Asianet Suvarna News Asianet Suvarna News

ಮ್ಯಾಕ್ಸ್‌ ನಂತ್ರ ಮತ್ತೊಂದು ಬಿಗ್‌ ಬಜೆಟ್ ಸಿನಿಮಾದಲ್ಲಿ ಸುದೀಪ್‌: ಕಿಚ್ಚನಿಗೆ ಹೇಮಂತ್ ರಾವ್ ಆ್ಯಕ್ಷನ್ ಕಟ್!

ಕಿಚ್ಚ ಸುದೀಪ್‌ ಸದ್ಯ ಮ್ಯಾಕ್ಸ್‌ ಸಿನಿಮಾದ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಬಹುಪಾಲು ಶೂಟಿಂಗ್‌ ಮುಗಿದಿದ್ದು, ಪೋಸ್ಟ್‌ ಪ್ರೊಡಕ್ಷನ್ಸ್‌ ಕೆಲಸದಲ್ಲಿಯೂ ಈ ಸಿನಿಮಾ ತಂಡ ತೊಡಗಿಸಿಕೊಂಡಿದೆ. ಇದೀಗ ಗ್ಯಾಪ್‌ನಲ್ಲಿಯೇ ಮ್ಯಾಕ್ಸ್‌ ಬಳಿಕ ಕಿಚ್ಚ ಸುದೀಪ್‌ ಯಾವ ಸಿನಿಮಾಕ್ಕೆ ಚಾಲನೆ ನೀಡಲಿದ್ದಾರೆ ಎಂಬ ವಿಚಾರ ಮುನ್ನೆಲೆಗೆ ಬಂದಿದೆ. 

sandalwood director hemanth m rao to direct kichcha sudeep under sandesh productions gvd
Author
First Published Jun 1, 2024, 10:11 PM IST

ಕಿಚ್ಚ ಸುದೀಪ್‌ ಸದ್ಯ ಮ್ಯಾಕ್ಸ್‌ ಸಿನಿಮಾದ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಬಹುಪಾಲು ಶೂಟಿಂಗ್‌ ಮುಗಿದಿದ್ದು, ಪೋಸ್ಟ್‌ ಪ್ರೊಡಕ್ಷನ್ಸ್‌ ಕೆಲಸದಲ್ಲಿಯೂ ಈ ಸಿನಿಮಾ ತಂಡ ತೊಡಗಿಸಿಕೊಂಡಿದೆ. ಇದೀಗ ಗ್ಯಾಪ್‌ನಲ್ಲಿಯೇ ಮ್ಯಾಕ್ಸ್‌ ಬಳಿಕ ಕಿಚ್ಚ ಸುದೀಪ್‌ ಯಾವ ಸಿನಿಮಾಕ್ಕೆ ಚಾಲನೆ ನೀಡಲಿದ್ದಾರೆ ಎಂಬ ವಿಚಾರ ಮುನ್ನೆಲೆಗೆ ಬಂದಿದೆ. ಈ ನಡುವೆ ಸುದೀಪ್‌ ಅವರ ಹೊಸ ಸಿನಿಮಾವೊಂದರ ಅಪ್‌ಡೇಟ್‌ ಸಹ ಹೊರಬಿದ್ದಿದ್ದು, ಸಂದೇಶ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ಈ ಸಿನಿಮಾ ಸೆಟ್ಟೇರಲಿದೆ. ನಿರ್ಮಾಪಕ ಎನ್ ಸಂದೇಶ್ ಹಾಗೂ ಅವರ ತಂದೆ ಮತ್ತು ಖ್ಯಾತ ನಿರ್ಮಾಪಕ ಸಂದೇಶ್ ನಾಗರಾಜ್ ಮತ್ತು ಮ್ಯಾಕ್ಸ್ ಹೀರೋ ಸುದೀಪ್ ಮನೆಗೆ ತೆರಳಿ ಕಿಚ್ಚನನ್ನು ಭೇಟಿಯಾಗಿದ್ದಾರೆ. 

ಅದಾದ ನಂತರ ಸುದೀಪ್ ಜೊತೆ ಇರುವ ಫೋಟೋ ಶೇರ್ ಮಾಡಿರುವ ಸಂದೇಶ್, ಸಂದೇಶ್ ಪ್ರೊಡಕ್ಷನ್ಸ್‌ನಿಂದ ಫೆಂಟಾಸ್ಟಿಕ್ ಸುದ್ದಿ ಬರಲಿದೆ, ಜಸ್ಟ್ ವೇಟ್ ಆ್ಯಂಡ್ ವಾಚ್, ಫೆಂಟಾಸ್ಟಿಕ್ ನ್ಯೂಸ್ ಬರುತ್ತೇ ಎಂದು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಕಿಚ್ಚನ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಸಂದೇಶ್ ಸುದೀಪ್ ಅವರನ್ನು ಚೆನ್ನೈನಲ್ಲಿ ಭೇಟಿಯಾಗಿದ್ದರು ಎಂಬ ಬಗ್ಗೆ ಈ ಹಿಂದೆ ಸಿನಿಮಾ ಎಕ್ಸ್ ಪ್ರೆಸ್ ವರದಿ ಮಾಡಿತ್ತು. ಸಂದೇಶ್ ಪ್ರೊಡಕ್ಷನ್ ಸಿನಿಮಾದಲ್ಲಿ ಕಿಚ್ಚ ಅಭಿನಯಿಸುವ ಬಗ್ಗೆ ತಿಳಿಸಲಾಗಿತ್ತು. ಎಲ್ಲವೂ ಅಂದುಕೊಂಡಂತೆ ಆದರೆ ಈ ಸಿನಿಮಾದಲ್ಲಿ ಹಲವು ಬಹು ಭಾಷಾ ನಟರು ಕೂಡ ಅಭಿನಯಿಸಲಿದ್ದಾರೆ. 
 


ಅವರ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಸಂದೇಶ್ ಉಲ್ಲೇಖಿಸಿದ್ದಾರೆ. ಪ್ರೊಡಕ್ಷನ್ ಹೌಸ್‌ನ ಇತ್ತೀಚಿನ ಪೋಸ್ಟ್ ಇಬ್ಬರ ಕಾಂಬಿನೇಷನ್ ಸಿನಿಮಾ ಖಚಿತ ಪಡಿಸಿದೆ.  ಈ ಸುದ್ದಿಯನ್ನು ಸಂದೇಶ್ ಖಚಿತ ಪಡಿಸಿದ್ದು, ಸುದೀಪ್ ಅವರ ಸಿನಿಮಾಗೆ ಹೇಮಂತ್ ಎಂ ರಾವ್ ನಿರ್ದೇಶನ ಮಾಡುವ ಸಾಧ್ಯತೆ ಬಗ್ಗೆ ಸಂದೇಶ್ ಸುಳಿವು ನೀಡಿದ್ದಾರೆ.   ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ನಿರ್ದೇಶನದ ಮೂಲಕವೇ ಗಮನ ಸೆಳೆದ ಯುವ ನಿರ್ದೇಶಕರಲ್ಲಿ ಹೇಮಂತ್‌ ಎಂ ರಾವ್‌ ಸಹ ಒಬ್ಬರು. ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ, ಸಪ್ತಸಾಗರದಾಚೆ ಎಲ್ಲೋ ಸೈಡ್‌ 1 ಮತ್ತು ಸೈಡ್‌ 2 ಚಿತ್ರಗಳನ್ನು ನಿರ್ದೇಶಿಸಿ ಕನ್ನಡ ನೆಲದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇದೀಗ ಇದೇ ನಿರ್ದೇಶಕ ಮೊದಲ ಸಲ ಕಿಚ್ಚ ಸುದೀಪ್‌ ಅವರ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಲಿದ್ದಾರೆ ಎನ್ನಲಾಗುತ್ತಿದೆ. 

ನರ್ಸ್‌ನ ಇಟ್ಕೋಬಹುದಲ್ಲ, ಮದ್ವೆಯೆಲ್ಲಾ ಯಾಕೆ: ಹಿರಿಯ ನಟ ದತ್ತಣ್ಣ

ಈ ಬಗ್ಗೆ ಚಿತ್ರತಂಡವೇ ಅಧಿಕೃತವಾಗಿ ಘೋಷಣೆ ಮಾಡಬೇಕಿದೆ. ಸದ್ಯ ಶಿವರಾಜ್‌ಕುಮಾರ್‌ ಅವರಿಗೆ ನಿರ್ದೇಶಕ ಹೇಮಂತ್‌ ಎಂ ರಾವ್‌ ಸಿನಿಮಾವೊಂದನ್ನು ನಿರ್ದೇಶನ ಮಾಡಬೇಕಿದೆ. ಈಗಾಗಲೇ ತೆರೆಮರೆಯಲ್ಲಿ ಅದರ ತಯಾರಿಯೂ ನಡೆದಿದೆ. ಇನ್ನೂ ಶೀರ್ಷಿಕೆ ಅಂತಿಮವಾಗದ ಸಿನಿಮಾದ ಸ್ಕ್ರಿಪ್ಟ್‌ ಕೆಲಸದಲ್ಲಿ ಹೇಮಂತ್‌ ಬಿಜಿಯಾಗಿದ್ದಾರೆ. ಈ ಸಿನಿಮಾ ಮುಗಿದ ಬಳಿಕವೇ ಸುದೀಪ್‌ ಜತೆಗಿನ ಚಿತ್ರದತ್ತ ಅವರು ಮುಖಮಾಡಲಿದ್ದಾರೆ. ಏತನ್ಮಧ್ಯೆ, ಸುದೀಪ್ ಶೀಘ್ರದಲ್ಲೇ ಚೇರನ್ ಚಿತ್ರೀಕರಣವನ್ನು ಪ್ರಾರಂಭಿಸುತ್ತಾರೆ, ನಂತರ ಅನುಪ್ ಭಂಡಾರಿ ಜೊತೆಗಿನ ಬಿಲ್ಲಾ ರಂಗ ಬಾಷಾ ಹಾಗೂ ಕೆಆರ್‌ಜಿಯೊಂದಿಗೆ ಮತ್ತೊಂದು ಪ್ರಾಜೆಕ್ಟ್‌ಗೂ ಸುದೀಪ್ ಸಹಿ ಹಾಕಿದ್ದಾರೆ.

Latest Videos
Follow Us:
Download App:
  • android
  • ios