್ಲಿ ತಾವು ಕಾಳಿ ಹಾಗು ಅಘೋರಿ ಪಾತ್ರ ಮಾಡಿದ್ದಾಗಿ ಮಾತ್ರ ಹೇಳಿಕೊಂಡಿದ್ದಾರೆ. ಜೊತೆಗೆ, ತಾವು ಸಿನಿಮಾರಂಗಕ್ಕೆ ಕಾಲಿಟ್ಟ ಘಳಿಗೆಯಿಂದ..
ರಾಧಿಕಾ ಕುಮಾರಸ್ವಾಮಿ (Radhika Kumaraswamy) ಮತ್ತೆ ಮತ್ತೆ ಸುದ್ದಿಯಾಗುತ್ತಿದ್ದಾರೆ. ಕಾರಣ, ತಮ್ಮ 'ಭೈರಾದೇವಿ' ಚಿತ್ರದ ಪ್ರಮೋಶನ್ ಸಲುವಾಗಿ ಇತ್ತೀಚೆಗಷ್ಟೇ ಎಲ್ಲಾ ಚಾನೆಲ್‌ಗಳ ಸಂದರ್ಶನಗಳಲ್ಲಿ ಪಾಲ್ಗೊಂಡಿದ್ದಾರೆ ರಾಧಿಕಾ. ರಾಧಿಕಾ ಕುಮಾರಸ್ವಾಮಿ ನಟನೆಯ ಭೈರಾದೇವಿ ಚಿತ್ರವು ಮುಂದಿನ ತಿಂಗಳು 3ಕ್ಕೆ (03 October 2024) ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಸಲುವಾಗಿ ರಾಧಿಕಾ ಅವರು ಬರೋಬ್ಬರಿ ಎರಡು ವರ್ಷಗಳಷ್ಟು ಸಮಯವನ್ನು ಮೀಸಲಿಟ್ಟಿದ್ದರು.
ಹೆಣ್ಣು ಅಘೋರಿಗಳು ಹೇಗಿರುತ್ತಾರೆ? ಅವರ ಜೀವನ ಶೈಲಿ ಏನು, ಏನೆಲ್ಲಾ ಮಾಡುತ್ತಾರೆ. ಎಂತಹ ಶಕ್ತಿಯನ್ನು ಅವರು ಗಳಿಸಿಕೊಂಡಿರುತ್ತಾರೆ? ಈ ಎಲ್ಲ ಅಂಶಗಳನ್ನು ರಾಧಿಕಾ ಕುಮಾರಸ್ವಾಮಿ ನಟನೆಯ ಮುಂಬರುವ ಭೈರಾದೇವಿ ಚಿತ್ರದಲ್ಲಿ ಹೇಳಲಾಗಿದೆ ಎನ್ನಲಾಗಿದೆ. ಈ ಚಿತ್ರದಲ್ಲಿ ರಾಧಿಕಾ ಕಾಳಿ ದೇವಿಯ ಪಾತ್ರವನ್ನೂ ಸಹ ಮಾಡಿದ್ದು, ಅದೆಷ್ಟು ಶೇಡ್‌ಗಳಲ್ಲಿ ನಟಿಸಿದ್ದಾರೆ, ಯಾಕೆ ಅಘೋರಿಯು ಕಾಳಿಯಾಗಿದ್ದು, ಮುಂತಾದ ಸಂಗತಿಗಳನ್ನು ತಮ್ಮ ಸಂದರ್ಶನಗಳಲ್ಲಿ ನಟಿ ರಾಧಿಕಾ ಬಹಿರಂಗ ಪಡಿಸಿಲ್ಲ.
ಕಾರಣ, ಚಿತ್ರದ ಯಾವುದೇ ಸೀಕ್ರೆಟ್ ಹೇಳಬೇಡಿ ಎಂದಿದ್ದಾರಂತೆ ನಿರ್ದೇಶಕರಾದ ಶ್ರೀಜೈ. ಹೀಗಾಗಿ ನಟಿ ರಾಧಿಕಾ ಅವರು ತಾವು ಭಾಗಿಯಾದ ಎಲ್ಲಾ ಇಂಟರ್‌ವ್ಯೂಗಳಲ್ಲಿ, ಭೈರಾದೇವಿ ಚಿತ್ರದಲ್ಲಿ ತಾವು ಕಾಳಿ ಹಾಗು ಅಘೋರಿ ಪಾತ್ರ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ, ತಾವು ಸಿನಿಮಾರಂಗಕ್ಕೆ ಕಾಲಿಟ್ಟ ಘಳಿಗೆಯಿಂದ ಇಲ್ಲಿಯ ತನಕ ನಡೆದುಬಂದ ಹಾದಿಯಲ್ಲಿ ಘಟಿಸಿದ ಅನೇಕ ಘಟನೆಗಳನ್ನು ಅವರು ಮೆಲುಕು ಹಾಕಿದ್ದಾರೆ. ಜೊತೆಗೆ, ತಾವು ದೇವರು-ದೆವ್ವ ಎರಡನ್ನೂ ನಂಬುವುದಾಗಿ ಹೇಳಿದ್ದಾರೆ.
ಇನ್ನು, ನಟಿ ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಭೈರಾದೇವಿ ಚಿತ್ರದ ಪ್ರಚಾರ ಕಾರ್ಯಕ್ಕೆ ಸಂದರ್ಶನಗಳ ಹೊರತಾಗಿಯೂ ಹಲವು ದಾರಿಗಳನ್ನು ಕಂಡುಕೊಂಡಿದ್ದಾರೆ. ಇತ್ತೀಚೆಗಷ್ಟೇ ಅವರು ತಮ್ಮ ಮನೆಯ ಮುಂದೆ ಆಟೋ ಒಂದನ್ನು ಓಡಿಸಿ ಭೈರಾದೇವಿ ಪ್ರಮೋಶನ್ ಮಾಡಿದ್ದಾರೆ. ರಾಧಿಕಾ ಆಟೋ ಓಡಿಸುವ ವೀಡಿಯೋ ಸಹಜವಾಗಿಯೇ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಚಿತ್ರವು ಬಿಗ್ ಬಜೆಟ್ ಹೊಂದಿದ್ದು, ಕನ್ನಡ, ತೆಲುಗು ಹಾಗು ತಮಿಳು ಭಾಷೆಗಳಲ್ಲಿ ಬಿಡುಗಡೆ ಕಾಣಲಿದೆ.
ಈ ಚಿತ್ರದಲ್ಲಿ ನಟ ರಮೇಶ್ ಅರವಿಂದ್ ಅವರು ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ನಟಿಸಿದ್ದು, ಹೆಚ್ಚಿನ ಕುತೂಹಲ ಸೃಷ್ಟಿಸಿದೆ, ಕಾರಣ, ಅಘೋರಿ ಸಬ್ಜೆಕ್ಟ್ ಹೊಂದಿರುವ ಚಿತ್ರದಲ್ಲಿ ಪೊಲೀಸ್ ಪಾತ್ರಕ್ಕೆ ಅದೇನು ಕೆಲಸ ಇರಬಹುದು ಎಂಬ ಕುತೂಹಲ ಎಲ್ಲರಲ್ಲಿ ಮನೆಮಾಡಿದೆ. ಕ್ಯೂರಿಯಾಸಿಟಿಗೆ ಉತ್ತರ ಇನ್ನೇನು ಕೆಲವೇ ದಿನಗಳಲ್ಲಿ ಸಿಗಲಿದೆ, ಅಲ್ಲಿಯವರೆಗೆ ಕಾಯಬೇಕಷ್ಟೇ. ಒಟ್ಟಿನಲ್ಲಿ, ಹಲವು ವರ್ಷಗಳ ಬಳಿಕ ನಟಿ ರಾಧಿಕಾ ಕುಮಾರಸ್ವಾಮಿ ಅಭಿಮಾನಿಗಳಿಗೆ ಭೈರಾದೇವಿ ಮೂಲಕ ರಾಧಿಕಾ ದರ್ಶನ ಸಿಗಲಿದೆ!