ಬೆಂಗಳೂರು (ಮಾ. 13): ನಾಗರಹೊಳೆ ಹಾಗೂ ಬಂಡೀಪುರದಲ್ಲಿ ದರ್ಶನ್ ತೆಗೆದ ವೈಲ್ಡ್ ಲೈಫ್ ಫೋಟೋಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಾಗಿದೆ. ವೈಲ್ಡ್ ಲೈಫ್ ಫೋಟೋ ತೆಗೆಯಲು ಸ್ಯಾಂಡಲ್ ವುಡ್ ಸೆಲಬ್ರಿಟಿಗಳು ಮುಗಿ ಬಿದ್ದಿದ್ದಾರೆ. 

ಮಹೇಶ್ ಬಾಬು ಸಿನಿಮಾ ಆಫರ್‌ಗೆ ’ನೋ’ಎಂದ ಉಪೇಂದ್ರ!

ಈಗಾಗಲೇ ಸೃಜನ್ ಲೋಕೇಶ್, ವಿನೋದ್ ಪ್ರಭಾಕರ್, ಪ್ರಜ್ವಲ್ ದೇವರಾಜ್, ಶೃತಿ ನಾಯ್ಡು, ಯಶಸ್ ಸೂರ್ಯ ಸೇರಿದಂತೆ ಸಾಕಷ್ಟು ಮಂದಿ ಖರೀದಿಸಿದ್ದಾರೆ. ಈ ಫೋಟೋಗಳ ಮಾರಾಟದಿಂದ ಬಂದ ಹಣವನ್ನು ಅರಣ್ಯ ರಕ್ಷಣೆಯಲ್ಲಿ ತೊಡಗಿರುವವರ ರಕ್ಷಣಾ ನಿಧಿಗೆ ನೀಡಲು ದರ್ಶನ್ ನಿರ್ಧರಿಸಿದ್ದಾರೆ. ಅರಣ್ಯ ಸಂರಕ್ಷರ ಸಮಸ್ಯೆಗೂ ಈ ಹಿಂದೆ ನೆರವಾಗಿದ್ದರು. 

ಯಶ್ ಅಭಿಮಾನಿಗಳಿಗೆ ಗುಡ್‌ನ್ಯೂಸ್! ಶುರುವಾಗುತ್ತಿದೆ ಕೆಜಿಎಫ್-2 ಶೂಟಿಂಗ್

ದರ್ಶನ್ ಗೆ ಕಾಡು, ಕಾಡುಪ್ರಾಣಿಗಳು ಮೇಲೆ ಪ್ರೀತಿ ಹೆಚ್ಚು. ಬಿಡುವಿದ್ದಾಗಲೆಲ್ಲಾ ಕಾಡಿಗೆ ಹೋಗಿ ವೈಲ್ಡ್ ಲೈಫ್ ಫೋಟೋಗ್ರಫಿ ಮಾಡುತ್ತಾರೆ. ಒಂದೊಂದು ಫೋಟೋ ತೆಗೆಯಲು ದಿನವೆಲ್ಲಾ ಕಾಡು ಸುತ್ತಾಡಿದ್ದಾರೆ. ಒಂದೊಂದು ಪ್ರಾಣಿಗೆ ಗಂಟೆಗಟ್ಟಲೇ ಕಾದಿದ್ದಾರೆ.