‘ಕರ್ನಾಟಕದ ಹುಡುಗಿಯರೇ, ನಿಮಗೊಂದು ಚಾಲೆಂಜ್‌. ನಿಮ್ಮ ಡ್ಯಾನ್ಸ್‌ ಪವರ್‌ಅನ್ನು ನಮ್ಮ ಮುಂದೆ ತೋರಿಸಿ’ ಹೀಗೆ ಪಬ್ಲಿಕ್‌ ಆಗಿ ಚಾಲೆಂಜ್‌ ಮಾಡಿದ್ದಾರೆ ‘ಯುವರತ್ನ’ ನಾಯಕಿ ಸಯ್ಯೇಶಾ. ಅಷ್ಟಕ್ಕೂ ಆಕೆಯದು ಪವರ್‌ ಆಫ್‌ ಯೂತ್‌ ಚಾಲೆಂಜ್‌.

‘ಪವರ್‌ ಆಫ್‌ ಯೂತ್‌’ ಅನ್ನೋದು ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಯುವರತ್ನ’ದ ಹಾಡು. 3.8 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡ ಈ ಹಾಡನ್ನು ಮತ್ತೊಂದು ಲೆವೆಲ್‌ಗೆ ಕೊಂಡೊಯ್ಯಲು ನಿರ್ಧರಿಸಿದ ಚಿತ್ರತಂಡ, ‘ಪವರ್‌ ಆಫ್‌ ಯೂತ್‌ ಚಾಲೆಂಜ್‌’ ಶುರು ಮಾಡಿದ್ರು. ಅಪ್ಪು ಅಭಿಮಾನಿಗಳು ಪವರ್‌ ಆಫ್‌ ಯೂತ್‌ ಹಾಡಿಗೆ ಡ್ಯಾನ್ಸ್‌ ಮಾಡಿ ಅದನ್ನು ವಿಡಿಯೋ ಮಾಡಿ #PowerOfYouthDanceChallenge ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ಬೆಸ್ಟ್‌ ಅನಿಸೋ ವೀಡಿಯೋಕ್ಕೆ ಪುನೀತ್‌ ಹಾಗೂ ಚಿತ್ರತಂಡದವರು ಸ್ಪೆಷಲ್‌ ಗಿಫ್ಟ್‌ ನೀಡುತ್ತಾರೆ.

ಡಾ.ವಿಷ್ಣು ಅವಹೇಳನ: ನಟ ವಿಜಯ್‌ ವಿರುದ್ಧ ಕನ್ನಡ ಚಿತ್ರರಂಗ ಆಕ್ರೋಶ!

ಇದೀಗ ಈ ಚಾಲೆಂಜ್‌ ಪ್ರಚಾರಕ್ಕೆ ನಾಯಕಿ ಸಯ್ಯೇಶಾ ಮುಂದಾಗಿದ್ದಾರೆ. ಕರ್ನಾಟಕದ ಹುಡುಗೀರಿಗೆ ನಿಮ್‌ ಡ್ಯಾನ್ಸ್‌ ಪವರ್‌ಅನ್ನು ನಮ್ಮುಂದೆ ತೋರಿಸಿ ಅಂತ ಸವಾಲೆಸೆದಿದ್ದಾರೆ. ಜೊತೆಗೆ ತಾನೂ ಮಸ್ತಾಗಿ ಹೆಜ್ಜೆ ಹಾಕಿ ಹುಡುಗರ ಎದೆಬಡಿತ ಹೆಚ್ಚಿಸಿದ್ದಾರೆ. ಪವರ್‌ ಆಫ್‌ ಯೂತ್‌ ಹಾಡನ್ನು ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಬರೆದಿದ್ದು, ನಕಾಶ್‌ ಅಝೀಝ್‌ ಹಾಡಿದ್ದಾರೆ.

ನೀವು ಮಾಡಬೇಕಾಗಿರುವುದು ಇಷ್ಟೇ.... ಪವರ್‌ ಆಫ್‌ ಯೂತ್‌ ಹಾಡಿನಲ್ಲಿ ಬರುವ ಸರಳವಾದ ಸ್ಟೆಫ್ಸ್‌ ಹಾಕಿ ವಿಡಿಯೋ ಮಾಡಿ PsತಿhಡಿಔಜಿಙsOಣk ಎಂಬ ಹ್ಯಾಷ್ಟಾ್ಯಗ್‌ ಹಾಕಿ ಅಪ್ಲೌಡ್‌ ಮಾಡಬೇಕು. ಅಂತಿಮವಾಗಿ ದಿ ಬೆಸ್ಟ್‌ ಎನಿಸುವ ವಿಡಿಯೋಗೆ ಪುನೀತ್‌ ರಾಜ್‌ ಕುಮಾರ್‌ ಹಾಗೂ ಯುವರತ್ನ ಚಿತ್ರತಂಡದಿಂದ ಸ್ಪೆಷಲ್‌ ಹಾಗೂ ಸಪ್ರ್ರೈಸ್‌ ಉಡುಗೊರೆ ಇದೆ.

ವಿಷ್ಣುವರ್ಧನ್ ಬಗ್ಗೆ ಅವಹೇಳನ ಮಾತು: ತೆಲುಗು ನಟನಿಗೆ ಪವರ್ ಸ್ಟಾರ್ ಖಡಕ್ ಎಚ್ಚರಿಕೆ!

ಈ ಕುರಿತು ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಮತ್ತು ಪುನೀತ್‌ ರಾಜ್‌ ಕುಮಾರ್‌ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. ಯುವರತ್ನ 2ನೇ ಹಾಡಿನ ಬಗ್ಗೆ ಮಾಹಿತಿ ನೀಡಿದ ಎಸ್‌ ಎಸ್‌ ತಮನ್‌ ಇನ್ನುಳಿದಂತೆ ಸಂತೋಷ್‌ ಆನಂದ್‌ ರಾಮ್‌ ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ಎಸ್‌ ಎಸ್‌ ತಮನ್‌ ಅವರ ಸಂಗೀತವಿದದೆ. ನಕಾಶ್‌ ಅಜೀಜ್‌ ಹಾಡಿದ್ದಾರೆ. ಮೊದಲನೇ ಹಾಡು ಹಿಟ್‌ ಆದ ಬಳಿಕ ಎರಡನೇ ಹಾಡು ಬಿಡುಗಡೆ ಮಾಡಲು ವೇದಿಕೆ ಸಜ್ಜಾಗುತ್ತಿದೆ. ಮೈಸೂರು ಹುಡುಗನ ಬೆನ್ನಿಗೆ ನಿಂತ ಆ ಃs$

ಎರಡನೇ ಹಾಡನ್ನು ಸ್ವತಃ ಪುನೀತ್‌ ರಾಜ್‌ ಕುಮಾರ್‌ ಹಾಡಿದ್ದಾರೆ. ಇನ್ನು ಚಿತ್ರದಲ್ಲಿ ಪುನೀತ್ಗೆ ಜೋಡಿಯಾಗಿ ಸಯೇಶಾ ಕಾಣಿಸಿಕೊಂಡಿದ್ದಾರೆ. ಸೋನು ಗೌಡ, ಧನಂಜಯ್‌, ಪ್ರಕಾಶ್‌ ರಾಜ್‌, ದಿಗಂತ್‌, ವಸಿಷ್ಠ ಸಿಂಹ ಸೇರಿದಂತೆ ಹಲವರು ನಟಿಸಿದ್ದಾರೆ.