ಕನ್ನಡ ಚಿತ್ರರಂಗದ ಸಿಂಪಲ್ ಆ್ಯಂಡ್ ಬ್ಯೂಟಿಫುಲ್ ಚೆಲುವೆ ಶೃತಿ ಹರಿಹರನ್ ತಮ್ಮ ನಿವಾಸದಲ್ಲಿ ಮಗಳಿಗೆ ನಾಮಕರಣ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

'ಲೂಸಿಯ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಮಲಯಾಳಿ ಕುಟ್ಟಿ ಶೃತಿ ಹರಿಹರನ್‌ ಮೋಸ್ಟ್‌ ಡಿಸರ್ವಿಂಗ್ ನಟಿಯ ಪಟ್ಟವನ್ನು ತನ್ನ ಮುಡಿಗೇರಿಸಿಕೊಂಡರು. ನಟರಿಗಿಂತ ಚಿತ್ರಕಥೆ, ನಿರ್ದೇಶನ ಮಾಡುವ ರೀತಿ ಮುಖ್ಯವೆಂದು ಸ್ಕ್ರೀಪ್ಟ್‌ ಆಯ್ಕೆ ಮಾಡಿಕೊಳ್ಳುತ್ತಿದ್ದ ರೀತಿಗೇ ಜನರು ಫಿದಾ ಆಗುತ್ತಿದ್ದರು.

ಇನ್ನು ಜುಲೈ ತಿಂಗಳಲ್ಲಿ ಮನೆಗೆ ವರಮಹಾ ಲಕ್ಷ್ಮಿಯನ್ನು ಬರ ಮಾಡಿಕೊಂಡ ಶೃತಿ ಕೆಲ ದಿನಗಳ ಹಿಂದೆ ಮಗಳಿಗೆ ನಾಮಕರಣ ಮಾಡಿದ್ದಾರೆ. ಶೃತಿ ಮಗಳು ಹೇಗಿದ್ದಾಳೆ? ಯಾರನ್ನು ಹೋಲುತ್ತಾಳೆ ಎಂಬೆಲ್ಲಾ ಕುತೂಹಲಕ್ಕೆ ಈಗ ಬ್ರೇಕ್‌ ಬಿದ್ದಿದೆ.

66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ಯಾರ್ಯಾರಿಗೆ ಪ್ರಶಸ್ತಿ ಗರಿ? ಇಲ್ಲಿದೆ ನೋಡ!

ನಾಮಕರಣದ ವೇಳೆ ಶೃತಿ ಪತಿ ರಾಮ್ ಮಗಳನ್ನು ಪಂಚೆಯಲ್ಲಿ ಸುತ್ತಿ ಎತ್ತಿಕೊಂಡಿದ್ದು ಪಕ್ಕದಲ್ಲಿ ಪಿಂಕ್‌ ಸೀರೆಯಲ್ಲಿ ಶೃತಿ ಹಾಗೂ ಕುಟುಂಬಸ್ಥರು ಕುಳಿತುಕೊಂಡಿದ್ದಾರೆ. ಕೆಲವು ಮೂಲಗಳ ಪ್ರಕಾರ ಮಗಳಿಗೆ 'ಜಾನಕಿ' ಎಂದು ನಾಮಕರಣ ಮಾಡಲಾಗಿದೆ ಎಂದು ಹೇಳಲಾಗುತ್ತದೆ.

View post on Instagram

ಕೆಲ ದಿನಗಳ ಹಿಂದೆ ಮಗಳ ಕಾಲು ಬೆರಳುಗಳ ವಿಡಿಯೋ ಶೇರ್ ಮಾಡಿಕೊಂಡು 'ಈ ಪುಟ್ಟ ಕಾಲುಗಳ ಜೊತೆ ಒಂದು ದಿನ ಕುಣಿದಾಡುವೆ, ಓಡಾಡುವೆ, ಬೆಟ್ಟ ಹತ್ತುವೆ, ಸಮುದ್ರ ದಾಟುವೇ ಆದರೀಗ ಸಂತೋಷದಲ್ಲಿ ನಿನ್ನ ಪುಟ್ಟ ಬೆರಳುಗಳನ್ನು ನೋಡಿ ಸಂಭ್ರಮಿಸುವೆ ' ಎಂದು ಬರೆದುಕೊಂಡಿದ್ದರು.