Asianet Suvarna News Asianet Suvarna News

ಹಿರಿಯ ನಟ ಉಮೇಶ್ ಹೆಗ್ಡೆ ಇನ್ನಿಲ್ಲ

ಹೃದಯಾಘಾತದಿಂದ ಕೊನೆ ಉಸಿರೆಳೆದ ಕನ್ನಡ ಚಿತ್ರರಂಗ ಮತ್ತು ಕಿರುತೆರೆ ಹಿರಿಯ ನಟ ಉಮೇಶ್ ಹೆಗ್ಡೆ (71). 

Sandalwood Veteran actor Umesh hegde passes away at 71 vcs
Author
Bangalore, First Published Oct 11, 2021, 2:20 PM IST
  • Facebook
  • Twitter
  • Whatsapp

ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ನಟಿಸಿರುವ ಹಿರಿಯ ಕಲಾವಿದ ಉಮೇಶ್ ಹೆಗ್ಡೆ (Umesh Hegde) ಅಕ್ಟೋಬರ್ 10 ಹೃದಯಘಾತದಿಂದ (Heartattack) ಆಸ್ಪತ್ರೆಗೆ ದಾಖಲಾದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಉಮೇಶ್ ಅವರಿಗೆ ತಕ್ಷಣವೇ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು (October 11th) ಬೆಳಗ್ಗಿನ ಜಾವ ಇಹಲೋಕ ತ್ಯಜಿಸಿದ್ದಾರೆ. ಉಮೇಶ್ ಅವರು ಪಾರ್ಥೀವ ಶರೀರವನ್ನು ಅವರ ನಿವಾದಸಲ್ಲಿ ಇಡಲಾಗಿದೆ. ಅಂತಿಮ ದರ್ಶನ ಪಡೆದ ನಂತರ ಕುಟುಂಬಸ್ಥರು ಸಂಪ್ರದಾಯದ ಪ್ರಕಾರ ವಿಧಿವಿಧಾನಗಳನ್ನು ನಿರವೇರಿಸಲಿದ್ದಾರೆ. 

RIP Nedumudi Venu: ಮಾಲಿವುಡ್ ಹಿರಿಯ ನಟ ನೆಡುಮುಡಿ ವೇಣು ಇನ್ನಿಲ್ಲ

ಕನ್ನಡ ಚಿತ್ರರಂಗದವರು ಹಿರಿಯ ನಟನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಉಮೇಶ್‌ ಇನ್ನಿಲ್ಲ ಎಂಬ ವಿಚಾರ ಅನೇಕರಿಗೆ ಶಾಕ್ ನೀಡಿದೆ.  ನೂರಾರು ಧಾರಾವಾಹಿಗಳು, ಹತ್ತಾರೂ ಸಿನಿಮಾಗಳಲ್ಲಿ ನಟಿಸಿರುವ ಉಮೇಶ್ ಅವರು ರಂಗಭೂಮಿಯ (Theater Artist) ಕಲಾವಿದನಾಗಿದ್ದರು. 71 ವರ್ಷದ ಉಮೇಶ್ ಅವರ ಆತ್ಮಕ್ಕೆ ಶಾಂತಿ (RIP) ಸಿಗಲಿ ಎಂದು ಪ್ರಾರ್ಥಿಸೋಣ. 

ಕೆಲವು ದಿನಗಳ ಹಿಂದೆ ಹಿರಿಯ ನಟ ಸತ್ಯಜೀತ್ (Sathyajith) ಅವರು ಗ್ಯಾಂಗ್ರಿನ್ ಮತ್ತು ಹಾರ್ಟ್‌ ಸ್ಟ್ರೋಕ್‌ನಿಂದ (Heart Stroke) ಕೊನೆ ಉಸಿರೆಳೆದ್ದರು. ಬೆಂಗಳೂರಿನಲ್ಲಿ ಇಸ್ಲಾಂ ಧರ್ಮದಂತೆ ಅಂತಿಮ ಕಾರ್ಯಗಳನ್ನು ನೆರವೇರಿಸಲಾಗಿತ್ತು.

Follow Us:
Download App:
  • android
  • ios