ಬೆಂಗಳೂರು/ ನ್ಯೂಯಾರ್ಕ್(ಫೆ. 26) ಕಿಚ್ಚ ಸುದೀಪ್ ಅಭಿಮಾನಿ ನ್ಯೂಯಾರ್ಕ್​​ನಲ್ಲಿ  ಕನ್ನಡದ ಧ್ವಜ ಹಾರಿಸಿದ್ದಾರೆ. ಕಿಚ್ಚನಿಂದ ಸ್ಫೂರ್ತಿ ಪಡೆದು ಕನ್ನಡ ಭಾಷಾಭಿಮಾನ ತೋರಿದ ನ್ಯೂಯಾರ್ಕ್​ ವಾಸಿಗೆ ಸ್ವತಃ ಸುದೀಪ್ ಅವರೇ ಮೆಚ್ಚುಗೆ ಸೂಚಿಸಿದ್ದಾರೆ.

ಬುರ್ಜ್ ಕಲೀಫಾ ಮೇಲೆ ಕನ್ನಡ ಧ್ವಜ ಅಲಂಕೃತಗೊಂಡಿತ್ತು.  ವಿಕ್ರಾಂತ್ ರೋಣ ಸಿನಿಮಾದ ಟೈಟಲ್​ ಲಾಂಚ್​ನಲ್ಲಿ ಸುದೀಪ್ ಟೀಂ ಹೊಸ ಸಾಹಸ ಮಾಡಿತ್ತು. ಇದರಿಂದ ಪ್ರೇರಣೆ ಪಡೆದು ನ್ಯೂಯರ್ಕ್​​​ನಲ್ಲಿ ತನ್ನ ಕಾರಿನ ನಂಬರ್​ ನಲ್ಲಿ ಕನ್ನಡಾಭಿಮಾನ ಮೂಡಿ ಬಂದಿದೆ.

ವಿಕ್ರಾಂತ್ ರೋಣ ಅಬ್ಬರಿಸಿದ್ದು ಹೇಗೆ? 

ನ್ಯೂಯಾರ್ಕ್​ ನಲ್ಲಿ ನೆಲೆಸಿರೋ ಶಂಕರ್ ಎನ್ನುವ ವ್ಯಕ್ತಿ ತಮ್ಮ ಕಾರಿಗೆ ಕನ್ನಡ ಎಂದು ನಾಮಕರಣ ಮಾಡಿದ್ದಾರೆ.  ನ್ಯೂಯಾರ್ಕ್​ನಲ್ಲಿ ಕಾರಿಗೆ ನಂಬರ್ ಬದಲು ಕಾರಿಗೆ ತಮ್ಮ ಇಷ್ಟದ ಹೆಸರಿಡೋಕೆ ಅವಕಾಶ ಇದೆ. ಶಂಕರ್​ ಅವರ ಭಾಷಾಭಿಮಾನಕ್ಕೆ ಮನ ಸೋತ ಸುದೀಪ್​ ಧನ್ಯವಾದ ತಿಳಿಸಿದ್ದಾರೆ.