'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ಟಾಲಿವುಡ್ ಹಾಗೂ ಹಾಲಿವುಡ್‌ನಲ್ಲೂ ಬ್ಯುಸಿಯಾಗಿದ್ದಾರೆ.

ಅಯ್ಯಯ್ಯೋ... ವೇದಿಕೆ ಮೇಲೆ ರಶ್ಮಿಕಾ ಮಂದಣ್ಣಗೆ 'ರಶ್ಮಿಕಾ ಮಂಡೂಕ' ಅಂದ್ರಾ ಮೆಗಾಸ್ಟಾರ್?

ಇತ್ತೀಚಿಗೆ ಮಹೇಶ್ ಬಾಬುಗೆ ಜೋಡಿಯಾಗಿ ಮಿಂಚಿರುವ ಚಿತ್ರ 'ಸರಿಲೇರು ನೀಕ್ಕವ್ವರು' ಚಿತ್ರದ ಟ್ರೈಲರ್‌ ವೀಕ್ಷಿಸಿದ ಅಭಿಮಾನಿಗಳು ಆಕೆಯನ್ನು ಓವರ್ ಆ್ಯಕ್ಟಿಂಗ್ ಕ್ವೀನ್ ಅನೋ ಪಟ್ಟ ನೀಡಿದ್ದರು, ಟ್ರೋಲ್ ಕ್ವೀನ್ ಆದ್ರೂ ಟ್ರೈಲರ್‌ ಒಂದೇ ದಿನದಲ್ಲಿ 9.8 ಮಿಲಿಯನ್ ವೀಕ್ಷಣೆ ಪಡೆದುಕೊಂಡು ಯೂಟ್ಯೂಬ್ ಟ್ರೇಡಿಂಗ್ ಲಿಸ್ಟ್‌ ಸೇರಿಕೊಂಡಿತ್ತು. ಜನವರಿ 11ರಂದು ತೆರೆಕಾಣುತ್ತಿರುವ ಚಿತ್ರದ ಸೂಪರ್ ಹಿಟ್ ಆಗುವುದರಲ್ಲಿ ಅನುಮಾನವಿಲ್ಲ. 

ಇನ್ನು ಸ್ಟಾರ್ ನಟರೊಂದಿಗೆ ಮಾತ್ರ ನಟಿಸುತ್ತಾರೆ ರಶ್ಮಿಕಾ ಅನ್ನೊ ಆರೋಪಕ್ಕೆ ಇಲ್ಲಿದೆ ನೋಡಿ ಕ್ಲಾರಿಟಿ:

ರಶ್ಮಿಕಾ ಓವರ್‌ ಆ್ಯಕ್ಟಿಂಗ್‌ ಟ್ರೈಲರ್‌ಗೆ 9.5 ಮಿಲಿಯನ್ ವೀಕ್ಷಣೆ ಕೊಟ್ಟ ಟಾಲಿವುಡ್‌ ಮಂದಿ!

- ಸ್ಯಾಂಡಲ್‌ವುಡ್‌ನಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ ಪೊಗರು ಚಿತ್ರದಲ್ಲಿ ಅಭಿನಯಿಸಿದ್ದಾರೆ, ಸದ್ಯಕ್ಕೆ ಚಿತ್ರ ಪೋಸ್ಟ್‌ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ತೆರೆ ಕಾಣಲು ಸಜ್ಜಾಗುತ್ತಿದೆ.

- ಆರ್ ಆರ್ ಆರ್ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ರಾಮ್ ಚರಣ್ ತಮ್ಮ ಮುಂದಿನ ಸಿನಿ ಪ್ರಾಜೆಕ್ಟ್‌ ರಿವೀಲ್ ಮಾಡಲಾಗುತ್ತಿದ್ದು, ನಾಯಕಿಯಾಗಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತಿದೆ.

- ಇನ್ನು ಜೂನಿಯರ್ ಎನ್ ಟಿ ಆರ್ ಜೊತೆ ತ್ರಿವಿಕ್ರಮ ಚಿತ್ರದಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.