Asianet Suvarna News Asianet Suvarna News

ಜ್ಯೂ. ಚಿರುಗೆ ಹೆಸರಿಟ್ಟ ಮೇಘನಾ ರಾಜ್, ಸರ್ಜಾ ಕುಟುಂಬ!

ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಪುತ್ರನಿಗೆ ಅದ್ಧೂರಿ ನಾಮಕರಣ ಮಾಡಿದ ಮೇಘನಾ ರಾಜ್. ಅಷ್ಚಕ್ಕೂ ಚಿರಂಜೀವಿ ಮಗನಿಗೆ ಏನೆಂದು ಹೆಸರಿಟ್ಟಿದ್ದಾರೆ ಮೇಘನಾ? 

Sandalwood Meghana Raj Chiranjeevi sarja son Junior C naming ceremony reveals Sanskrit name vcs
Author
Bangalore, First Published Sep 3, 2021, 10:49 AM IST
  • Facebook
  • Twitter
  • Whatsapp

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್ ಹಾಗೂ ಸರ್ಜಾ ಕುಟುಂಬ ಸೆ.3, 2021ರಂದು ಜ್ಯೂನಿಯರ್ ಚಿರುಗೆ ಅದ್ಧೂರಿಯಾಗಿ ನಾಮಕರಣ ಮಾಡಿದ್ದಾರೆ. ಮೇಘನಾ ಪುತ್ರನಿಗೆ ಆಯ್ಕೆ ಮಾಡಿರುವ ಹೆಸರು ಸಖತ್ ಡಿಫರೆಂಟ್ ಆಗಿದೆ. 

ಇಂದು ಬೆಂಗಳೂರಿನ ಚಾನ್ಸರಿ ಪೆವಿಲಿಯನ್ ಹೊಟೇಲ್‌ನಲ್ಲಿ ಜ್ಯೂನಿಯರ್ ಚಿರು ನಾಮಕರಣ ಮಾಡಿದ್ದಾರೆ. ಬೆಳಗ್ಗೆಯಿಂದ ಆರಂಭವಾಗಿರುವ ಪೂಜೆಯಲ್ಲಿ ಚಿರಂಜೀವಿ ಸರ್ಜಾ ಪೋಷಕರೂ ಭಾಗಿಯಾಗಿದ್ದಾರೆ. ಮೊಮ್ಮಗನನ್ನು ಮಡಿಲಿನಲ್ಲಿ ಕೂರಿಸಿಕೊಂಡು ಪೂಜೆ ಮಾಡಿದ್ದಾರೆ ಚಿರಂಜೀವಿ ಪೋಷಕರು. ರಾಯನ್ ರಾಜ್ ಎಂದು ನಾಮಕರಣ ಮಾಡಿರೋ ಕುಟುಂಬ. ಸಂಸ್ಕೃತದಲ್ಲಿ ರಾಯನ್ ರಾಜ್ ಎಂದರೆ ಯುವರಾಜ ಅಂತ ಅರ್ಥ.

Sandalwood Meghana Raj Chiranjeevi sarja son Junior C naming ceremony reveals Sanskrit name vcs

ನಾಳೆ ಪುತ್ರನ ಹೆಸರು ರಿವೀಲ್ ಮಾಡ್ತಾರೆ ಮೇಘನಾ ರಾಜ್; ವಿಶೇಷ ಟೀಸರ್ ರಿಲೀಸ್!

ಚೆನ್ನೈನಲ್ಲಿ ವಾಸವಿರುವ ಅರ್ಜುನ್ ಸರ್ಜಾ ನಾಮಕರಣಕ್ಕೆ ಆಗಮಿಸಲಾಗದ ಕಾರಣ ವಿಡಿಯೋ ಕಾಲ್ ಮೂಲಕ ಎಲ್ಲರೊಂದಿಗೆ ಮಾತನಾಡಿದ್ದಾರೆ. ಧ್ರುವ ಸರ್ಜಾ, ಪ್ರೇರಣಾ ಅರ್ಜಾ, ಸೂರಜ್, ತೇಜ್ ರಾಜ್ ಸೇರಿ ಕುಟುಂಬಸ್ಥರು ನಾಮಕರಣದಲ್ಲಿ ಭಾಗಿಯಾಗಿದ್ದರು. ಜ್ಯೂನಿಯರ್ ಹುಟ್ಟುವ ಮುನ್ನವೇ ಧ್ರುವ ಸರ್ಜಾ ಬೆಳ್ಳಿ ತೊಟ್ಟಿಲು ಗಿಫ್ಟ್‌ ನೀಡಿದ್ದರು. ಇಂದು ನಾಮಕರಣದಲ್ಲಿ ಆ ಬೆಳ್ಳಿ ತೊಟ್ಟಿಲಿಗೆ ಹೂವಿನ ಅಲಂಕಾರ ಮಾಡಿ ಬಳಸಿದ್ದಾರೆ.

Sandalwood Meghana Raj Chiranjeevi sarja son Junior C naming ceremony reveals Sanskrit name vcs

10 ತಿಂಗಳ ಬಳಿಕ ಪುತ್ರನಿಗೆ ನಾಮಕರಣ ಮಾಡುತ್ತಿರುವ ಮೇಘನಾ ರಾಜ್ ಹೋಟೆಲ್ ಎಂಟ್ರೆನ್ಸ್‌ನಲ್ಲಿ 'ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರ ಲಿಟಲ್ ಪ್ರಿನ್ಸ್  ನಾಮಕರಣಕ್ಕೆ ಸ್ವಾಗತ,' ಎಂದು ಬೋರ್ಡ್ ಹಾಕಿದ್ದಾರೆ. ಇಡೀ ಹೋಟೆಲ್‌ನ ಬಲೂನ್‌ಗಳಿಂದ ಅಲಂಕಾರ ಮಾಡಲಾಗಿದೆ.

"

Follow Us:
Download App:
  • android
  • ios