Open ಆಗಿಯೇ ನಟ ರವಿಚಂದ್ರನ್ ಬಗ್ಗೆ ಹೇಳಿದ ಮಧುಬಾಲಾ; 'ಅಣ್ಣಯ್ಯ' ನಟಿ ಹೇಳಿದ್ದೇನು?
ಸ್ವಲ್ಪ ಗ್ಯಾಪ್ ಬಳಿಕ ಇದೀಗ ಮತ್ತೆ ಇಂಟರ್‌ವ್ಯೂಗಳನ್ನು ಕೊಡುತ್ತ, ಮತ್ತೆ ಸಿನಿಮಾ ನಟನೆಯತ್ತ ಮನಸ್ಸು ಮಾಡಿದ್ದಾರೆ. ಅದಕ್ಕೇ ಈಗ ಹಳೆಯದನ್ನೆಲ್ಲಾ ನೆಪಿಸಿಕೊಂಡು ಹೇಳುತ್ತಿದ್ದಾರೆ. ಅದರಲ್ಲೇನೂ ತಪ್ಪಿಲ್ಲ, ಒಳ್ಳೆಯ ಅನುಭವವನ್ನು ಹೇಳಿಕೊಂಡು ಕಲಸಕ್ಕೆ ಅವಕಾಶ ಕೇಳಿದರೆ ತಪ್ಪೇನಿದೆ ಅಲ್ವಾ? ಸದ್ಯ ನಟಿ..

ಒಂದಾನೊಂದು ಕಾಲದಲ್ಲಿ, ಕನ್ನಡದಲ್ಲಿ ಕೂಡ ನಟಿಸಿ ಪಂಚಭಾಷಾ ತಾರೆ ಎನ್ನಿಸಿಕೊಂಡವರು ನಟಿ ಮಧುಬಾಲಾ (Madhubala). ರವಿಚಂದ್ರನ್ ನಟನೆಯ 'ಅಣ್ಣಯ್ಯ' ಚಿತ್ರದಲ್ಲಿ ಚೆಂದವಾಗಿ ಡಾನ್ಸ್ ಮಾಡಿ ಕನ್ನಡ ಸಿನಿಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ನಟಿ ಇ ಮಧುಬಾಲಾ. ಸೆಕ್ಸಿ ಡ್ರೆಸ್ ಹಾಕಿ 'ಬೊಂಬೆ ಬೊಂಬೇ..' ಎಂದು ಕುಣಿದು ಹುಡುಗರ ಹಾರ್ಟ್ ಬೀಟ್ ಹೆಚ್ಚಿಸಿದ್ದರು ನಟಿ ಮಧುಬಾಲಾ. ತಮ್ಮ ಕನ್ನಡ ಸಿನಿಮಾ ಕೆರಿಯರ್‌ನಲ್ಲಿ ಅಣ್ಣಯ್ಯ ಬೆಸ್ಟ್ ಫಿಲಂ ಎಂದು ಹೇಳಲು ಮರೆಯಲಿಲ್ಲ ಮಧುಬಾಲಾ.
ಸ್ವಲ್ಪ ಗ್ಯಾಪ್ ಬಳಿಕ ಇದೀಗ ಮತ್ತೆ ಇಂಟರ್‌ವ್ಯೂಗಳನ್ನು ಕೊಡುತ್ತ, ಮತ್ತೆ ಸಿನಿಮಾ ನಟನೆಯತ್ತ ಮನಸ್ಸು ಮಾಡಿದ್ದಾರೆ. ಅದಕ್ಕೇ ಈಗ ಹಳೆಯದನ್ನೆಲ್ಲಾ ನೆಪಿಸಿಕೊಂಡು ಹೇಳುತ್ತಿದ್ದಾರೆ. ಅದರಲ್ಲೇನೂ ತಪ್ಪಿಲ್ಲ, ಒಳ್ಳೆಯ ಅನುಭವವನ್ನು ಹೇಳಿಕೊಂಡು ಕಲಸಕ್ಕೆ ಅವಕಾಶ ಕೇಳಿದರೆ ತಪ್ಪೇನಿದೆ? ಸದ್ಯ ನಟಿ ಮಧುಬಾಲಾ ಅವರು ಕನ್ನಡ ಸಿನಿಮಾರಂಗ ಹಾಗೂ ರವಿಚಂದ್ರನ್ ಅವರನ್ನು, ಅವರು ಮಾಡುತ್ತಿದ್ದ ಹಾಡಿ ಶೂಟಿಂಗ್ ಕೆಲಸವನ್ನು ಹಾಡಿ ಹೊಗಳಿದ್ದಾರೆ.
ಸುರಸುಂದರ ನಟರನ್ನು ತಿರಸ್ಕರಿಸಿ, ಬಾಲ್ಡಿಯನ್ನು ಮದ್ವೆಯಾದ ಗುಟ್ಟು ಬಹಿರಂಗಗೊಳಿಸಿದ 'ಅಣ್ಣಯ್ಯ' ನಟಿ ಮಧುಬಾಲ!
ರವಿ ಸರ್ ಸಾಂಗ್ ಪಿಕ್ಚರೈಜೇಶನ್ ಈಸ್ ದಿ ಬೆಸ್ಟ್.. ಈ ಇಂಟರ್‌ವ್ಯೂ ನಂತರ ನಾನು ಹೆಚ್ಚು ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಲು ಇಷ್ಟಪಡ್ತೀನಿ.. ನಾನು ನಿಜವಾಗಿಯೂ ಕನ್ನಡ ಸಿನಿಪ್ರೇಕ್ಷಕರಿಗೆ, ಕನ್ನಡ ಮಾಧ್ಯಮದವರಿಗೆ ಹಾಹೂ ಕನ್ನಡ ಸಿನಿಮಾ ಮೇಕರ್ಸ್‌ಗೆ.. ' ಎಂದಿದ್ದಾರೆ ನಟಿ ಮುಧುಬಾಲಾ. ನನಗೆ ಕನ್ನಡದಲ್ಲಿ ಬೆಸ್ಟ್ ಸಿನಿಮಾಗಳನ್ನು ಕೊಟ್ಟ ಎಲ್ಲರಿಗೂ ನನ್ನ ಅನಂತ ಧನ್ಯವಾದ ಹೇಳ್ತೀನಿ.. ಕನ್ನಡದ ಅಣ್ಣಯ್ಯ ಸಿನಿಮಾ ನನ್ನ ಕೆರಿಯರ್‌ನಲ್ಲಿ ಒಂದು ಬೆಸ್ಟ್ ಸಿನಿಮಾ.
ಸಾಕಷ್ಟು ಜನರು ಸೆಟ್‌ನಲ್ಲಿ ರವಿ ಸರ್‌ಗೆ ಹೆದ್ರಿಕೊತಾ ಇದ್ರು.. ಕಾರಣ, ಅವ್ರು ಯಾವಾಗ್ಲೂ ಕೆಲಸದ ಬಗ್ಗೆನೇ ಹೆಚ್ಚು ಯೋಚ್ನೆ ಮಾಡ್ತಾ ಇದ್ರು.. ನಂಗಂತೂ ಅದೇ ಟೈಮ್‌ಗೆ, ಅಂದ್ರೆ ಕನ್ನಡದ ಅಣ್ಣಯ್ಯ ಚಿತ್ರದ ಶೂಟಿಂಗ್ ಟೈಮಲ್ಲೇ ಹಿಂದಿಯಲ್ಲಿ ರಿಷಿ ಕಪೂರ್ ಸರ್ ಜೊತೆ ಮಾಡ್ತಾ ಇದ್ದೆ.. ಅಲ್ಲಿ ಸಂಜೆ ತನಕ ಶೂಟಿಂಗ್ ಮಾಡಿ, ಫ್ಲೈಟಲ್ಲಿ ಇಲ್ಲಿ ಬೆಂಗಳೂರಿಗೆ ಬರ್ತಾ ಇದ್ದೆ.. ಆದ್ರೆ ಎಲ್ಲೂ ಟೈಂ ವೇಸ್ಟ್ ಆಗ್ತಾ ಇರ್ಲಿಲ್ಲ.. ರವಿ ಸರ್ ಸಾಂಗ್ ಶೂಟಿಂಗ್ ತುಂಬಾ ಚೆನ್ನಾಗಿ ಮಾಡ್ತಾ ಇದ್ರು..' ಎಂದು ಹೊಗಳಿದ್ದೇ ಹೊಗಳಿದ್ದು ನಟಿ ಮಧುಬಾಲಾ.
ಬ್ಯೂಟಿ ಟ್ರೀಟ್ಮೆಂಟ್ ಪ್ರಶ್ನೆಗೆ ಕೋಪಗೊಂಡ್ರಾ ರಮ್ಯಾ? ಮತ್ತೆ ನಟಿಸೋ ಗುಟ್ಟು ಬಿಚ್ಚಿಟ್ಟ ಸ್ಯಾಂಡಲ್‌ವುಡ್ ಕ್ವೀನ್!

