ಶ್ರದ್ಧಾ ಶ್ರೀನಾಥ್ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ‘ರುದ್ರಪ್ರಯಾಗ’ ಜಯಣ್ಣ ಕಂಬೈನ್ಸ್ ಮೂಲಕ ನಿರ್ಮಾಣವಾಗುತ್ತಿರುವ ಚಿತ್ರ. ಸದ್ಯಕ್ಕೆ ಸ್ಕ್ರಿಫ್ಟ್ ವರ್ಕ್ ಮುಗಿದು, ಕಲಾವಿದರ ಆಯ್ಕೆಯಲ್ಲಿ ಬ್ಯುಸಿ ಆಗಿದ್ದಾರೆ ರಿಷಬ್.  ಕುತೂಹಲ ಇರುವುದು ಚಿತ್ರದಲ್ಲಿನ ಶ್ರದ್ಧಾ ಶ್ರೀನಾಥ್ ಪಾತ್ರದ ಬಗ್ಗೆ.

ಮಕ್ಕಳೇ ಬೇಡ ಎಂದ 'ಯೂ ಟರ್ನ್’ ನಟಿ ಶ್ರದ್ಧಾ

ರಿಷಬ್ ಪ್ರಕಾರ ಚಿತ್ರದಲ್ಲಿ ಶ್ರದ್ಧಾ ಅವರದ್ದೂ ಪ್ರಮುಖವಾದ ಪಾತ್ರ. ‘ಅವರದ್ದು ರೆಗ್ಯುಲರ್ ತರಹದ ಪಾತ್ರವಲ್ಲ. ಚಿತ್ರದಲ್ಲಿ ಒಟ್ಟು ೯ ಪಾತ್ರಗಳಿವೆ. ಅವೆಲ್ಲ ಕತೆಯ ಉದ್ದಕ್ಕೂ ಕಾಣಿಸಿಕೊಳ್ಳು ವಂತಹ ಪಾತ್ರಗಳು. ಅದರಲ್ಲಿ ಶ್ರದ್ದಾ ಕೂಡ ಒಬ್ಬರು. ಅವರ ಪಾತ್ರಕ್ಕೆ ತುಂಬಾ ವೈಶಿಷ್ಟ್ಯಗಳಿವೆ. ಇದುವರೆಗೂ ಅವರು ಇಂತಹ ಪಾತ್ರದಲ್ಲಿ ಅಭಿನಯಿಸಿಲ್ಲ’ ಎನ್ನುತ್ತಾರೆ ರಿಷಬ್ ಶೆಟ್ಟಿ.

'ನಾನು ನಿರ್ದೇಶಕ ಮಾತ್ರ, ನಟನೆ ಮಾಡಲ್ಲ'!