ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಚಿತ್ರದ ಟ್ರೇಲರ್ ಬಿಡುಗಡೆಯಾಗುವ ದಿನಾಂಕ ಘೋಷಣೆಯಾಗಿದೆ. ಚಿತ್ರತಂಡ ಜೂನ್ 23 ರಂದು ಟ್ರೇಲರ್ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದೆ. 

ಬೆಂಗಳೂರು (ಜೂನ್ 17): ಸುದೀರ್ಘ ಕಾಯುವಿಕೆ ಕೊನೆಗೂ ಮುಗಿದಿದೆ. ಕಿಚ್ಚ ಸುದೀಪ್ (Kichcha Sudeep) ಅಭಿನಯದ ಬಹು ನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣದ (Vikrant Rona) ಟ್ರೇಲರ್ (Trailer) ಜೂನ್ 23 ರಂದು ಬಿಡುಗಡೆಯಾಗಲಿದೆ. ಅದಕ್ಕೊಂದು ವಿಶೇಷ ಪೋಸ್ಟರ್ ಮೂಲಕ ನಿರ್ಮಾಪಕರು ಟ್ರೇಲರ್ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. 

ಅನುಪ್ ಭಂಡಾರಿ (Anup Bhandari) ನಿರ್ದೇಶನದ ಈ ಫ್ಯಾಂಟಸಿ ಚಿತ್ರದಲ್ಲಿ ನೀತಾ ಅಶೋಕ್, ನಿರೂಪ್ ಭಂಡಾರಿ, ಸಿದ್ದು ಮೂಲಿಮನಿ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಕ್ರಾಂತ್ ರೋಣ 14 ಭಾಷೆಗಳಲ್ಲಿ 3ಡಿ ರೂಪದಲ್ಲಿ ಬಿಡುಗಡೆಯಾಗಲಿದೆ. ಜೂನ್ 28ರಂದು ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಕಿಚ್ಚ ಸುದೀಪ್ ನಟಿಸಿರೋ ಪ್ಯಾನ್ ವರ್ಲ್ಡ್ ಸಿನಿಮಾವನ್ನು ಅನೂಪ್ ಬಂಢಾರಿ ನಿರ್ದೇಶನ ಮಾಡಿದ್ದು, ಜಾಕ್ ಮಂಜು ಚಿತ್ರದ ನಿರ್ಮಾಣ ಮಾಡಿದ್ದಾರೆ. ಕನ್ನಡ ಹಿಂದಿ, ತೆಲುಗು, ತಮಿಳು ಹಾಗು ಇಂಗ್ಲೀಷ್ ಭಾಷೆಗೆ ಕಿಚ್ಚ ಸುದೀಪ್ ಅವರೇ ವಾಯ್ಸ್ ಡಬ್ ಮಾಡಿರೋ ಸಿನಿಮಾ‌ ಇದಾಗಿದೆ.

ಕೆಜಿಎಫ್ 2 ಸಿನಿಮಾದ ನಂತರ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರೋ ಸಿನಿಮಾ ಇದು. ಈಗಾಗ್ಲೆ ವಿಕ್ರಾಂತ್ ‌ರೋಣ ಚಿತ್ರಕ್ಕೆ ಭಾರಿ ಬೇಡಿಕೆ ಬಂದಿದೆ. ಭಾರತೀಯ ಚಿತ್ರರಂಗದ‌ ಬಿಗ್ ಸ್ಟಾರ್ಸ್ ಈ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ, ನಿರೀಕ್ಷೆ‌ ಇಟ್ಟುಕೊಂಡಿದ್ದಾರೆ.

ಕಿಚ್ಚ ಸುದೀಪ್ ಗೆ ಬ್ಯಾಟ್ ಗಿಫ್ಟ್ ನೀಡಿದ ಜೋಸ್ ಬಟ್ಲರ್!

ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾ ಕೊರೊನಾ ವೈರಸ್‌ನಿಂದಾಗಿ ಹಲವು ಬಾರಿ ಮುಂದೂಡಲ್ಪಟ್ಟಿತ್ತು. ಏಪ್ರಿಲ್ 2 ರಂದು ಚಿತ್ರತಂಡ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಿತ್ತು. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಮೊಟ್ಟ ಮೊದಲ ಬಾರಿಗೆ ರೀಲ್ಸ್ ಅಂಗಳಕ್ಕೆ ಕಿಚ್ಚನ ಎಂಟ್ರಿ; ಸುದೀಪ್ ಮೊದಲ ರೀಲ್ಸ್ ಹೇಗಿದೆ ಗೊತ್ತಾ?‌

ಚಿತ್ರದಲ್ಲಿ ಕಿಚ್ಚ ಸುದೀಪ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಜಾಕ್ವೆಲಿನ್ ಫೆರ್ನಾಂಡಿಸ್ ಚಿತ್ರದಲ್ಲಿ ಗಡಂಗ್ ರಕ್ಕಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಲಿಯಂ ಡೇವಿಡ್ ಛಾಯಾಗ್ರಹಣವಿದ್ದರೆ, ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.