ಮುಕುಂದನ 'ಯುಐ' ಸಿನಿಮಾ ಬಗ್ಗೆ 'ಮ್ಯಾಕ್ಸ್' ಮುರಾರಿ ಪೋಸ್ಟ್ ಮಾಡಿ ಹೇಳಿದ್ದೇನು?
ಯುಐ ಸಿನಿಮಾ ದಿನದಿನಕ್ಕೂ ಜನಮೆಚ್ಚುಗೆ ಗಳಿಸುತ್ತ, ಕಲೆಕ್ಷನ್ ವಿಷಯದಲ್ಲೂ ಹಿಂದೆ ಬೀಳದೇ ಮುನ್ನುಗ್ಗುತ್ತಿದೆ. ಇಡೀ ಪ್ರಪಂಚದಲ್ಲಿ 2000ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್ ಆಗಿ ಯುಐ ಭಾರೀ ಸೌಂಡ್ ಮಾಡುತ್ತಿದೆ. ಒಮ್ಮೆ ನೋಡಿ ಅರ್ಥ ಮಾಡಿಕೊಂಡವರು ಚಿತ್ರ ಚೆನ್ನಾಗಿದೆ ಎಂದು ಹೇಳುವ ಮೂಲಕ...
ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಅವರು ಮತ್ತೊಬ್ಬರು ಕನ್ನಡ ನಟ-ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರ ಸಿನಿಮಾ 'ಯುಐ' ನೋಡಿದ್ದಾರೆ. ಆ ಬಗ್ಗೆ ಮಾತನ್ನಾಡಿದ್ದಾರೆ. ಅಚ್ಚರಿ ಎಂಬಂತೆ, ಯುಐ ಸಿನಿಮಾದಿಂದ ಇಡೀ ಸ್ಯಾಂಡಲ್‌ವುಡ್ ಒಂದಾಗಿದೆ. ನಟರಾದ ಯಶ್, ಡಾಲಿ ಧನಂಜಯ್, ಸುದೀಪ್, ಶಿವಣ್ಣ, ದುನಿಯಾ ವಿಜಯ್ ಎಲ್ಲರೂ ಉಪೇಂದ್ರ ಅವರ 'ಯುಐ' ಸಿನಿಮಾವನ್ನು ನೋಡಿ ಮೆಚ್ಚಿ ಕೊಂಡಾಡಿದ್ದಾರೆ. ಇದೀಗ ಇಲ್ಲಿ ಕಿಚ್ಚ ಸುದೀಪ್ ಯುಐ ಬಗ್ಗೆ ಏನು ಹೇಳಿದ್ದಾರೆ ನೋಡಿ..
'ಯುಐ ಸಿನಿಮಾವನ್ನು ನೋಡಿದೆ. ಇದು ಉಪೇಂದ್ರ ಸರ್ ಅವರು ಮಾತ್ರ ಬರೆಯಬಲ್ಲ, ಕಲ್ಪಿಸಿಕೊಳ್ಳಬಲ್ಲ ಒಂದು ಸ್ಕ್ರಿಪ್ಟ್. ಅವರ ಚಿಂತನಾ ವಿಧಾನ ಹೇಗೆ ಕೆಲಸ ಮಾಡುತ್ತದೆಯೋ ಅದು ಅದ್ಭುತ. ಇಡೀ ತಂಡಕ್ಕೆ ನನ್ನ ಶುಭಾಶಯಗಳು ಹಾಗೂ ಆಲ್ ದಿ ಬೆಸ್ಟ್.. ಲವ್ & ಹಗ್ಸ್..' ಎಂದಿದ್ದಾರೆ ನಟ ಕಿಚ್ಚ ಸುದೀಪ್. ಈ ಮೊದಲು ಕಿಚ್ಚ ಸುದೀಪ್ ಹಾಗು ಉಪೇಂದ್ರ ಅವರಿಬ್ಬರೂ ಜೊತೆಯಾಗಿ 'ಮುಕುಂದ ಮುರಾರಿ' ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು.
ಮತ್ತೆ ಜೈಲು ಸೇರ್ತಾರಾ ಅಲ್ಲು ಅರ್ಜುನ್? ಫುಲ್ ಟೆನ್ಷನ್‌ನಲ್ಲಿ 'ಪುಷ್ಪಾ 2' ಸ್ಟಾರ್ ನಟ!
ಈ ತಿಂಗಳು, ಅಂದರೆ 20 ಡಿಸೆಂಬರ್ 2025ರಂದು ಉಪೇಂದ್ರ ನಟನೆ-ನಿರ್ದೇಶನದ 'ಯುಐ' ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾವನ್ನು ಕಿಚ್ಚ ಸುದೀಪ್ ನೋಡಿ, ಮೆಚ್ಚಿ ಇದೀಗ ಟ್ವೀಟ್ ಮಾಡಿದ್ದಾರೆ, ಉಪೇಂದ್ರ ಸೇರಿದಂತೆ 'ಯುಐ' ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಅದರಂತೆ, ನಟ ಯಶ್ ಹಾಗೂ ರಾಧಿಕಾ ಪಂಡಿತ್ ಕೂಡ ಯುಐ ಚಿತ್ರ ವೀಕ್ಷಿಸಿ ಮೆಚ್ಚಿ ಮಾತನ್ನಾಡಿದ್ದಾರೆ. ರಜನಿಕಾಂತ್, ಅಮೀರ್ ಖಾನ್ ಸೇರಿದಂತೆ ಹಲವು ಈ ಚಿತ್ರವನ್ನು ವೀಕ್ಷಿಸಿ ಮೆಚ್ಚಿ ತಮ್ಮತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನು, ಯುಐ ಸಿನಿಮಾ ದಿನದಿನಕ್ಕೂ ಜನಮೆಚ್ಚುಗೆ ಗಳಿಸುತ್ತ, ಕಲೆಕ್ಷನ್ ವಿಷಯದಲ್ಲೂ ಹಿಂದೆ ಬೀಳದೇ ಮುನ್ನುಗ್ಗುತ್ತಿದೆ. ಇಡೀ ಪ್ರಪಂಚದಲ್ಲಿ 2000ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್ ಆಗಿ ಯುಐ ಭಾರೀ ಸೌಂಡ್ ಮಾಡುತ್ತಿದೆ. ಒಮ್ಮೆ ನೋಡಿ ಅರ್ಥ ಮಾಡಿಕೊಂಡವರು ಚಿತ್ರ ಚೆನ್ನಾಗಿದೆ ಎಂದು ಹೇಳುವ ಮೂಲಕ ಪ್ರಚಾರ ಮಾಡುತ್ತಿದ್ದಾರೆ. ಒಮ್ಮೆ ನೋಡಿದಾಗ ಅರ್ಥ ಆಗದೇ ಇರುವವರು 'ಒಮ್ಮೆ ನೋಡಿದೆ, ಅರ್ಥ ಆಗಿಲ್ಲ, ಮತ್ತೊಮ್ಮೆ ನೋಡುತ್ತೇನೆ' ಎನ್ನುವ ಮೂಲಕ ಪ್ರಚಾರಕ್ಕೆ ಕಾರಣ ಆಗಿದ್ದಾರೆ.
ಕಿಚ್ಚ ಸುದೀಪ್ 'ಮ್ಯಾಕ್ಸ್'ಗೆ ಬಂದ ಪ್ರತಿಕ್ರಿಯೆ ಏನು? ಸೋಲು-ಗೆಲುವಿನ ಲೆಕ್ಕಾಚಾರ ಶುರು!
ಒಟ್ಟಿನಲ್ಲಿ, ಉಪ್ಪಿ ಚಿತ್ರಗಳು ಬೇರೆ ಚಿತ್ರಗಳ ರೀತಿ ಅಲ್ಲ. ಒಮ್ಮೆ ನೋಡಿದರೆ ರಿಯಾಕ್ಟ್ ಮಾಡಿ ಮರೆಯಲು ಅಸಾಧ್ಯ. ಮತ್ತೆ ಮತ್ತೆ ನೋಡುತ್ತಾರೆ. ಆ ಬಗ್ಗೆ ಏನೋ ಒಂದು ಮಾತನಾಡುತ್ತಾರೆ. ಹುಳ ಬಿಡುತ್ತಾರೆ ಎಂದೋ ಮತ್ತೊಂದೋ ಹೇಳಿ ಅವರ ನಿರ್ದೇಶನದ ಚಿತ್ರವನ್ನು ವಿಭಿನ್ನವಾಗಿ ಟ್ರೀಟ್ ಮಾಡುತ್ತಾರೆ. ಉಪೇಂದ್ರ ನಿರ್ದೇಶನದ ಸಿನಿಮಾ ಅಂದರೆ ಅದು ಮಾಮೂಲಿ ಚಿತ್ರವಲ್ಲ, ಅದರಲ್ಲೇನೋ ವಿಭಿನ್ನತೆ-ವಿಶೇಷತೆ ಇರುತ್ತದೆ ಎಂಬ ಸಂಗತಿಯೇ ಅವರ ಚಿತ್ರಕ್ಕಿರುವ ಶಕ್ತಿ ಹಾಗೂ ಪ್ರಾಮುಖ್ಯತೆ.