ಯುಟ್ಯೂಬ್ ನ ಲ್ಲಿ ಬ್ರಹ್ಮಚಾರಿ ಟ್ರೇಲರ್ ಹವಾ/ ಪಕ್ಕಾ ಕಾಮಿಡಿ ಚಿತ್ರ/ ನವೆಂಬರ್ 15 ರಂದು ತೆರೆಗೆ/ ಡಬಲ್ ಮೀನಿಂಗ್ ಡೈಲಾಗ್ ಗಳ ಪಂಚ್

ಬೆಂಗಳೂರು[ನ. 04] ಕನ್ನಡದ ಮಟ್ಟಿಗೆ ಡಬ್ಬಲ್ ಮೀನಿಂಗ್ ಡೈಲಾಗ್ ಗಳ ಟ್ರೇಲರ್ ಬಿಡುಗಡೆ ಮಾಡುವುದು ಒಂಥರಾ ಟ್ರೆಂಡ್ ಆಗಿ ಹೋಗಿದೆ. ನವೆಂಬರ್ 15ಕ್ಕೆ ತೆರೆಗೆ ಬರಲು ಸಿದ್ಧವಾಗಿರುವ ‘ಬ್ರಹ್ಮಚಾರಿ’ ಸಿನಿಮಾ ಟ್ರೇಲರ್ ಸಹ ಸಖತ್ ಸದ್ದು ಮಾಡುತ್ತಿದೆ,

Add Asianetnews Kannada as a Preferred SourcegooglePreferred

ನೀಸಾಸಂ ಸತೀಶ್, ಶಿವರಾಜ್ ಕೆಆರ್ ಪೇಟೆ, ಅಚ್ಯುತ್ ಕುಮಾರ್, ದತ್ತಣ್ಣ, ನಾಯಕಿ ಅದಿತಿ ಪ್ರಭುದೇವ ಎಲ್ಲರ ಕೈಯಲ್ಲೂ ಡಬಲ್ ಮೀನಿಂಗ್ ಡೈಲಾಗ್ ಗಳು ಉದುರಿವೆ. ಪಕ್ಕಾ ಕಾಮಿಡಿ ಫಿಲಂ ಅನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

ಶಾನೆ ಟಾಪ್ ಆಗವಳೆ ಸುಂದರಿ ಬ್ಯಾಗ್ ನಲ್ಲಿ ಏನೆಲ್ಲ ಇರುತ್ತೆ?

ಈಗಾಗಲೇ ‘ಹ್ಯಾಂಗಾತ್ಯೋ ಡ್ಯಾಡಿ’ ಸಾಂಗ್ ಹಿಟ್ ಆಗಿದೆ. ಟಿಕ್ ಟಾಕ್ ನಲ್ಲಿಯೂ ಭರ್ಜರಿಯಾಗಿ ಓಡುತ್ತಿದೆ. ಚಂದ್ರ ಮೋಹನ್ ನಿರ್ದೇಶಿಸಿರುವ ಸಿನಿಮಾ ಉದಯ್ ಕೆ ಮೆಹ್ತಾ ನಿರ್ಮಾಣದಲ್ಲಿ ಮೂಡಿಬಂದಿದೆ.