ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ, ವಿಜಯಪುರದ ಜ್ಞಾನಯೋಗಾಶ್ರಮದ ಗುರುಗಳಾದ ಸಿದ್ದೇಶ್ವರ ಸ್ವಾಮಿಗಳ ಲಿಂಗೈಕ್ಯರಾಗಿದ್ದಾರೆ. ಅಗಲಿದ ಚೇತನ ನೆನೆದು ಸ್ಯಾಂಡಲ್ ವುಡ್ ಮಂದಿ ಕಂಬನಿ ಮಿಡಿದಿದ್ದಾರೆ.

ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ, ವಿಜಯಪುರದ ಜ್ಞಾನಯೋಗಾಶ್ರಮದ ಗುರುಗಳಾದ ಸಿದ್ದೇಶ್ವರ ಸ್ವಾಮಿಗಳ ಲಿಂಗೈಕ್ಯರಾಗಿದ್ದಾರೆ. ಅಗಲಿದ ಚೇತನಕ್ಕೆ ರಾಜಕೀಯ, ಸಿನಿಮಾ ಸಿನಿಮಾ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಸಿನಿಮಾ ಮಂದಿ ಕೂಡ ಸಿದ್ದೇಶ್ವರ ಸ್ವಾಮಿಗಳ ಗುಣಗಾನ ಮಾಡಿ ಕಂಬನಿ ಮಿಡಿದಿದ್ದಾರೆ. ಮಹಾತ್ಮ ಮತ್ತೆ ಹುಟ್ಟಿ ಬರಲಿ ಎಂದು ಪ್ರಾರ್ಥಿಸಿದ್ದಾರೆ.

ಸಿದ್ದೇಶ್ವರ ಸ್ವಾಮಿ ಅಗಲಿಕೆಯ ಕುರಿತು ಟ್ವಿಟ್ ಮಾಡಿರುವ ನಟ ಧನಂಜಯ್, ‘ಶತಮಾನದ ಸಂತ, ನಾಡು ಕಂಡ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗೈಕ್ಯರಾಗಿರುವುದು ತುಂಬಾ ನೋವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಜ್ಞಾನದ ಬೆಳಕು ನಮ್ಮನ್ನು ಸದಾ ಕಾಯುತ್ತಿರಲಿ’ ಎಂದು ಬರೆದಿದ್ದಾರೆ.

Scroll to load tweet…

ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಕೂಡ ಸಿದ್ದೇಶ್ವರ ಸ್ವಾಮಿ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. 'ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ನಿಮ್ಮ ಅಗಲಿಕೆ ಸಹಿಸಲಾಸಾದ್ಯ. ನಮಗಾಗಿ ಇನ್ನಷ್ಟು ವರ್ಷ ಬದುಕಬೇಕಿತ್ತು ನೀವು. ನಿಮ್ಮ ಬದುಕೇ ನಮಗೊಂದು ಆದರ್ಶ. ಹೋಗಿ ಬನ್ನಿ ಗುರುವರ್ಯ' ಎಂದು ಹೇಳಿದ್ದಾರೆ.

Scroll to load tweet…

ನೆನಪಿರಲಿ ಪ್ರೇಮ್ ಟ್ವೀಟ್ ಮಾಡಿ, 'ಜ್ಞಾನಯೋಗಾಶ್ರಮದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ' ಎಂದು ಹೇಳಿದ್ದಾರೆ. 

ನಟಿ ರಮ್ಯಾ ಟ್ವೀಟ್ ಮಾಡಿ, ಶ್ರೀ ಶ್ರೀ ಶ್ರೀ ಸಿದ್ಧೇಶ್ವರ ಮಹಾ ಸ್ವಾಮಿಗಳು ಇಂದು ನಿಧನರಾಗಿದ್ದಾರೆ. ಆದರೆ ಅವರು ತಮ್ಮ ಸರಳತೆ, ತಾಳ್ಮೆ ಮತ್ತು ಸಹಾನುಭೂತಿಯ ಬೋಧನೆಗಳ ಮೂಲಕ ಅಮರರಾಗಿದ್ದಾರೆ. ನಿಸ್ವಾರ್ಥ ಪ್ರೀತಿ ಮತ್ತು ತ್ಯಾಗವನ್ನು ವಿನಮ್ರ ಮತ್ತು ಶಾಂತ ರೀತಿಯಲ್ಲಿ ಪ್ರೇರೇಪಿಸಿದ ವ್ಯಕ್ತಿ. ಅವರು ತಮ್ಮ ಮಾರ್ಗವನ್ನು ಅನುಸರಿಸುವವರಲ್ಲಿ ಜೀವಂತವಾಗಿರುತ್ತಾರೆ' ಎಂದು ಹೇಳಿದ್ದಾರೆ. ಇನ್ನು ಅನೇಕ ಕಲಾವಿದರು, ತಂತ್ರಜ್ಞರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

Scroll to load tweet…