ಪಕ್ಕದ್ಮನೆ ಹುಡುಗಿ ಪ್ರಣೀತಾ ಸುಭಾಷ್‌ ಸದ್ದಿಲ್ಲದೇ ಮದ್ವೆ ಆಗಿದ್ದಾಳೆ. ಹುಡುಗ ಯಾರು, ಮದುವೆ ಎಲ್ಲಿ ನಡೀತು, ಯಾರೆಲ್ಲ ಭಾಗವಹಿಸಿದ್ರು ಅನ್ನೋದು ಎಲ್ಲರ ಕುತೂಹಲ. ಪ್ರತಿಷ್ಠಿತ ಕುಟುಂಬದಿಂದ ಬಂದ ಪ್ರಣೀತಾ ತೀರಾ ಸಿಂಪಲ್ಲಾಗಿ ಮದುವೆ ಆಗೋದಂತೂ ದೂರದ ಮಾತು. ಅದ್ದೂರಿಯಾಗಿ ಆದರೆ ಕೆಲವೇ ಕೆಲವು ಮಂದಿಯ ಉಪಸ್ಥಿತಿಯಲ್ಲಿ ವಿವಾಹ ನಡೆದಿದೆ. ಅಷ್ಟಕ್ಕೂ ಆಕೆ ಕೈ ಹಿಡಿದಿರೋದು ಬೆಂಗಳೂರಿನ ಶ್ರೀಮಂತ ಉದ್ಯಮಿಯೊಬ್ಬರನ್ನು. ಕನಕಪುರದ ರೆಸಾರ್ಟ್ ನಲ್ಲಿ ಸದ್ದಿಲ್ಲದೇ ಈ ವಿವಾಹ ನಡೆದಿದೆ. ಇವರ ಆಪ್ತ ಸ್ನೇಹಿತ ಬಳಗಕ್ಕೂ ಆಹ್ವಾನ ಹೋದಂತಿಲ್ಲ. ಬಹುಶಃ ಲಾಕ್‌ಡೌನ್‌ ಮುಗಿದ ಬಳಿಕ ಅದ್ದೂರಿಯಾಗಿ ರಿಸೆಪ್ಶನ್ ಮಾಡಿಕೊಳ್ಳುವ ಪ್ಲಾನ್ ಈ ಜೋಡಿಯದ್ದು ಎನ್ನಲಾಗಿದೆ. ಪ್ರಣೀತಾ ಹಾಗೂ ಅವರನ್ನು ಕೈ ಹಿಡಿದ ಗೆಳೆಯನ ಜೊತೆಗೆ ಪ್ರಣೀತಾ ತಂದೆ ತಾಯಿ, ಹುಡುಗನ ಪೋಷಕರಿಗೂ ಸಾಕಷ್ಟು ದೊಡ್ಡ ಗೆಳೆಯರ ಬಳಗ ಇರುವ ಕಾರಣ ಈ ರೀತಿ ಯೋಜನೆ ಹಾಕಿಕೊಂಡಿರುವ ಸಾಧ್ಯತೆ ಇದೆ. 

ವೆಬ್ ಸೀರೀಸ್ ಈ ಕಾಲದ ಅದ್ಭುತ ಮಾಧ್ಯಮ : ರಮೇಶ್ ಅರವಿಂದ್ ...

ಪೋಕ್ರಿ ಸಿನಿಮಾದಲ್ಲಿ ದರ್ಶನ್‌ ಜೊತೆಗೆ ತುಂಟಾಟ, ಚೆಲ್ಲಾಟ ಆಡುತ್ತಲೇ ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾದ ಬೆಡಗಿ ಪ್ರಣೀತಾ ಸುಭಾಷ್‌. ಈಕೆಯ ಅಪ್ಪ, ಅಮ್ಮ ಇಬ್ರೂ ಡಾಕ್ಟರ್‌ ಆದ್ರೂ ಈಕೆ ಮಾತ್ರ ನಟನೆಯ ದಾರಿ ಹಿಡೀತಾಳೆ. ಮೊದಲ ಕನ್ನಡ ಸಿನಿಮಾದ ಮೂಲಕ ಒಂದಿಷ್ಟು ಹೆಸರು ಮಾಡಿದ್ದೇ ಜರಾಸಂದ ಸಿನಿಮಾದಲ್ಲಿ ನಾಯಕಿಯಾಗಿ ಅವಕಾಶ ಸಿಕ್ಕಿತು. ಆಮೇಲೆ ಎಷ್ಟೋ ಸಮಯ ಸ್ಯಾಂಡಲ್‌ವುಡ್‌ನಲ್ಲಿ ಹುಡುಕಿದರೂ ಕಣ್ಣಿಗೆ ಬೀಳದಂಗೆ ಮಾಯವಾದ್ಲು ಈ ಬೆಡಗಿ. ಸ್ವಲ್ಪ ಟೈಮಲ್ಲಿ ತಮಿಳು, ತೆಲುಗು ಸಿನಿಮಾದಲ್ಲಿ ಬ್ಯುಸಿಯಾದಳು. ಚಾನೆಲ್‌ ಚೇಂಜ್‌ ಮಾಡುವಾಗ ಸಡನ್ನಾಗಿ ಯಾವುದೋ ಟಿವಿಯಲ್ಲಿ ಪರಿಚಿತ ಮುಖ ಕಂಡ ಹಾಗಾಗಿ ಮುಂದೆ ಹೋದೋರು ತಿರುಗಿ ಹಿಂದಿನ ಚಾನೆಲ್‌ ಹಾಕಿದ್ರೆ ಕಂಡಿದ್ದು ಪ್ರಣೀತಾ ಮುಖ. ಅಲ್ಲಿ ಕೊಂಚ ಹೆಸರು ಬರ್ತಿದೆ ಅಂತನ್ನುವಾಗ ಮತ್ತೆ ಸ್ಯಾಂಡಲ್‌ವುಡ್‌ ಕೂಗಿ ಕರೆಯಿತು. ಭೀಮಾ ತೀರದಲ್ಲಿ, ಬ್ರಹ್ಮ, ಜಗ್ಗುದಾದ ಮೊದಲಾದ ಸಿನಿಮಾಗಳಲ್ಲಿ ಅವಕಾಶ ಸಿಕ್ಕಿತು. ಒಂದು ಹಂತದ ನಂತರ ಈ ಉಬ್ಬುಗಣ್ಣಿನ ಹುಡುಗಿಗೆ ಅವಕಾಶ ಕಡಿಮೆ ಆಗತೊಡಗಿತು. 
 ಆದ್ರೆ ಈ ಚುರುಕು ಹುಡುಗಿ ಸುಮ್ನೆ ಕೂರೋಳಲ್ಲ. ಪ್ರಣೀತಾ ಸುಭಾಷ್‌ ಫೌಂಡೇಶನ್‌ ಅಂತ ಮಾಡ್ಕೊಂಡು ಅದರ ಮೂಲಕ ಕಷ್ಟದಲ್ಲಿರುವವರಿಗೆ ಸಹಾಯಕ್ಕೆ ಮುಂದಾದಳು. ಇದೇ ಟೈಮ್‌ಗೆ ಬಾಲಿವುಡ್‌ನಿಂದ ಅವಕಾಶ ಬರುತ್ತೆ. ಶಿಲ್ಪಾ ಶೆಟ್ಟಿ ಜೊತೆಗೆ 'ಹಂಗಾಮ ೨'ನಲ್ಲಿ ಕಾಣಿಸಿಕೊಂಡು, ಅಲ್ಲೀವರೆಗೆ ದಕ್ಷಿಣ ಭಾರತೀಯ ನಟಿ ಅಂತ ಅನಿಸಿಕೊಂಡಾಕೆ ಸಡನ್ನಾಗಿ ಬಾಲಿವುಡ್‌ ನಟಿ ಅನ್ನೋ ಕಿರೀಟ ತಲೆಗೇರಿಸಿಕೊಳ್ಳುತ್ತಾಳೆ. ಇಷ್ಟಾದರೂ ಪ್ರಣೀತಾ ಸ್ವಭಾವದಲ್ಲಿ ಅಂಥಾ ಬದಲಾವಣೆ ಏನಾಗಲಿಲ್ಲ. ಆಕೆ ತನ್ನ ಎಂದಿನ ಪಕ್ಕದ್ಮನೆ ಹುಡುಗಿ ಸರಳತೆಯಲ್ಲೇ ಕಾಣಿಸಿಕೊಳ್ಳುತ್ತಾಳೆ. ಸ್ಫೂರ್ತಿ ಬಂದಾಗ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕೈಲಾದ ಸಹಾಯ ಮಾಡುತ್ತಾಳೆ. ಇದಾದ ಸ್ವಲ್ಪ ದಿನಕ್ಕೆ ಕೋವಿಡ್‌ ರೋಗಿಗಳ ಆಕ್ಸಿಜನ ಕಾನ್ಸಂಟ್ರೇಟರ್‌ ಖರೀದಿಗೆ ಕ್ರೌಡ್‌ ಫಂಡಿಂಗ್‌ ಶುರು ಹಚ್ಕೊಳ್ತಾಳೆ. 

ವಿಷ್ಣು ಓದಿದ ಶಾಲೆ ಉಳಿಸಲು ಮುಂದಾದ ನಟಿ ಪ್ರಣೀತಾ ...

ಇಷ್ಟೆಲ್ಲ ಸಾಧನೆ ಮಾಡಿದ ಹುಡುಗಿ ಪ್ರಣೀತಾ ಇದೀಗ ಹಸೆಮಣೆ ಏರಿದ ಸುದ್ದಿ ಬಂದಿದೆ. ತನ್ನ ಬಹುಕಾಲದ ಗೆಳೆಯನ ಜೊತೆಗೆ ಈ ಸುಂದರಿ ಹಸೆಮಣೆ ಏರಿದ್ದಾಳೆ. ವೇಗ ಸಿಟಿ ಮಾಲ್‌ ಮಾಲೀಕರಾದ ನಿತಿನ್‌ ರಾಜ್‌ ಜೊತೆಗೆ ಪ್ರಣೀತಾ ಮದುವೆ ಆಗಿದೆ. ಕನಕಪುರ ರೆಸಾರ್ಟ್‌ನಲ್ಲಿ ಈ ಮದುವೆ ನಡೆದಿದೆ. ಲಾಕ್‌ಡೌನ್‌ ಕಾರಣ ಯಾರಿಗೂ ಆಹ್ವಾನ ಹೋಗಿಲ್ಲ. ಈಗ ಕೇವಲ ೪೦ ಜನರಿಗಷ್ಟೇ ಮದುವೆಯಲ್ಲಿ ಪಾಲ್ಗೊಳ್ಳಲು ಅವಕಾಶವಿರೋದು. ಮನೆಮಂದಿ, ಪುರೋಹಿತರೆಲ್ಲ ಸೇರಿದರೇ ಇಷ್ಟು ಜನರಾಗುತ್ತಾರೆ. ಇನ್ನು ಗೆಳೆಯರು, ಬಂಧುಗಳನ್ನು ಆಹ್ವಾನಿಸೋ ಅವಕಾಶ ಎಲ್ಲಿದೆ..
ಇಷ್ಟೆಲ್ಲ ಆದಮೇಲೂ, ಪ್ರಣೀತಾಗೆ 'ಹ್ಯಾಪಿ ವೆಡ್ಡಿಂಗ್' ಅಂತ ವಿಶ್‌ ಮಾಡಿದ್ರೆ, "ಇಲ್ಲಪ್ಪ, ನಾನು ಮದ್ವೆ ಆಗಿಲ್ಲ. ಇದೆಲ್ಲ ಗಾಳಿ ಸುದ್ದಿ' ಅಂದುಬಿಡೋದಾ!

ಆಕ್ಸಿಜನ್‌ ಕಾನ್ಸನ್‌ಟ್ರೇಟರ್‌ ಖರೀದಿಗೆ ಫಂಡ್‌ ರೈಸ್‌ಗೆ ಮುಂದಾದ ನಟಿ ಪ್ರಣೀತಾ ಸುಭಾಷ್! ...