ದಕ್ಷಿಣ ಭಾರತದ ಹೈ ಡಿಮ್ಯಾಂಡ್ ನಟಿ ಹಾಗೂ ಕರ್ನಾಟಕದ ಸ್ಟೇಟ್‌ ಕ್ರಶ್ ರಶ್ಮಿಕಾ ಮಂದಣ್ಣ ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಮಹೇಶ್‌ ಬಾಬು ಜೊತೆ ಅಭಿನಯಿಸಿರುವ 'ಸರಿಲೇರು ನೀಕ್ಕವ್ವರು' ಚಿತ್ರದ ಟ್ರೈಲರ್‌ ಬಿಡುಗಡೆಯಾಗಿತ್ತು. ಅಚ್ಚರಿ ಏನೆಂದರೆ ಒಂದೇ ದಿನದಲ್ಲಿ 9.5 ಮಿಲಿಯನ್‌ ವೀಕ್ಷಣೆ ಆಗಿದೆ. 

ರಶ್ಮಿಕಾ ಅಕ್ಕನಂತಿದ್ದಾರೆ ಅಮ್ಮ, ಮಗಳಂತಿದ್ದಾರೆ ತಂಗಿ; ಇದು ರಶ್ಮಿಕಾ ಕ್ಯೂಟ್ ಫ್ಯಾಮಿಲಿ!

'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಕೆಲವೇ ದಿನಗಳಲ್ಲಿ ರಕ್ಷಿತ್ ಜೊತೆ ಗಾಸಿಪ್‌ನಲ್ಲಿ ಸಿಕ್ಕಿ ಹಾಕಿಕೊಂಡರು.  ಆ ನಂತರ ಅಧಿಕೃತವಾಗಿ ಗುರು-ಹಿರಿಯರ ನಡುವೆ ನಿಶ್ಚಿತಾರ್ಥವೇನೋ ಮಾಡಿಕೊಂಡರು.  ಆದರೆ ವೈಯಕ್ತಿಕ ಕಾರಣಗಳಿಂದ  ದೂರವಾದರು. ಅಂದಿನಿಂದ ರಶ್ಮಿಕಾ ಟ್ರೋಲಿಗರಿಗೆ ಆಹಾರವಾದರು.

ಇನ್ನು 'ಸರಿಲೇರು ನೀಕ್ಕವ್ವರು' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಆ್ಯಕ್ಟಿಂಗನ್ನು ಸೂಕ್ಷ್ಮವಾಗಿ ಗಮನಿಸಿದ ಟಾಲಿವುಡ್ ಅಭಿಮಾನಿಗಳು ಕಾಮೆಂಟ್‌ಗಳಲ್ಲಿ ನೇರವಾಗಿ ಬೈದಿದ್ದಾರೆ. 'Behind all this great stars, their is a little overacting star', 'ಓವರ್‌ ಆ್ಯಕ್ಟಿಂಗ್ ಏನೆಂದು ಕೇಳಿದ್ರೆ ಅದು ಈಕೆನೇ'  ಎಂದು ಕಾಮೆಂಟ್ ಮಾಡಿದ್ದಾರೆ.