ಬೇರೆ ಸಮುದಾಯದಲ್ಲಿ ಮದುವೆಯಾದ ಕನ್ನಡದ ನಟ-ನಟಿಯರು; ನೀವು ಗೆಸ್ ಮಾಡಿರಲ್ಲ ಅಲಾ..!

ಮದುವೆ ಅವರವರ ವೈಯಕ್ತಿಕ ವಿಷಯ. ಆದರೆ, ಸಮುದಾಯದವರನ್ನೇ ಅಥವಾ ಬೇರೆ ಸಮುದಾಯದವರನ್ನೇ ಮದುವೆ ಆಗಿ ಅಂತಾಗಲೀ, ಆಗಬೇಡಿ ಅಂತಾಗಲೀ ಯಾರೂ ಹೇಳಿಲ್ಲ, ಹೇಳೋದೂ ಇಲ್ಲ. ಇದು ಮಾಹಿತಿ ಅಷ್ಟೇ..

Sandalwood stars marriage with different communities; just have a look here

ಸ್ಯಾಂಡಲ್‌ವುಡ್ (Sandalwood) ಹಲವು ನಟನಟಿಯರು ತಮ್ಮ ಸಮುದಾಯದವರನ್ನು ಬಿಟ್ಟು ಬೇರೆ ಸಮುದಾಯದವರನ್ನು ಮದುವೆ ಆಗಿದ್ದಾರೆ. ಅದೇನೂ ಅಪರಾಧ ಅಲ್ಲ, ವಿವಾದಾತ್ಮಕ ವಿಷಯವೂ ಅಲ್ಲ. ಆದರೆ, ಅದೊಂದು ವಿಶೇಷತೆ ಎನ್ನಬಹುದು. ಹಾಗಿದ್ದರೆ ಯಾರು ಅವರು? ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಸಂಗತಿ ಎಷ್ಟರಮಟ್ಟಿಗೆ ನಿಜವೋ ಗೊತ್ತಿಲ್ಲ! ಆದರೆ, ಸುದ್ದಿ ಹರಿದಾಡುತ್ತಿರೋದಂತೂ ಸತ್ಯ.. ಹಾಗಿದ್ದರೆ ಇಲ್ಲೊಮ್ಮೆ ಕಣ್ಣು ಹಾಯಿಸಿಬಿಡಿ.. 

Sandalwood stars marriage with different communities; just have a look here

ಗೋಲ್ಡನ್ ಸ್ಟಾರ್ ಗಣೇಶ್ ಅವರಿಂದ ಶುರು ಮಾಡಿದರೆ, ಮೂಲತಃ ನೇಪಾಳಿ ನಟ ಗಣೇಶ್ ಎಟ್ಟಿ ಸಮುದಾಯದ ಶಿಲ್ಪಾ ಅವರನ್ನು ಮದುವೆ ಆಗಿದ್ದಾರೆ. ಒಕ್ಕಲಿಗ ಸಮುದಾಯದ ಪ್ರಜ್ವಲ್ ದೇವರಾಜ್ ಅವರು ಅಯ್ಯರ್ ಸಮುದಾಯದ ರಾಗಿಣಿ ಚಂದ್ರ ಅವರನ್ನು ಮದುವೆಯಾಗಿದ್ದಾರೆ. ಬ್ರಾಹ್ಮಣ ಸಮುದಾಯದ ನಟಿ ರಾಧಿಕಾ ಪಂಡಿತ್ ಅವರು ಒಕ್ಕಲಿಗ ಸಮುದಾಯದ ಯಶ್ ಅವರನ್ನು ಮದುವೆ ಆಗಿದ್ದಾರೆ. ಕುರುಬ ಸಮುದಾಯದ ನಟ ಧ್ರುವ ಸರ್ಜಾ ಅವರು ಬ್ರಾಹ್ಮಣ ಸಮುದಾಯದ ಪ್ರೇರಣಾ ಶಂಕರ್ ಅವರನ್ನು ಮದುವೆ ಆಗಿದ್ದಾರೆ. 

ಯಶ್‌ಗಿಂತ ಮೊದಲೇ ವಿಜಯ್‌ಗೆ ಟವೆಲ್ ಹಾಸಿದ KVN.. ದಳಪತಿ ಫಸ್ಟ್, ರಾಕಿಂಗ್‌ ನೆಕ್ಸ್ಟ್.. ಯಾಕೆ..!

ಇನ್ನು, ಈಡಿಗ ಸಮುದಾಯದ ಶ್ರೀ ಮುರಳಿ ಅವರು ರೆಡ್ಡಿ ಸಮುದಾಯದ ವಿದ್ಯಾ ಅವರನ್ನು ಮದುವೆಯಾಗಿದ್ದಾರೆ. ಒಕ್ಕಲಿಗ ಸಮುದಾಯದ ನಿರ್ದೇಶಕ ಪ್ರೇಮ್ ಅವರು ಲಿಂಗಾಯತ ಸಮುದಾಯದ ನಟಿ ರಕ್ಷಿತಾ ಅವರನ್ಜು ಮದುವೆ ಆಗಿದ್ದಾರೆ. ಬ್ರಾಹ್ಮಣ ಸಮುದಾಯದ ನಟ-ನಿರ್ದೇಶಕ ಉಪೇಂದ್ರ ಅವರು ಬೆಂಗಾಳಿ ಸಮುದಾಯದ ನಟಿ ಪ್ರಿಯಾಂಕಾರನ್ನು ಮದುವೆ ಆಗಿದ್ದಾರೆ. ಇಷ್ಟೇ ಜನರಲ್ಲ, ಇನ್ನೂ ಎಷ್ಟೋ ನಟನಟಿಯರು ಬೇರೆ ಸಮುದಾಯದವರನ್ನು ಮದುವೆ ಆಗಿದ್ದಾರೆ. 

ಮದುವೆ ಅವರವರ ವೈಯಕ್ತಿಕ ವಿಷಯ. ಆದರೆ, ಸಮುದಾಯದವರನ್ನೇ ಅಥವಾ ಬೇರೆ ಸಮುದಾಯದವರನ್ನೇ ಮದುವೆ ಆಗಿ ಅಂತಾಗಲೀ, ಆಗಬೇಡಿ ಅಂತಾಗಲೀ ಯಾರೂ ಹೇಳಿಲ್ಲ, ಹೇಳೋದೂ ಇಲ್ಲ. ಇದು ಮಾಹಿತಿ ಅಷ್ಟೇ. ಅದೇ ಸಮುದಾಯದಲ್ಲಿ ಮದುವೆ ಆಗಿದ್ದರೂ ಆಗದಿದ್ದರೂ ಎಲ್ಲರೂ ಚೆನ್ನಾಗಿಯೇ ಸಂಸಾರ ಮಾಡಿಕೊಂಡಿದ್ದಾರೆ. ಆದರೆ, ಹಲವರಿಗೆ ನಟನಟಿಯರ ಸಮುದಾಯದ ಬಗ್ಗೆ ಅತೀವ ಕುತೂಹಲ ಇರುತ್ತದೆ. ಈ ಕಾರಣಕ್ಕೆ ಇಲ್ಲ ಜಸ್ಟ್ ಮಾಹಿತಿ ನೀಡಲಾಗಿದೆ. ಇದು ಸೋಷಿಯಲ್ ಮೀಡಿಯಾ ಇನ್‌ಫಾರ್ಮೇಶನ್. ತಪ್ಪಿದ್ದರೂ ಇರಬಹುದು, ತಪ್ಪಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ, ಸರಿಯಿದ್ದರೆ ಸರಿ..!

ನಿವೇದಿತಾ ಗೌಡ ರೀಲ್ಸ್ ಮಾಡ್ತಾರೆ, ಆದರೆ ಕಾಮೆಂಟ್ಸ್ ನೋಡಲ್ವಂತೆ? ಅಲ್ಲೇ ಇರೋದು ಮ್ಯಾಟರ್..

Latest Videos
Follow Us:
Download App:
  • android
  • ios