ಸಹಾಯ ಬೇಡಿ ಬಂದವರಿಗೆ ತಂದೆಯಂತೇ ಬಂಗಾರದ ಮನುಷ್ಯ. ಸಹನೆ-ತಾಳ್ಮೆ ಈತನ ಪ್ರತಿರೂಪ. 'ಬಂಗಾರ ಸನ್‌ ಆಫ್‌ ಬಂಗಾರದ ಮನುಷ್ಯ' ಮಾಡಿರುವ ಸಣ್ಣದೊಂದು ಅಳಿಲು ಸೇವೆಯಿಂದ ಓರ್ವ ವ್ಯಕ್ತಿಗೆ ಬಹಳ ಅನುಕೂಲವಾಗಿದೆ.

ದುಬಾರಿ ಕಾರು ಖರೀದಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್!

ಹೌದು! ಕೆಲ ದಿನಗಳ ಹಿಂದೆ ಶಿವರಾಜ್ ಕುಮಾರ್ ದುಬಾರಿ ಕಾರಿನಲ್ಲಿ ನಾಗವಾರದ ಬಳಿ ಹೋಗುತ್ತಿದ್ದರು. ಆಗ ವೃದ್ಧರೊಬ್ಬರನ್ನು ನೋಡುತ್ತಾರೆ. ಮುಂದೆ ಹೋದವರು ಮತ್ತೆ ತಮ್ಮ ಕಾರನ್ನು ರಿವರ್ಸ್‌ ತೆಗೆದುಕೊಂಡು ಬಂದು ಅವರಿಗೆ ಹಣದ ಅವಶ್ಯಕತೆ ಇದೆ ಎಂದು ಜೇಬಲ್ಲಿದ್ದ ಹಣವನ್ನೆಲ್ಲಾ ದಾನ ಮಾಡಿದ್ದಾರೆ.

 

 
 
 
 
 
 
 
 
 
 
 
 
 

Bangar son of bangarad manushya

A post shared by Shreedhar S Badadal (@im_shreedhar) on Oct 11, 2019 at 6:49am PDT

ಈ ಘಟನೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಫೋಟೋದಲ್ಲಿ ಶಿವಣ್ಣನ ಮುಖ ಸ್ಪಷ್ಟವಾಗಿ ಕಾಣಿಸುವುದಿಲ್ಲ ಆದರೆ ವಿಡಿಯೋ ಮಾಡಿದ ವ್ಯಕ್ತಿಯನ್ನು ನೋಡಿ ಶಿವರಾಜ್‌ಕುಮಾರ್ ಏನೂ ಆಗಿಯೇ ಇಲ್ಲ ಎಂಬಂತೆ ಸ್ಮೈಲ್ ಮಾಡಿದ್ದಾರೆ. ಮಾನವೀಯತೆಯನ್ನು ಮೆರೆದ ಶಿವಣ್ಣನ ಗುಣಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ಅಭಿಮಾನಿಗಳ ಜೊತೆ ಮಾತನಾಡಿ ಕಣ್ಣೀರಿಟ್ಟ ಶಿವಣ್ಣ!

ದಾನ ಧರ್ಮ ಅನ್ನುವುದು ರಾಜ್ ಕುಟುಂಬದಲ್ಲೇ ಬಂದಿದೆ ಅನ್ನುವುದಕ್ಕೆ ಪುನೀತ್‌ ರಾಜ್‌ಕುಮಾರ್ ಕೂಡ ಸಾಕ್ಷಿ. ಕನ್ನಡದ ಕೋಟ್ಯಧಿಪತಿಯಲ್ಲಿ ಕಷ್ಟವೆಂದು ಬಂದವರಿಗೆ ಆಟ ಗೆಲ್ಲಲು ಸಾಧ್ಯವಾಗದೇ ಹಿಂತಿರುಗುವ ಸಂದರ್ಭದಲ್ಲೂ ತಮ್ಮ ಸ್ವಂತ ಹಣವನ್ನು ನೀಡಿ ಸಹಾಯ ಮಾಡಿದ್ದಾರೆ.

ಅಕ್ಟೋಬರ್ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;