Asianet Suvarna News Asianet Suvarna News

ದರ್ಶನ್ ಭೇಟಿಯಾಗಿ ಗುರುರಾಯರ ಪ್ರಸಾದ ಕೊಟ್ಟ ರಚಿತಾ ರಾಮ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ತೂಗುದೀಪ ಅವರನ್ನು ನಟಿ ರಚಿತಾ ರಾಮ್ ಭೇಟಿಯಾಗಿ ಗುರುವಾರ ಕುಶಲೋಪರಿ ವಿಚಾರಿಸಿದ್ದಾರೆ. ಇದೇ ವೇಳೆ ರಾಯರ ಆರಾಧನೆ ಇರುವ ಕಾರಣ ರಾಘವೇಂದ್ರ ಸ್ವಾಮಿಗಳ ಪ್ರಸಾದ ನೀಡಿದ್ದಾರೆ.

Sandalwood actress Rachita Ram met actor darshan in parappana agrahara and gave him prasada of guru raghavendra swamy rav
Author
First Published Aug 23, 2024, 7:19 AM IST | Last Updated Aug 23, 2024, 7:19 AM IST

Rachita ram met actor Darshan ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ತೂಗುದೀಪ ಅವರನ್ನು ನಟಿ ರಚಿತಾ ರಾಮ್ ಭೇಟಿಯಾಗಿ ಗುರುವಾರ ಕುಶಲೋಪರಿ ವಿಚಾರಿಸಿದ್ದಾರೆ. ಇದೇ ವೇಳೆ ರಾಯರ ಆರಾಧನೆ ಇರುವ ಕಾರಣ ರಾಘವೇಂದ್ರ ಸ್ವಾಮಿಗಳ ಪ್ರಸಾದ ನೀಡಿದ್ದಾರೆ.

ದರ್ಶನ್‌(Actor darshan) ಭೇಟಿಗೆ ಜೈಲಧಿಕಾರಿಗಳ ಅನುಮತಿ ಪಡೆದಿದ್ದ ಅವರು, ಅಂತೆಯೇ ದರ್ಶನ್‌ ಆಪ್ತ, ಮಂಡ್ಯ ಜಿಲ್ಲೆ ಬಿಜೆಪಿ ಮುಖಂಡ ಇಂಡವಾಳು ಸಚ್ಚಿದಾನಂದ ಜತೆ ಜೈಲಿಗೆ ತೆರಳಿ ತಮ್ಮ ಗುರುವನ್ನು ಭೇಟಿ ಆದರು.]

ಶ್ರೀನಗರ ಕಿಟ್ಟಿ ಮುಂದೆ ಲೇಡಿ ವಿಲನ್ ಆಗಿ ಅಬ್ಬರಿಸಲಿದ್ದಾರೆ ಹಾಟ್ ಬ್ಯೂಟಿ ರಾಗಿಣಿ: ರಚಿತಾ ರಾಮ್‌ಗೆ ಭಯ ಶುರುವಾಗುತ್ತಾ?

ಚಿತ್ರರಂಗಕ್ಕೆ ರಚಿತಾ(Actress rachita ram)ರನ್ನು ದರ್ಶನ್ ಪರಿಚಯಿಸಿದ್ದರು. ಈ ಹತ್ಯೆ ಪ್ರಕರಣದಲ್ಲಿ ಬಂಧನವಾದಾಗ ದರ್ಶನ್‌ ಬೆಂಬಲಕ್ಕೆ ನಿಂತಿದ್ದ ರಚಿತಾ ಅವರು, ದರ್ಶನ್‌ ಅವರನ್ನು ತಮ್ಮ ಗುರು ಎಂದು ಹೇಳಿದ್ದರು.

ಇನ್ನು ತಮ್ಮ ಗುರುವಿನ ಭೇಟಿಗೂ ಮುನ್ನ ರಾಯರ ಆರಾಧನೆ ನಿಮಿತ್ತ ಪೂರ್ಣಪ್ರಜ್ಞ ಲೇಔಟ್‌ನಲ್ಲಿರುವ ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿದ್ದ ರಚಿತಾ ಅಲ್ಲಿ ಸ್ವೀಕರಿಸಿದ್ದ ಪ್ರಸಾದವನ್ನು ಜೈಲಲ್ಲಿ ದರ್ಶನ್‌ಗೆ ಕೊಟ್ಟರು ಎಂದು ತಿಳಿದು ಬಂದಿದೆ.

Latest Videos
Follow Us:
Download App:
  • android
  • ios