ಬೆಂಗಳೂರು(ಏ.  02)  ಸಿನಿಮಾ ಥಿಯೇಟರ್ ಶೇ. 50 ಸೀಟು ಭರ್ತಿಗೆ ಅವಕಾಶ ನೀಡಿ ಹೊಸ ನಿಯಮಾವಳಿ ಹೊರಡಿಸಿದ್ದಕ್ಕೆ ಸ್ಯಾಂಡಲ್ ವುಡ್ ವಿರೋಧ ವ್ಯಕ್ತಪಡಿಸಿದೆ. 

ಮೊದಲನೇದಾಗಿ ನಾವು ಸಿಟಿಜನ್ ಆಗಿ ಮಾತನಾಡಬೇಕು. ಕನಿಷ್ಟ ನಮಗೆ ಮೂರ್ನಾಲ್ಕು ದಿನ ಮುಂಚಿತವಾಗಿ ಆದ್ರೂ ಮಾಹಿತಿ ನೀಡಬೇಕಿತ್ತು. ಈಗಾಗಲೇ ಭಾನುವಾರದ ತನಕ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಈಗ ಈ ರೀತಿ ನಿರ್ಧಾರಗಳನ್ನ ತೆಗೆದುಕೊಂಡಾಗ ನಮಗೆ ಕಷ್ಟ ಆಗಿದೆ. ಸರ್ಕಾರದ ನಿರ್ಧಾರದಿಂದ ನಮಗೂ ಕೂಡ ಶಾಕ್‌ ಆಗಿದೆ. ಮೊನ್ನೆ ಮೊನ್ನೆ ಮೀಟಿಂಗ್ ‌ನಡೆದ ಸಭೆ ಬಳಿಕ‌ ಕೂಡ ಯಾವುದೇ ತೀರ್ಮಾನ ಮಾಡಿರಲಿಲ್ಲ. ಹೀಗಾಗಿ ನಾವು ಸಿನಿಮಾ ರಿಲೀಸ್ ಮಾಡುವ ನಿರ್ಧಾರ ಮಾಡಿದ್ವಿ ಎಂದು ಯುವರತ್ನ ತಂಡ ಹೇಳಿದೆ.

ಕೊರೋನಾ ಕಂಟ್ರೋಲ್‌ಗೆ ಟಫ್ ರೂಲ್ಸ್;  ಜಿಮ್, ಈಜುಕೋಳ ಬ್ಯಾನ್, ಬಾರ್‌ಗೂ ಹೋಗಂಗಿಲ್ಲ!

ಈಗ ಏಕಾಏಕಿ ನಾಳೆ ಇಂದ ಸಿನಿಮಾ ಥಿಯೇಟರ್ 50 ಅಂದ್ರೆ ಹೇಗಾಗಬೇಡ.  ನಿನ್ನೆ ರಿಲೀಸ್ ಆಗಿ‌ ಸಿನಿಮಾ ಆಗಿದೆ, ಒಳ್ಳೆ ರೆಸ್ಪಾನ್ಸ್ ಬರ್ತಿದೆ . ಇವತ್ತು ಸಿನಿಮಾ ಒಳ್ಳೆ ಪಿಕಪ್ ಆಗಿದೆ. ಫ್ಯಾಮಿಲಿ ‌ಆಡಿಯನ್ಸ್ ಕೂಡ ಥಿಯೇಟರ್ ಕಡೆಗೆ ಬರ್ತಿದ್ದಾರೆ. ಈ ವೇಳೆ ಈ ರೀತಿ ನಿಯಮ ತಂದಿರೋದು ಒಂದು ಒಳ್ಳೆ ಸಿನಿಮಾ ಕೊಂದು ಹಾಕಿದಂತೆ ಆಗಿದೆಇದು ನ್ಯಾಯ ಅಲ್ಲ, ಸರ್ಕಾರಕ್ಕೆ ನಾವು ಮನವಿ‌ ಮಾಡುತ್ತೇವೆ . ದಯವಿಟ್ಟು ಈ ಆದೇಶವನ್ನ ಹಿಂದಕ್ಕೆ‌ ಪಡೆಯಿರಿ ಎಂದು ಸರ್ಕಾರಕ್ಕೆ ನಟ ಪುನೀತ್ ರಾಜ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.

ಸರ್ಕಾರದ ನಿರ್ಧಾರಗಳನ್ನ ನೋಡಿ ನಾವು ಸಿನಿಮಾ‌ ರಿಲೀಸ್ ಮಾಡಿದ್ದೇವೆ. ಮೊನ್ನೆ ಟಾಸ್ಕ್‌ ಫೋರ್ಸ್ ಸಮಿತಿ ಸಭೆಯಲ್ಲಿ ಕೂಡ ಯಾವ ನಿರ್ಧಾರಗಳನ್ನ ಕೈಗೊಂಡಿರಲಿಲ್ಲ ಈ ಹಿಂದೆ ಈ ಪ್ರಸ್ತಾವನೆ ಬಂದಾಗಲೂ ಸರ್ಕಾರ ಅದನ್ನ ನಿರಾಕರಣೆ ಮಾಡಿತ್ತು ಹೀಗಾಗಿ ನಾವು ರಿಲೀಸ್ ಮಾಡುವ ನಿರ್ಧಾರಗಳನ್ನ ಕೈಗೊಂಡೆವು. ನಮಗೆ ಕನಿಷ್ಠ ಮೂರ್ನಾಲ್ಕು‌ ದಿನಗಳ ಹಿಂದೆ ಹೇಳಿದ್ರು ಕೂಡ ನಾವು ಸಿನಿಮಾ ರಿಲೀಸ್ ಮಾಡ್ತಿರಲಿಲ್ಲ. ಸರ್ಕಾರ ಈಗ ಏಕಾಏಕಿ ನಿರ್ಧಾರ ತೆಗೆದುಕೊಂಡಿದ್ದು ಎಷ್ಟು ಸರಿ ಎಂದು ಯುವರತ್ನ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೇಳಿದ್ದಾರೆ. 

ಸಿಎಂಗೆ ವೈಯಕ್ತಿಕವಾಗಿ ಮನವಿ ಮಾಡುತ್ತೇನೆ. ಈ ನಿರ್ಧಾರವನ್ನ ವಾಪಸ್ ಪಡೆಯಿರಿ. ನಾಳೆ ಚಿತ್ರರಂಗ ಯಾವ ರೀತಿ ನಡೆದುಕೊಳ್ತಾರೋ ಅದಕ್ಕೆ ಬದ್ಧರಾಗಿ ಇರುತ್ತೇವೆ. ನಾಳೆ ಫಿಲ್ಮ್‌ ಚೇಂಬರ್ ನಲ್ಲಿ ಮೀಟಿಂಗ್ ನಡೆಯೋ ಬಗ್ಗೆ ಮಾಹಿತಿ ಇಲ್ಲ ಎಂದು ಪುನೀತ್ ಸೋಶಿಯಲ್ ಮೀಡಿಯಾಮುಖೇನ ಹೇಳಿದ್ದಾರೆ.

ರಾಜ್ಯದಲ್ಲಿ ಜಿಮ್ ಗಳು ಕ್ಲೋಸ್ ವಿಚಾರಕ್ಕೆ  ಜಿಮ್ ಮಾಲೀಕರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪಬ್,ಬಾರ್,ರೆಸ್ಟೋರೆಂಟ್ ಗಳಿಗೆ ಮಾತ್ರ ಶೇಕಡ 50ರಷ್ಟು ಅನುಮತಿ ಕೊಟ್ಟಿದ್ದೀರಾ... ಜಿಮ್ ಗಳಿಗ ಮಾತ್ರ ಕಂಪ್ಲೀಟ್ ನಿಷೇಧ ಮಾಡಿದ್ದೀರಾ.. ಜಿಮ್ ಗಳಿಂದ ನಿಮಗೆ ಯಾವುದೇ ಲಾಭ ಆಗಲ್ಲ. ಹೀಗಾಗಿ ಜಿಮ್ ಗಳನ್ನ ಕ್ಲೋಸ್ ಮಾಡಲು ಆದೇಶ ಮಾಡಿದ್ದೀರಾ? ಎಂದು ಪ್ರಶ್ನೆ ಮಾಡಿದೆ.

ಜಿಮ್ ಗೆ ಹೋಗೋದ್ರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ವ್ಯಾಯಮ ಮಾಡಿ ಎಂದು ನೀವೇ ಹೇಳ್ತೀರಾ..? ಈಗ ನೀವೇ ಹೀಗೆ ಮಾಡಿದ್ರೆ ಹೇಗೆ..? ಜಿಮ್ ಗಳನ್ನ ಕ್ಲೋಸ್ ಮಾಡೋದ್ರಿಂದ ನಾವು ಬೀದಿಗೆ ಬರಬೇಕಾಗುತ್ತದೆ. ದಯವಿಟ್ಟು ನಮಗೂ ಶೇಕಡ 50ರಷ್ಟು ಅವಕಾಶ ಮಾಡಿಕೊಡಿ ಎಂದು ರಾಜ್ಯ ಸರ್ಕಾರ ಬಳಿ ಜಿಮ್ ಮಾಲೀಕರ ಸಂಘ ಮನವಿ ಮಾಡಿಕೊಂಡಿದೆ. ಜಿಮ್ ಮಾಲೀಕರ ಸಂಘದ ಮುಖಂಡ  ಶರಣ್ ಮನವಿ  ಮಾಡಿಕೊಂಡಿದ್ದಾರೆ.