* ಕೊರೋನಾಕಕ್ಕೆ ಬಲಿಯಾದ ಸ್ಯಾಂಡಲ್ ವುಡ್ ನಿರ್ದೇಶಕ* ಕಳೆದೊಂದು ವಾರದಿಂದ ಕೊರೋನಾ ಸೋಂಕಿನಿಂದ ಬಳಲುತ್ತಿದ್ದರು* ಯುವ ನಿರ್ದೇಶಕ ಅಭಿರಾಮ್ ಇನ್ನಿಲ್ಲ* ಸಂಯುಕ್ತ 2, ಹಾಗು 0% ಲವ್ ಸಿನಿಮಾದ ನಿರ್ದೇಶಕ
ಬೆಂಗಳೂರು(ಮೇ 28) ಕ್ರೂರಿ ಕೊರೋನಾ ಸ್ಯಾಂಡಲ್ ವುಡ್ ಕಾಡುತ್ತಿದೆ. ಕೊರೋನಾಗೆ ನಿರ್ದೇಶಕ ಅಭಿರಾಮ್ ಬಲಿಯಾಗಿದ್ದಾರೆ. ಶುಕ್ರವಾರ ನಿರ್ದೇಶಕ ಕೊನೆಯುಸಿರೆಳೆದಿದ್ದಾರೆ.
ಕಳೆದೊಂದು ವಾರದಿಂದ ಕೊರೋನಾ ಸೋಂಕಿನಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆಯದೇ ಮನೆಯಲ್ಲೇ ಇದ್ದರು. ಕೊನೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಬಳಿಕ ಟೆಸ್ಟ್ ಮಾಡಿಸಿದಾಗ ಕೊರೋನಾ ಪಾಸಿಟೀವ್ ಬಂದಿದೆ. ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದರು.
ಬೆಡ್ ಸಿಗದೆ ಮರೆಯಾದ ಹಿರಿಯ ಜೀವ ರಾಜಾರಾಂ
ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಭಿರಾಮ್ ನಿಧನರಾಗಿದ್ದಾರೆ. ಸಂಯುಕ್ತ 2, ಹಾಗು 0% ಲವ್ ಸಿನಿಮಾ ನಿರ್ದೇಶಿಸಿದ್ದರು. ಇತ್ತೀಚೆಗೆ 0% ಲವ್ ಸಿನಿಮಾದ ನಟ ನಿರ್ಮಾಪಕ ಮಂಜುನಾಥ್ ಕೊರೋನಾಗೆ ಬಲಿಯಾಗಿದ್ದರು.
ಹಿರಿಯ ನಟ ರಾಜಾರಾಮ್, ಕೃಷ್ಣೇಗೌಡ ಸೇರಿದಂತೆ ಅನೇಕ ಕಲಾವಿದರು ಕೊರೋನಾ ಮಹಾಮಾರಿಯಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ರಾಮು ಕೋಟಿ ನಿರ್ಮಾಪಕರಾಗಿ ಬೆಳೆದ ಸ್ಟೋರಿ
"
