ಅದು ಪ್ರಜ್ವಲ್‌ ದೇವರಾಜ್‌ ನಟನೆಯ ‘ಅರ್ಜುನ್‌ ಗೌಡ’ ಚಿತ್ರದ ಪ್ರೀ ರಿಲೀಸ್‌ ಈವೆಂಟ್‌. ತುಂಬಾ ನಂಬಿಕೆ ಮತ್ತು ಕನಸುಗಳನ್ನು ಕಟ್ಟಿಕೊಂಡು ರಾಮು ಅವರು ನಿರ್ಮಿಸಿರುವ ಸಿನಿಮಾ ಇದು. ಆದರೆ, ಸಿನಿಮಾ ತೆರೆಗೆ ಬರುವ ಮುನ್ನವೇ ರಾಮು ಅವರು ನಿಧನರಾದರು. ಅವರ ಅನುಪಸ್ಥಿತಿಯಲ್ಲಿ ಮಾಲಾಶ್ರೀ ಅವರು ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.

ಅದು ಪ್ರಜ್ವಲ್‌ ದೇವರಾಜ್‌ ನಟನೆಯ ‘ಅರ್ಜುನ್‌ ಗೌಡ’ (Arjun Gowda) ಚಿತ್ರದ ಪ್ರೀ ರಿಲೀಸ್‌ ಈವೆಂಟ್‌. ತುಂಬಾ ನಂಬಿಕೆ ಮತ್ತು ಕನಸುಗಳನ್ನು ಕಟ್ಟಿಕೊಂಡು ರಾಮು (Ramu) ಅವರು ನಿರ್ಮಿಸಿರುವ ಸಿನಿಮಾ ಇದು. ಆದರೆ, ಸಿನಿಮಾ ತೆರೆಗೆ ಬರುವ ಮುನ್ನವೇ ರಾಮು ಅವರು ನಿಧನರಾದರು. ಅವರ ಅನುಪಸ್ಥಿತಿಯಲ್ಲಿ ಮಾಲಾಶ್ರೀ (Malashree) ಅವರು ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಬಿಡುಗಡೆಯ ಹಿನ್ನೆಲೆಯಲ್ಲಿ ನಡೆದ ಚಿತ್ರದ ಪ್ರೀ ರಿಲೀಸ್‌ ಈವೆಂಟ್‌ಗೆ ನಟರಾದ ವಿ.ರವಿಚಂದ್ರನ್, ಶಿವರಾಜ್‌ಕುಮಾರ್‌, ಉಪೇಂದ್ರ, ಗಣೇಶ್‌, ಡಾರ್ಲಿಂಗ್‌ ಕೃಷ್ಣ, ಹಿರಿಯ ನಟ ದೇವರಾಜ್‌, ಚಿತ್ರದ ನಾಯಕ ಪ್ರಜ್ವಲ್‌ ದೇವರಾಜ್‌, ನಾಯಕಿ ಪ್ರಿಯಾಂಕ ತಿಮ್ಮೇಶ್‌, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ಸಾಧು ಕೋಕಿಲಾ ಸೇರಿದಂತೆ ಚಿತ್ರರಂಗದ ಹಲವರು ಆಗಮಿಸಿದ್ದರು.

ಶುಭ ಕೋರಿದ ತಾರೆಗಳು
ನಟರಾದ ಯಶ್‌, ಸುದೀಪ್‌ ಹಾಗೂ ಸಾಯಿಕುಮಾರ್‌ ಅವರು ರಾಮು ಇಲ್ಲದ ಹೊತ್ತಿನಲ್ಲಿ, ಅವರ ನಿರ್ಮಾಣದ ‘ಅರ್ಜುನ್‌ ಗೌಡ’ ಚಿತ್ರಕ್ಕೆ ಶುಭ ಕೋರಿದ ವಿಡಿಯೋಗಳನ್ನು ಪ್ರದರ್ಶನ ಮಾಡಲಾಯಿತು. ‘ನಾನು ರಾಮು ಅವರ ಬ್ಯಾನರ್‌ನಲ್ಲಿ ಎರಡು ಚಿತ್ರಗಳಲ್ಲಿ ನಟಿಸಿದ್ದೇನೆ. ತುಂಬಾ ದೊಡ್ಡ ಬ್ಯಾನರ್‌. ಅವರ ಬಹು ದೊಡ್ಡ ಕನಸಿನ ಸಿನಿಮಾ ಅರ್ಜುನ್‌ ಗೌಡ ತೆರೆಗೆ ಬರುತ್ತಿದೆ. ಇದು ರೀಮೆಕ್‌ ಸಿನಿಮಾ ಅಂದುಕೊಂಡಿದ್ದೆ. ಆದರೆ, ಇದು ಸ್ವಮೇಕ್‌ ಅಂತ ಗೊತ್ತಾಗಿ ಖುಷಿ ಆಯಿತು. ಈ ಚಿತ್ರಕ್ಕೆ ಯಶಸ್ಸು ಸಿಗಲಿ’ ಎಂದು ಸುದೀಪ್‌ ಹೇಳಿದರು. ಹಾಗೆ ಯಶ್‌ ಮಾತನಾಡಿ ‘ನಾವೆಲ್ಲ ರಾಮು ಫಿಲಮ್ಸ್‌ ಬ್ಯಾನರ್‌ನಲ್ಲಿ ಬರುತ್ತಿದ್ದ ಚಿತ್ರಗಳನ್ನು ನೋಡಿ ಬೆಳೆದವರು. ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ ನಿರ್ಮಾಣ ಸಂಸ್ಥೆ. ಈಗ ಅದೇ ಬ್ಯಾನರ್‌ನಲ್ಲಿ ಮೂಡಿ ಬಂದಿರುವ ಅರ್ಜುನ್‌ ಗೌಡ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಗಲಿ’ ಎಂದು ಹಾರೈಸಿದರು.

Arjun Gowda: ಜಯಣ್ಣ ಕೇಳು ಭೋಗಣ್ಣ ಹಾಡನ್ನು ರಿಲೀಸ್ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ ಕಿಚ್ಚ ಸುದೀಪ್

ನಾನು ನಿರ್ಮಾಪಕನನ್ನಾಗಿಸಿದ ನಟಿ
ರಾಕ್‌ಲೈನ್‌ ವೆಂಕಟೇಶ್‌ ಅವರು ವೇದಿಕೆ ಮೇಲೆ ಬಂದು ಹಳೆಯದನ್ನು ನೆನಪಿಸಿಕೊಂಡರು. ‘ದಿನಕ್ಕೆ ನಾಲ್ಕೈದು ಸಿನಿಮಾಗಳಲ್ಲಿ ನಟಿಸುತ್ತಿದ್ದ ದಿನಗಳಲ್ಲೇ ನನಗೆ ಆರು ದಿನ ಕಾಲ್‌ಶೀಟ್‌ ಕೊಟ್ಟು ಸಿನಿಮಾ ಮಾಡಿಕೊಟ್ಟವರು ಮಾಲಾಶ್ರೀ. ಅವರು ಅವತ್ತು ಮಾಡಿದ ಆ ಸಹಾಯ ನಾನು ಯಾವತ್ತು ಮರೆಯಲ್ಲ’ ಎಂದಿದ್ದು ರಾಕ್‌ಲೈನ್‌ ವೆಂಕಟೇಶ್‌. ಸಾಧು ಕೋಕಿಲಾ ವೇದಿಕೆ ಮೇಲೆ ಬಂದು ಕಣ್ಣೀರು ಹಾಕುತ್ತಲೇ ಮಾತನಾಡಿದರು. ಎಲ್ಲರ ಮಾತುಗಳಿಂದ, ರಾಮು ಅವರನ್ನು ನೆನಪು ಮಾಡಿಕೊಂಡಿದ್ದರಿಂದ ಭಾವುಕರಾಗಿದ್ದ ಮಾಲಾಶ್ರೀ ಅವರನ್ನು ವೇದಿಕೆಯಲ್ಲೇ ನಗಿಸಿದ್ದು ಕ್ರೇಜಿಸ್ಟಾರ್‌ ರವಿಚಂದ್ರನ್‌.



ಮಾಲಾಶ್ರೀ ಬೆಂಬಲಕ್ಕೆ ಸ್ಟಾರ್ಸ್ಸ್

ಎಲ್ಲರು ಯಾಕೆ ಇಷ್ಟುಡಲ್ಲಾಗಿದ್ದೀರಿ ಎನ್ನುತ್ತಲೇ ಮಾತು ಶುರು ಮಾಡಿದ ಡಾ ರವಿಚಂದ್ರ ವಿ ‘ಮಲ್ಲ 2 ಮಾಡೋಣ್ವ. ನಿನ್ನ ಮಗಳೇ ಹೀರೋಯಿನ್‌ ಆಗಲಿ. ಹೋಗ್ಲಿ ನಾನು ಬೇಡ ಅನಿಸಿದರೆ ನನ್ನ ಮಗನ ಜತೆ ಮಲ್ಲ 2 ಮಾಡಲಿ. ನಿನ್ನ ಮಗಳು ನಾಯಕಿ, ನನ್ನ ಮಗನೇ ಹೀರೋ’ ಎಂದ ಕ್ರೇಜಿಸ್ಟಾರ್‌ ಮಾತಿಗೆ ಮಾಲಾಶ್ರೀ ಬ್ಲಾಂಕ್‌ ಆದರು. ಎಲ್ಲರು ಜೋರಾಗಿ ನಕ್ಕರು. ಅಲ್ಲಿವರೆಗೂ ದುಃಖದಲ್ಲಿದ್ದ ಮಾಲಾಶ್ರೀ ಕೂಡ ನಕ್ಕರು. ಅದೇ ಖುಷಿ ಗಳಿಕೆಯಲ್ಲಿ ‘ನನ್ನನ್ನು ‘ಸಿಂಹದ ಮರಿ’ ಮಾಡಿದ್ದು ಇದೇ ರಾಮು ಫಿಲಮ್ಸ್‌ ಬ್ಯಾನರ್‌. ಈಗ ‘ಸಿಂಹ’ ಹೆಸರಿನಲ್ಲಿ ಸಿನಿಮಾ ಮಾಡಲು ಸಿದ್ಧ’ ಎಂದರು ಶಿವರಾಜ್‌ಕುಮಾರ್‌. ಇದರ ನಡುವೆ ವೇದಿಕೆಯ ಮೇಲೆ ‘ಓಂ 2’ ಕತೆ ಹೇಳಿದರು ನಿರ್ದೇಶಕ ಲಕ್ಕಿ ಶಂಕರ್‌. ಉಪೇಂದ್ರ ‘ಓಂ 2’ ಮಾಡಕ್ಕೂ ರೆಡಿ ಎಂದರು. ‘ಧೈರ್ಯವಾಗಿ ಇರಿ. ನಾವೆಲ್ಲ ನಿಮ್ಮ ಜತೆಗೆ ಇದ್ದೇವೆ. ರಾಮು ಅವರು ನಮ್ಮ ಎಲ್ಲರ ಜತೆಗೂ ಸಿನಿಮಾ ಮಾಡಿದವರು. ಈಗ ನಾವು ನಿಮ್ಮೊಂದಿಗೆ ಇದ್ದೇವೆ’ ಎಂದು ಎಲ್ಲ ನಟರು ಹೇಳುವ ಮೂಲಕ ‘ಅರ್ಜುನ್‌ ಗೌಡ’ ಚಿತ್ರಕ್ಕೆ ಶುಭ ಕೋರಿ ಮಾಲಾಶ್ರೀ ಅವರಿಗೆ ಧೈರ್ಯ ತುಂಬಿದರು.

Arjun Gowda: ಪ್ರಿಯಾಂಕ ತಿಮ್ಮೇಶ್ 'ಕನವರಿಕೆ'ಯಲ್ಲಿ ಏಕಾಂಗಿಯಾದ ಪ್ರಜ್ವಲ್ ದೇವರಾಜ್

ರಾಮು ಅವರು ತುಂಬಾ ಆಸೆಯಿಂದ ಇಷ್ಟಪಟ್ಟು ನಿರ್ಮಿಸಿರುವ ಸಿನಿಮಾ. ನಾನು ‘ಓಂ 2’ ಕತೆ ಹೇಳಕ್ಕೆ ಹೋಗಿದ್ದಾಗ ಅವರು ‘ಆ ಚಿತ್ರ ಆ ಮೇಲೆ ಮಾಡೋಣ, ಈಗ ಬೇರೆ ಸಿನಿಮಾ ಮಾಡೋಣ’ ಅಂದಾಗ ಹುಟ್ಟಿಕೊಂಡ ಸಿನಿಮಾ ‘ಅರ್ಜುನ್‌ ಗೌಡ’. ರಾಮು ಫಿಲಮ್ಸ್‌ನಲ್ಲಿ ನಾನು ಸಿನಿಮಾ ನಿರ್ದೇಶನ ಮಾಡಿದ್ದು ನನ್ನ ಭಾಗ್ಯ. ಈ ಚಿತ್ರಕ್ಕಾಗಿ ರಾಮು ಅವರ ಜತೆ ಸ್ನೇಹ ಬೆಳೆಸಿಕೊಂಡಿದ್ದು ನನ್ನ ಪುಣ್ಯ. ಗೌರಿ ಲಂಕೇಶ್‌ ಅವರ ಹತ್ಯೆಯ ಘಟನೆಯನ್ನು ಆಧರಿಸಿದ ಸಿನಿಮಾ ಇದು.
- ಲಕ್ಕಿ ಶಂಕರ್‌, ನಿರ್ದೇಶಕ