ಆ. 12 ವಿಶ್ವ ಆನೆಗಳ ದಿನ. ಆ ಪ್ರಯುಕ್ತ ಪುನೀತ್‌ ರಾಜ್‌ಕುಮಾರ್‌ ಅಂತಾರಾಷ್ಟ್ರೀಯ ಗೌರವಕ್ಕೆ ಪಾತ್ರವಾದ ಕೃತಿ ಕಾರಂತ್‌ ಅವರ ಫ್ಲೈಯಿಂಗ್‌ ಎಲಿಫೆಂಟ್‌ ಕಿರುಚಿತ್ರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಆ. 12 ವಿಶ್ವ ಆನೆಗಳ ದಿನ. ಈ ದಿನದಂದು ಸಿನಿಮಾ ಹಾಗೂ ಕಿರುತೆರೆ ನಟ,ನಟಿಯರು ಆನೆ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಾರೆ. 

ನಟಿ ಆಶಾ ಭಟ್‌ ‘ಹಾಥಿ ಮೇರೆ ಸಾಥಿ’ ಅನ್ನೋ ಟ್ಯಾಗ್‌ಲೈನ್‌ನಲ್ಲಿ ಆನೆಗಳ ಸ್ನೇಹ ಸ್ವಭಾವದ ಬಗ್ಗೆ ಬರೆದುಕೊಂಡಿದ್ದಾರೆ. ನಟಿ ಸಂಯುಕ್ತಾ ಹೊರನಾಡು ಆನೆಗೆ ಮುತ್ತಿಕ್ಕುವ ವೀಡಿಯೊದೊಂದಿಗೆ ಸಂಭ್ರಮಿಸಿದ್ದಾರೆ. ನಿರ್ಮಾಪಕಿ ಶ್ರುತಿ ನಾಯ್ಡು ಆನೆಗಳ ಕ್ಯಾಂಪ್‌ನಲ್ಲಿರುವ ಫೋಟೋ ಹಾಕಿಕೊಂಡಿದ್ದಾರೆ.

ಪೌರಾಣಿಕ ಗಜಶಾಸ್ತ್ರದ ಹಿನ್ನೆಲೆಯಲ್ಲಿ ‘ಫ್ಲೈಯಿಂಗ್‌ ಎಲಿಫೆಂಟ್ಸ್‌’ ಕಿರುಚಿತ್ರ ರೂಪಿಸಿದ್ದೇವೆ. ನೆರಳು ಬೆಳಕಿನ ಹಿನ್ನೆಲೆಯಲ್ಲಿ ಈ ಸೂಕ್ಷ್ಮ ಮನಸ್ಸಿನ, ಭಾವುಕ ಜೀವಿಗಳ ಕತೆ ಹೇಳಲು ಪ್ರಯತ್ನಿಸಿದ್ದೇನೆ. - ಕೃತಿ ಕಾರಂತ್‌, ವನ್ಯಜೀವಿ ತಜ್ಞೆ

View post on Instagram

ಫ್ಲೈಯಿಂಗ್‌ ಎಲಿಫೆಂಟ್‌ ಕಿರುಚಿತ್ರ ಬಿಡುಗಡೆ

ವನ್ಯಜೀವಿ ತಜ್ಞೆ ಕೃತಿ ಕಾರಂತ್‌ ನಿರ್ದೇಶಿಸಿ ನಿರ್ಮಾಣ ಮಾಡಿರುವ ‘ಫ್ಲೈಯಿಂಗ್‌ ಎಲಿಫೆಂಟ್‌ - ಎ ಮದರ್ಸ್‌ ಹೋಪ್‌’ ಕಿರುಚಿತ್ರ ಪ್ರಕಾಶ್‌ ಮಠದ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಆರು ನಿಮಿಷಗಳ ಈ ಚಿತ್ರವನ್ನು ಬೆಟ್ಟಕುರುಬ ಭಾಷೆಯಲ್ಲಿ ನಿರೂಪಿಸಿರುವುದು ವಿಶೇಷ. ಅನನ್ಯಾ ಭಟ್‌ ಹಿನ್ನೆಲೆ ದನಿಯಲ್ಲಿ ಆನೆಗಳ ಕತೆ ತೆರೆದುಕೊಳ್ಳುತ್ತದೆ.

YouTube video player