ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆ ಹಾಗೂ ಕಿಮೋಥೆರಪಿಗೆ ಒಳಗಾಗಲಿರುವ ಶಿವರಾಜ್‌ಕುಮಾರ್ ಡಿಸೆಂಬರ್ 24 ರಂದು ಶಸ್ತ್ರಚಿಕಿತ್ಸೆಗೆ ಒಳಪಡಲಿದ್ದಾರೆ. ಜನವರಿ ೨೬ಕ್ಕೆ ಭಾರತಕ್ಕೆ ಮರಳುವ ನಿರೀಕ್ಷೆಯಿದೆ. ವಿನೋದ್ ರಾಜ್ ಅವರು ಶಿವಣ್ಣನನ್ನು ಭೇಟಿ ಮಾಡಿ ಧೈರ್ಯ ಹೇಳಿದ್ದಾರೆ. ತಮಿಳುನಾಡಿನ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ ಎಂದು ಶಿವಣ್ಣ ತಿಳಿಸಿದ್ದಾರೆ.

ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್ (Shiva Rajkumar) ಅವರು ಅನಾರೋಗ್ಯದ ನಿಮಿತ್ತ ಅಮೆರಿಕಾಕ್ಕೆ ಹೋಗಿರುವುದು ಗೊತ್ತೇ ಇದೆ. ಅಲ್ಲಿ ಸರ್ಜರಿ ಹಾಗೂ ಕಿಮೋಥೆರಪಿಗೆ ಒಳಗಾಗಲಿದ್ದಾರೆ ನಟ ಶಿವಣ್ಣ ಎಂಬುದು ಬಹುತೇಕ ಎಲ್ಲರಿಗೂ ಗೊತ್ತು. ಡಿಸೆಂಬರ್ 24ರಂದು ಶಿವಣ್ಣ ಅವರಿಗೆ ಸರ್ಜರಿ ನಡೆಯಲಿದ್ದು, ಅವರು ಆ ಬಳಿಕ ಅಲ್ಲೇ ಅಮೆರಿಕಾದಲ್ಲಿಯೇ ಚಿಕಿತ್ಸೆ ಹಾಗೂ ವಿಶ್ರಾಂತಿ ಪಡೆಯಲಿದ್ದಾರೆ. ಜನವರಿ 26ಕ್ಕೆ ಭಾರತಕ್ಕೆ ವಾಪಸ್ಸಾಗುವ ನಟ ಶಿವಣ್ಣ ಅವರು ಆ ಬಳಿಕ ಸ್ವಲ್ಪ ಕಾಲ ತಮ್ಮ ಬೆಂಗಳೂರು ಮನೆಯಲ್ಲಿ ರೆಸ್ಟ್ ಮಾಡಲಿದ್ದಾರೆ ಎನ್ನಲಾಗಿದೆ. 

ಈ ಬಗ್ಗೆ ಸ್ವತಃ ಕರುನಾಡ ಚಕ್ರವರ್ತಿ ಶಿವಣ್ಣ ಮಾತನ್ನಾಡಿದ್ದಾರೆ. ನಟ ವಿನೋದ್ ರಾಜ್ (Vinod Raj) ಅವರು ಮೊನ್ನೆ, ಎರಡು ದಿನಗಳ ಹಿಂದಷ್ಟೇ ಶಿವಣ್ಣರ ನಾಗಾವರದ ಮನೆಗೆ ಹೋಗಿ ಅವರನ್ನು ಭೇಟಿಯಾಗಿ ಧೈರ್ಯ ಹೇಳಿ ಬಂದಿದ್ದಾರೆ. ಜೊತೆಗೆ, ಆದಷ್ಟು ಬೇಗ ಶಿವಣ್ಣರ ಆರೋಗ್ಯ ಸರಿಹೋಗಲಿ ಎಂದೂ ಕೂಡ ಹಾರೈಸಿದ್ದಾರೆ. ಸ್ಯಾಂಡಲ್‌ವುಡ್ ನಟರಾದ ಶಿವರಾಜ್‌ಕುಮಾರ್ ಹಾಗೂ ವಿನೋದ್ ರಾಜ್‌ ಅವರಿಬ್ಬರೂ ತಮ್ಮ ಭೇಟಿಯಲ್ಲಿ ಸಾಕಷ್ಟು ಸಂಗತಿಗಳನ್ನು ಕ್ಯಾಮೆರಾ ಮುಂದೆಯೇ ಮಾತನ್ನಾಡಿದ್ದಾರೆ. 

ಬಾಕ್ಸಾಫೀಸ್​ನಲ್ಲಿ ಉಪ್ಪಿ ಬ್ಯಾಂಗ್ ಬ್ಯಾಂಗ್; ಕಲೆಕ್ಷನ್​ನಲ್ಲಿ 'UI' ಕಮಾಲ್!

ವಿನೋದ್ ರಾಜ್ ಅವರು ಮೊದಲು ಶಿವಣ್ಣ ಮುಡಿ ಕೊಟ್ಟಿದ್ದರ ಬಗ್ಗೆ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಶಿವಣ್ಣ ಅವರು 'ಅಲ್ಲಿ, ತಿರುಪತಿಗೆ ಹೋಗಿರುವ ಎಲ್ಲರೂ ಮುಡಿ ಕೊಟ್ಟದ್ದಾರೆ. ಆದರೆ ನಾನು ಕೊಟ್ಟಿರಲಿಲ್ಲ. ಎಲ್ಲರೂ ಕೊಡುತ್ತಿದ್ದಾರೆ, ನಾನೂ ಕೊಡವಾ ಅಂತ ಹೇಳಿ ಕೊಟ್ಟೆ. ಈ ಮೊದಲು ನಾನು ಅಪ್ಪಾಜಿ ಹೋದಾಗ ತಿರುಪತಿಯಲ್ಲಿ ಮುಡಿ ಕೊಟ್ಟಿದ್ದೆ ಎಂದು ನೆನಪಿಸಿಕೊಂಡಿದ್ದಾರೆ. ಹಾಗೇ ನಟ ವಿನೋದ್ ರಾಜ್‌ ಅವರು ಶಿವಣ್ಣ ಹಾಗೂ ತಾವು ಚಿಕ್ಕವರಿದ್ದಾಗ ಬ್ರೆಡ್-ಆಮ್ಲೆಟ್ ಒಟ್ಟಿಗೇ ತಿನ್ನುತ್ತಿದ್ದುದನ್ನು ನೆನಪಿಸಿಕೊಂಡಿದ್ದಾರೆ. ಆ ಗುಟ್ಟನ್ನು ವಿನೋದ್ ರಾಜ್ ಹೇಳಿದ್ದಾರೆ. 

ವಿನೋದ್ ರಾಜ್ ಹಾಗೂ ಶಿವಣ್ಣ ಭೇಟಿಯ ಮಧ್ಯೆ, ತಮಗೆ ಚಿಕಿತ್ಸೆ ಕೊಡುತ್ತಿರುವ, ಸರ್ಜರಿ ಮಾಡಲಿರುವ ಡಾಕ್ಟರ್ ಬಗ್ಗೆ ಕೂಡ ಶಿವಣ್ಣ ಹೇಳಿದ್ದಾರೆ. ಅಮೇರಿಕದಲ್ಲಿ ತಮಿಳುನಾಡಿನ ವೈದ್ಯರಾದ ಮುರುಗೇಶ್ ಎನ್ನುವವರು ತಮಗೆ ಟ್ರೀಟ್‌ಮೆಂಟ್ ನೀಡಲಿದ್ದಾರೆ ಎಂದಿದ್ದಾರೆ ಶಿವರಾಜ್‌ಕುಮಾರ್. ನಟ ವಿನೋದ್ ರಾಜ್, ಬಿಸಿ ಪಾಟೀಲ್ ಹಾಗೂ ಕಿಚ್ಚ ಸುದೀಪ್ ಸೇರಿದಂತೆ, ಹಲವರು ಶಿವಣ್ಣರ ಮನೆಗೆ ಹೋಗಿ ಧೈರ್ಯ ತುಂಬಾ ಹಾರೈಸಿ ಅಮೇರಿಕಾಕ್ಕೆ ಕಳುಹಿಸಿಕೊಟ್ಟಿದ್ದಾರೆ. 

ವರದಪ್ಪ ಅಂದು ಹೇಳಿದ್ದ ಮಾತನ್ನು ನಾನು ಎಂದಿಗೂ ಮರೆಯೊಲ್ಲ: ಪಾರ್ವತಮ್ಮ ರಾಜ್‌ಕುಮಾರ್

ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಇಬ್ಬರು ದಿಗ್ಗಜರು / ಚಿತ್ರ ಚಿತ್ತಾರ