Asianet Suvarna News Asianet Suvarna News

Shivaram Funeral: ಪೊಲೀಸ್​ ಗೌರವಗಳೊಂದಿಗೆ ಶಿವರಾಂ ಅಂತ್ಯಕ್ರಿಯೆ, ಯಾವಾಗ?ಎಲ್ಲಿ? ಇಲ್ಲಿದೆ ಮಾಹಿತಿ

* ಸ್ಯಾಂಡಲ್‌ವುಡ್ ಹಿರಿಯ ನಟ ಶಿವರಾಂ  ನಿಧನ
* ಪೊಲೀಸ್​ ಗೌರವಗಳೊಂದಿಗೆ ಶಿವರಾಂ ಅಂತ್ಯಕ್ರಿಯೆ
* ಬಸವರಾಜ ಬೊಮ್ಮಾಮಿ ಘೋಷಣೆ

Sandalwood veteran actor shivaram funeral honor with police respect Says Bommai rbj
Author
Bengaluru, First Published Dec 4, 2021, 11:51 PM IST

ಬೆಂಗಳೂರು, (ಡಿ.04):  ಹಿರಿಯ ನಟ ಶಿವರಾಂ (Shivaram)  ಅವರು ಇಂದು(ಡಿ.04) ನಿಧನರಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಸೇರಿದಂತೆ ಅನೇಕ ರಾಜಕೀಯ ಗಣ್ಯರು, ಚಿತ್ರರಂಗದ ಕಲಾವಿದರು ಕಂಬನಿ ಮಿಡಿದಿದ್ದಾರೆ

ಅನಾರೋಗ್ಯದಿಂದ ನಿಧನರಾದ ಹಿರಿಯ ಕಲಾವಿದ ಶಿವರಾಂ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Sandalwood Actor Shivaram Passes Away : ಹಿರಿಯ ಕನ್ನಡ ನಟ ಶಿವರಾಂ ಇನ್ನಿಲ್ಲ

ಶಿವರಾಂ ಅವರ ಅಂತಿಮ ದರ್ಶನ ಪಡೆದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಕಲಾಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಕಲಾರಂಗಕ್ಕೆ ಅವರ ಅಗಲಿಕೆ ತುಂಬಲಾರದ ನಷ್ಟ. ಅವರು ಮಾಡಿದ ಎಲ್ಲ ಪಾತ್ರಗಳನ್ನು ನೈಜವಾಗಿ ಅಭಿನಯಿಸಿ, ಜೀವ ತುಂಬಿದ್ದರು. ಅವರು ನಟಿಸಿದ ಚಿತ್ರಗಳು ಅತ್ಯಂತ ಯಶಸ್ವಿಯಾಗಿವೆ. ಮುಖ್ಯ ನಟರ ಸರಿಸಮಾನವಾಗಿ ನಟನೆ ಮಾಡುತ್ತಿದ್ದರು ಎಂದರು.

ಉಪಾಸನೆಯಂತಹ ಚಿತ್ರಗಳ ನಿರ್ಮಾಪಕರಾಗಿ ರಾಷ್ಟ್ರಪ್ರಶಸ್ತಿಯನ್ನೂ ಪಡೆದಿದ್ದರು. ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್ ಸೇರಿದಂತೆ ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿ ಅವರ ಚಿತ್ರ ಗಳಲ್ಲಿ ನಟಿಸಿದ್ದರು.

ಅವರ ಬದುಕು ಚಿತ್ರರಂಗಕ್ಕೆ ಸೀಮಿತವಾಗಿರಲಿಲ್ಲ. ಆಧ್ಯಾತ್ಮಿಕ ಚಿಂತನೆ ಹಾಗೂ ದೈವಭಕ್ತಿ ಅವರಲ್ಲಿತ್ತು. ಸದಾ ಹಸನ್ಮುಖಿಯಾಗಿ ಎಲ್ಲರಿಗೂ ಒಳ್ಳೆಯದನ್ನು ಬಯಸುವ ಸಹೃದಯಿ. ಇತ್ತೀಚಿನ ದಿನಗಳಲ್ಲಿ ಅವರನ್ನು ಕಂಡರೆ ಗುರುಗಳನ್ನು ಕಂಡಂತೆ ಭಾಸವಾಗುತ್ತಿತ್ತು. ಹೆಚ್ಚಿನ ಕಾಲ ನಮ್ಮೊಂದಿಗೆ ಇದ್ದು, ಅವರು ನಮಗೆ ಮಾರ್ಗದರ್ಶನ ಮಾಡಬೇಕಿತ್ತು. ಚಿತ್ರೋದ್ಯಮದಲ್ಲಿ ಅಪಾರ ಗೌರವ ಗಳಿಸಿ, ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದರು. ಅವರ ಅಗಲಿಕೆಯಿಂದ ಕನ್ನಡ ನಾಡು ಹಾಗೂ ಚಿತ್ರರಂಗ ಬಡವಾಗಿದೆ ಎಂದು ತಿಳಿಸಿದರು.

ಚಿತ್ರರಂಗದ ಹಿರಿಯ ನಟ ಎಸ್.ಶಿವರಾಂ (S Shivaram) ಅವರ ಹೆಸರನ್ನು ಚಿರಸ್ಥಾಯಿಯಾಗಿಸುವ ಕೆಲಸವನ್ನು ಮಾಡುತ್ತೇವೆ ಎಂದು ಸಚಿವ ಆರ್.ಅಶೋಕ್ (R Ashok) ಹೇಳಿದ್ದಾರೆ.

 ಶಿವರಾಂ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಅವರು ಮಾತನಾಡಿದರು. ಶಿವರಾಂ ಅವರ ನಿಧನ ಕರ್ನಾಟಕಕ್ಕೆ ಶೋಕ ತಂದೊಡ್ಡಿದ್ದು, ನಮ್ಮವರನ್ನು ಕಳೆದುಕೊಂಡಿದ್ದರಿಂದ ನಮಗೆ ನೋವಾಗಿದೆ. ಅವರ ಹೆಸರು ಚಿರಸ್ಥಾಯಿಯಾಗಿರುವಂತೆ ಕೆಲಸ ಮಾಡುತ್ತೇವೆ. ನನ್ನ ಕ್ಷೇತ್ರದಲ್ಲಿ ಅವರ ನೆನಪು ಉಳಿಸುವ ಕೆಲಸ ಮಾಡುತ್ತೇವೆ. ಯಾವುದಾದರೂ ಕಟ್ಟಡ, ರಸ್ತೆಗೆ ಶಿವರಾಂ ಹೆಸರಿಡುತ್ತೇವೆ ಭರವಸೆ ನೀಡಿದರು.

ನಾಳೆ 11ಕ್ಕೆ ಅಂತ್ಯಕ್ರಿಯೆ
ಶಿವರಾಮ್ ಪುತ್ರ ಲಕ್ಷ್ಮೀಶ್ ಅಂತ್ಯಕ್ರಿಯೆಯ ಕುರಿತು ಮಾಹಿತಿ ನೀಡಿದ್ದಾರೆ. ‘‘ಬೆಳ್ಳಗ್ಗೆ ರವೀಂದ್ರ ಕಲಾಕ್ಷೇತ್ರಕ್ಕೆ ಪಾರ್ಥಿವ ಶರೀರವನ್ನು ರವಾನಿಸಲಾಗುವುದು. 7.30- 10 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶವಿರಲಿದೆ. ನಂತರ 11 ಗಂಟೆಗೆ ಬನಶಂಕರಿಯ ಚಿತಗಾರದಲ್ಲಿ ಅಂತಿಮ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗುತ್ತದೆ’’ ಎಂದು ಅವರು ಹೇಳಿದ್ದಾರೆ.

Follow Us:
Download App:
  • android
  • ios