ನಟಿ 'ಕಲ್ಪನಾ ತೋಟ' ನಿಜವಾಗಿಯೂ ಅವರದ್ದಾಗಿತ್ತಾ; ಆ ಫಾರ್ಮ್ ಹೌಸ್ ಸತ್ಯ ಕಥೆಯೇನು?

18 ಜುಲೈ 1943ರಲ್ಲಿ ಅಂದಿನ ಮದ್ರಾಸ್ ಪ್ರಾಂತ್ಯ, ಅಂದರೆ ಇಂದಿನ ದಕ್ಷಿಣ ಕನ್ನಡದಲ್ಲಿ ಜನಿಸಿದ್ದ ನಟಿ ಕಲ್ಪನಾ, 12 ಮೇ 1979ರಂದು ಸಂಕೇಶ್ವರದಲ್ಲಿ ನಿಧನ ಹೊಂದಿದ್ದಾರೆ. 'ಮಿನುಗು ತಾರೆ' ಎಂಬ ಬಿರುದು ಹೊಂದಿದ್ದ ನಟಿ ಕಲ್ಪನಾ 35 ವರ್ಷ ವಯಸ್ಸಿನಲ್ಲೇ ತೀರಿಕೊಂಡಿದ್ದಾರೆ.

Sandalwood actress Minugutare Kalpana farm house is not actually belongs to her srb

ಕನ್ನಡದ ನಟಿ, ಮಿನುಗು ತಾರೆ ಕಲ್ಪನಾ ಬಗ್ಗೆ ಹೇಳುವುದಕ್ಕೆ ಬಹಳಷ್ಟು ವಿಷಯಗಳಿವೆ. ಆದರೆ, 40-42 ವರ್ಷಗಳ ಹಿಂದಿನ ಸಂಗತಿಗಳ ಬಗ್ಗೆ, ಘಟನೆಗಳ ಬಗ್ಗೆ ಹೇಳುವವರು ಸಿಗುವುದೇ ಅಪರೂಪ ಎಂಬಂತಾಗಿದೆ. ಅದರೆ, ನಟಿ ಕಲ್ಪನಾ ಅವರೊಂದಿಗೆ ಆರೇಳು ವರ್ಷಗಳಷ್ಟು ಕಾಲ ಆತ್ಮೀಯ ಸಂಬಂಧ ಹೊಂದಿದ್ದ ರಾಜಕಾರಣಿ, ಬಿಎಸ್‌ ವಿಶ್ವನಾಥ್ ಅವರೇ ಸ್ವತಃ ನಟಿ ಕಲ್ಪನಾ ಹಾಗೂ ಅವರ ತೋಟದ ಬಗ್ಗೆ ಮಾತನಾಡಿದ್ದಾರೆ. ನಟಿ ಕಲ್ಪನಾರನ್ನು ಸಮಾಧಿ ಮಾಡಿರುವ ಸ್ಥಳದಲ್ಲಿ ತೋಟವಿದೆ. ಸುಮಾರು ಎರಡು ಎಕರೆ ತೋಟವಿದ್ದು ಅದರಲ್ಲಿ ಒಂದು ಕಡೆ ಕಲ್ಪನಾ ಸಮಾಧಿ ಇದೆ. 

ನಟಿ ಕಲ್ಪನಾ ದುರಂತ ಅಂತ್ಯ ಕಂಡಾಗ, ಆ ಮೊದಲು ಅವರ ಸ್ನೇಹಿತರಾಗಿದ್ದ ಬಿಎಸ್‌ ವಿಶ್ವನಾಥ್ ಅವರೇ ತಮ್ಮ ಜಾಗದಲ್ಲಿ ನಟಿ ಕಲ್ಪನಾರಿಗೆ ಸಮಾಧಿ ನಿರ್ಮಿಸಲು ಜಾಗವನ್ನು ಕೊಟ್ಟರು. ಅಲ್ಲಿ ಕಲ್ಪನಾ ಸಮಾಧಿಯನ್ನು ಸಣ್ಣ ಸ್ಥಳದಲ್ಲಿ ನಿರ್ಮಾಣ ಮಾಡಿದರೂ ಅದು ಸಹಜವಾಗಿಯೇ ಪ್ರಚಾರ ಪಡೆಯಿತು. ಅಲ್ಲಿ ಸುಮಾರು ಎರಡು ಎಕರೆ ಜಾಗದಲ್ಲಿ ತೋಟ ಕೂಡ ಇದೆ. ಅಂದರೆ, ತೋಟದ ನಡುವೆ ಒಂದು ಕಡೆ ನಟಿ ಕಲ್ಪನಾ ಸಮಾಧಿ ಇದೆ. ಅದನ್ನು ನೋಡಲು ಬಂದ ಕಲ್ಪನಾ ಅಭಿಮಾನಿಗಳು, ಜನರು ಆ ಸ್ಥಳವನ್ನು 'ಕಲ್ಪನಾ ತೋಟ' ಎಂದು ಕರೆಯಲು ಶುರು ಮಾಡಿದರಂತೆ. 

ಸಹನಟಿಯರ 'ಸೌಂದರ್ಯ'ದ ಬಗ್ಗೆ ವಿಷ್ಣುವರ್ಧನ್ ಹೇಳಿದ್ದೇನು; ಹಾಗೆ ಹೇಳಲು ಬಲವಾದ ಕಾರಣವೇನಿರಬಹುದು?

ನಿಜವಾಗಿಯೂ ಅದು ನಟಿ ಕಲ್ಪನಾ ಅವರಿಗೆ ಸೇರಿದ್ದಾಗಿರಲಿಲ್ಲ ಎಂದಿದ್ದಾರೆ ಬಿಎಸ್‌ ವಿಶ್ವನಾಥ್. 'ಕಲ್ಪನಾ ಸಮಾಧಿಗೆ ಜಾಗ ಕೊಟ್ಟಿದ್ದು ಬಿಟ್ಟರೆ ಅವರಿಗೂ ಆ ಜಾಗಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ, ನನ್ನ ಹಾಗು ಕಲ್ಪನಾ ನಡುವೆ ಆರೇಳು ವರ್ಷಗಳ ಆತ್ಮೀಯ ನಂಟು ಇತ್ತು. ಆಕೆ ಸತ್ತಾಗ ಮಾನವೀಯ ನೆಲೆಯಲ್ಲಿ ನನ್ನ ತೋಟದ ನಡುವೆ, ಅಲ್ಲಿ ಆಕೆಗೊಂದು ಸಮಾಧಿ ನಿರ್ಮಿಸಲು ಜಾಗ ಮಾಡಿಕೊಟ್ಟೆ. ಆದರೆ, ಸಮಾಧಿ ನೋಡಲು ಬಂದ ನಟಿ ಕಲ್ಪನಾ ಫ್ಯಾನ್ಸ್ ಅದನ್ನು 'ಕಲ್ಪನಾ ತೋಟ' ಎಂದೇ ಪ್ರಚಾರ ಮಾಡಿದರು' ಎಂದಿದ್ದಾರೆ ಸಂದರ್ಶನವೊಂದರಲ್ಲಿ ಸ್ವತಃ ಬಿಎಸ್‌ ವಿಶ್ವನಾಥ್. 

ಪ್ರಥ್ವಿರಾಜ್ ಸುಕುಮಾರನ್ 'ಆಡುಜೀವಿಂತಂ' ಕಮಾಲ್; ಈ ಸೌತ್ ಸಿನಿಮಾಗೆ ಇಷ್ಟೊಂದು ರೇಟಿಂಗಾ?

18 ಜುಲೈ 1943ರಲ್ಲಿ ಅಂದಿನ ಮದ್ರಾಸ್ ಪ್ರಾಂತ್ಯ, ಅಂದರೆ ಇಂದಿನ ದಕ್ಷಿಣ ಕನ್ನಡದಲ್ಲಿ ಜನಿಸಿದ್ದ ನಟಿ ಕಲ್ಪನಾ, 12 ಮೇ 1979ರಂದು ಸಂಕೇಶ್ವರದಲ್ಲಿ ನಿಧನ ಹೊಂದಿದ್ದಾರೆ. 'ಮಿನುಗು ತಾರೆ' ಎಂಬ ಬಿರುದು ಹೊಂದಿದ್ದ ನಟಿ ಕಲ್ಪನಾ 35 ವರ್ಷ ವಯಸ್ಸಿನಲ್ಲೇ ತೀರಿಕೊಂಡಿದ್ದರೂ ಅಷ್ಟರಲ್ಲಾಗಲೇ ಬರೋಬ್ಬರಿ 78 ಸಿನಿಮಾಗಳಲ್ಲಿ ನಟಿಸಿ ಭಾರೀ ಜನಪ್ರಿಯತೆ ಗಳಿಸಿದ್ದರು. ಆದರೆ, ವಿಧಿ ಲಿಖಿತವೋ ಏನೋ ಎಂಬಂತೆ ನಟಿ ಕಲ್ಪನಾ ಚಿಕ್ಕ ಪ್ರಾಯದಲ್ಲೇ ಇಹಲೋಕ ತ್ಯಜಿಸಿ ಸಿನಿರಸಿಕರ ಮನದಲ್ಲಿ ಕೇವಲ ನೆನಪಾಗಿ ಉಳಿದರು.   

ನಾನೇನೂ ಹೇಳಲ್ಲ ಅಂತ ಹೇಳಿ 'ಸಲಾರ್ 2' ಕಥೆ ಸೀಕ್ರೆಟ್ ಎಲ್ಲಾನೂ ಹೇಳ್ಬಿಟ್ರಾ ಪ್ರಥ್ವಿರಾಜ್ ಸುಕುಮಾರನ್?

Latest Videos
Follow Us:
Download App:
  • android
  • ios