Asianet Suvarna News Asianet Suvarna News

ದರ್ಶನ್ ಲ್ಯಾಂಬೋರ್ಗಿನಿ ಕಾರು ಖರೀದಿಗೆ ಅಡ್ವಾನ್ಸ್ ಕೊಟ್ಟಿಲ್ಲ; ನಾನು ದುಡ್ಡು ಕೊಟ್ಟು ಕುಣಿಸಿದ್ದೀನಿ!

ದರ್ಶನ್‌ಗೆ ಲ್ಯಾಂಬೋರ್ಗಿನಿ ಕಾರು ಖರೀದಿಸಲು ಅಡ್ವಾನ್ಸ್ ಹಣ ಕೊಟ್ಟಿಲ್ಲ. ಅವರಿಗೆ ಸಿನಿಮಾ ಶೆಡ್ಯೂಲ್ ಪ್ರಕಾರ ಕೊಡಬೇಕಾಗಿದ್ದ ಹಣ ಕೊಟ್ಟಿದ್ದೇನೆ. ಆದರೆ, ಅವರಿಗೆ ದುಡ್ಡು ಕೊಟ್ಟು ಕುಣಿಸಿದ್ದೇನೆ ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಹೇಳಿದ್ದಾರೆ.

sandalwood producer umapathy srinivas gowda talk about actor darshan Lamborghini car purchase sat
Author
First Published Jun 27, 2024, 7:23 PM IST

ಬೆಂಗಳೂರು (ಜೂ.27): ನಾನು ದರ್ಶನ್‌ಗೆ ಲ್ಯಾಂಬೋರ್ಗಿನಿ ಕಾರನ್ನು (Darshan Lamborghini car) ತೆಗೆದುಕೊಳ್ಳಲು ಅಡ್ವಾನ್ಸ್ ಹಣ ಕೊಟ್ಟಿದ್ದೇನೆ ಎಂಬುದು ಸುಳ್ಳು. ಅವರಿಗೆ ಸಿನಿಮಾ ಶೆಡ್ಯೂಲ್ ಪ್ರಕಾರ ಕೊಡಬೇಕಾಗಿದ್ದ ಹಣ ಕೊಟ್ಟಿದ್ದೇನೆ. ಆದರೆ, ದುಡ್ಡು ಕೊಟ್ಟು ಕುಣಿಸಿದ್ದೇನೆ ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ (umapathy srinivas gowda) ಹೇಳಿದ್ದಾರೆ.

ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ದರ್ಶನ್ ಅವರ ಲ್ಯಾಂಬೋರ್ಗಿನಿ ಕಾರು ಖರೀದಿಗೆ ನಾನು ಹಣ ಕೊಟ್ಟಿಲ್ಲ. ಅವರಿಗೆ ಶೆಡ್ಯೋಲ್ ಪ್ರಕಾರ ಹಣ ಕೊಡಬೇಕಿತ್ತು. ಆಗ ಲ್ಯಾಂಬೋರ್ಗಿನಿ ಕಾರು ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಶರತ್ ಎನ್ನುವವರು ಹಣ ಕಳಿಸಿಬಿಡಿ ಎಂದಿದ್ದಕ್ಕೆ, ಸಿನಿಮಾ ಅಡ್ವಾನ್ಸ್ ಕೊಡಬೇಕಾಗಿದ್ದ ಹಣವನ್ನು ನೇರವಾಗಿ ಶರತ್‌ಗೆ ವರ್ಗಾವಣೆ ಮಾಡಿದ್ದೆ. ಇದರಲ್ಲಿ ನಾನು ಹಣ ಕೊಟ್ಟಿದ್ದೇನೆ ಎಂಬ ಪಾತ್ರವಿಲ್ಲ. ಆದರೆ, ನನಗೆ ಹಲವು ಲ್ಯಾಂಬೋರ್ಗಿನಿ ಕಾರು ಖರೀದಿ ಮಾಡುಷ್ಟು ಹಣವಿದ್ದರೂ, ನಾನು ಅವಶ್ಯಕತೆ ಇಲ್ಲವೆಂದು ಖರೀದಿ ಮಾಡಿಲ್ಲ ಎಂದು ತಿಳಿಸಿದರು.

ರತಿ ಅಂತ ಹೆಂಡ್ತಿ ಇದ್ರು ಕೋತಿಯಂಥ ಗೆಳತಿ ಯಾಕೆ ಬೇಕು: ದರ್ಶನ್‌ಗೆ ಉಮಾಪತಿ ಟಾಂಗ್‌!

ನಾವು ವಾಸ ಮಾಡುತ್ತಿರುವ ನಮ್ಮ ಮನೆಯ ಸುತ್ತಲೂ ಸುಮಾರು 1.5 ಎಕರೆಗೂ ಹೆಚ್ಚು ಜಾಗವಿದ್ದು, ಇದು ಸುಮಾರು 2 ಲ್ಯಾಂಬೋರ್ಗಿನಿ ಕಾರು ಖರೀದಿ ಮಾಡುವಷ್ಟು ಬೆಲೆಗೆ ಮಾರಾಟ ಆಗುತ್ತದೆ. ಆದರೆ, ನಾನು ಎರಡು ಲ್ಯಾಂಬೋರ್ಗಿನಿ ಕಾರನ್ನು ತೆಗೆದುಕೊಳ್ಳುವ ಜಾಗವಿದ್ದರೂ, ಆ ಜಾಗದಲ್ಲಿ ಕೋಳಿ ಸಾಕಣೆ ಮಾಡುತ್ತಿದ್ದೇನೆ. ನನ್ನ ಮಕ್ಕಳಿಗೆ ನಾಟಿ ಕೋಳಿ ಮೊಟ್ಟೆ ಬೇಕು ಎಂದು ಕೋಳಿ ಸಾಕಣೆ ಮಾಡುತ್ತಿದ್ದು, ಉಳಿದ ಜಾಗದಲ್ಲಿ ಕೆಲವು ಪಕ್ಷಿಗಳನ್ನು ಸಾಕಣೆ ಮಾಡುತ್ತಿದ್ದೇನೆ ಎಂದು ಹೇಳಿದರು.

ನಾನು ಇಷ್ಟೆಲ್ಲಾ ಜಾಗ ಮತ್ತು ಹಣವಿದ್ದರೂ ಕೋಳಿ ಸಾಕಣೆ (poultry farm) ಮಾಡುತ್ತಿದ್ದೇನೆಂದರೆ ನಿಮಗೆ, ನನಗೆ ಹಣವಿಲ್ಲ ಎಂದಲ್ಲ ಐಷಾರಾಮಿ ಕಾರಿನ ಅವಶ್ಯಕತೆ ಇಲ್ಲ ಎಂದು ಅರ್ಥ. ನಮ್ಮನೆಯಲ್ಲಿರುವ ದುಡ್ಡು, ಹಣ ಹಾಗೂ ಒಡವೆಗಳನ್ನು ಮೈಮೇಲೆ ಹಾಕೊಂಡು ಓಡಾಡುವುದಕ್ಕೆ ಆಗುತ್ತದೆಯೇ? ನಮಗೆ ಅದರ ಅವಶ್ಯಕತೆಯಿಲ್ಲ. ನಮಗೆಷ್ಟು ಬೇಕೋ ಅಷ್ಟು ಹಣವನ್ನು ಜೇಬಿನಲ್ಲಿ ಇಟ್ಟುಕೊಂಡು, ಇನ್ನು ಬಾಕಿಯದ್ದು ಮನೆಯಲ್ಲಿ, ಬ್ಯಾಂಕ್ ಖಜಾನೆಯಲ್ಲಿ (Bank Locker) ಇಟ್ಟುಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಸುಳ್ಳು ಅತ್ಯಾಚಾರದ ಕೇಸ್ ದಾಖಲಿಸಿದ ಮಹಿಳೆ ಸೇರಿ 13 ಮಂದಿಗೆ ಜೈಲು ಶಿಕ್ಷೆ

ದರ್ಶನ್ ಹೆಸರೇಳಿಕೊಂಡು ಉಮಾಪತಿಗೌಡ ಹೆಸರು ಮತ್ತು ಹಣ ಮಾಡಿಕೊಂಡಿದ್ದಾರೆಂದು ದರ್ಶನ್ ಅಭಿಮಾನಿಗಳು ಹೇಳುತ್ತಿದ್ದಾರೆ ಎಂಬ ಕಾಮೆಂಟ್‌ನ ಬಗ್ಗೆ ಮಾತನಾಡಿ, ನಾವು ಅವರ ಹೆಸರೇಳಿಕೊಂಡು ಬದುಕುವುದು ಅಲ್ಲ, ನಮ್ಮಿಂದ ಅವರು ಅನ್ನ ತಿನ್ನುತ್ತಿದ್ದಾರೆ. ನಾನು ದುಡ್ಡು ಕೊಟ್ಟು ಸಿನಿಮಾ ಮಾಡಿದ್ದೇನೆ ಹೊರತು ಯಾವುದೇ ಪುಗಸಟ್ಟೆ ಸಿನಿಮಾ ಮಾಡಿಸಿಲ್ಲ.  ದುಡ್ಡು ಕೊಟ್ಟಿದ್ದೀನಿ ಆಕ್ಟ್ ಮಾಡಿಸಿಕೊಂಡಿದ್ದೀನಿ. ದುಡ್ಡು ಕೊಟ್ಟು ಕುಣಿಸಿದ್ದೀನಿ, ಯಾವುದಕ್ಕೂ ಫ್ರೀಯಾಗಿ ಮಾಡಿಸಿಕೊಂಡಿಲ್ಲ. ನಮ್ಮನೆ ಕಾರ್ಯಕ್ರಮಕ್ಕೆ ಯಾವೊಬ್ಬ ನಟರನ್ನೂ ನಾನು ಕರೆದಿಲ್ಲ. ಹಾಗೇನಾದರೂ ಕರೆದಿದ್ದರೆ ಚಿಕ್ಕಣ್ಣ ಮಾತ್ರ, ಏಕೆಂದರೆ ಚಿಕ್ಕಣ್ಣ ನನಗೆ ಒಬ್ಬ ಸ್ನೇಹಿತನಾಗಿ, ನನ್ನ ಸಹೋದರನಾಗಿ ನಿಂತಿದ್ದಾನೆ. ಅವರಾರೋ ಬೊಗಳುತ್ತಾರೆಂದರೆ ನೀವು ನಾವ್ಯಾಕೆ ಕೇರ್ ಮಾಡಬೇಕು ಹೇಳಿ ಎಂದು ನಿರ್ಮಾಪಕ ಉಮಾತಿಗೌಡ ಹೇಳಿದರು.

Latest Videos
Follow Us:
Download App:
  • android
  • ios