ವಿಷಿಂಗ್ ಬೆಸ್ಟ್ ಬೊಮ್ಮಾಯಿ ಮಾಮ: ಸಿಎಂಗೆ ಕಿಚ್ಚ ಸುದೀಪ್ ಶುಭಾಶಯ
- ನೂತನ ಮುಖ್ಯಮಂತ್ರಿಗೆ ಶುಭಾಶಯ ತಿಳಿಸಿದ ಸ್ಯಾಂಡಲ್‌ವುಡ್ ನಟ
- ಕಿಚ್ಚ ಸುದೀಪ್ ಸ್ಪೆಷಲ್ ವಿಶಸ್ ಹೀಗಿದೆ ನೋಡಿ
ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ರಾಜಕೀಯ ಗಣ್ಯರಿಂದ, ಸಿನಿಮಾ ತಾರೆಗಳಿಂದ ಶುಭಾಶಯ ಕೇಳಿ ಬಂದಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರೂ ಸಿಎಂಗೆ ವಿಶ್ ಮಾಡಿದ್ದಾರೆ.
ಬಿಎಸ್ ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವುದು ಭಾರೀ ಕುತೂಹಲ ಮೂಡಿಸಿತ್ತು. ಬಿಜೆಪಿ ಹೈಕಮಾಂಡ್ ಲಿಂಗಾಯತ ನಾಯಕನಿಗೆ ಮಣೆಹಾಕಿದ್ದು. ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಅಂತಿಮಗೊಳಿಸಿತ್ತು.
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆ
ಕರ್ನಾಟಕದ 30ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೊಮ್ಮಾಯಿ ಅವರಿಗೆ ಶುಭಾಶಯ ಕೋರಿದ ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ. ಅವರ ಸರಳತೆಯನ್ನು ನೋಡಿಕೊಂಡು ಬೆಳೆದವನು ನಾನು. ನನ್ನ ಕೆರಿಯರ್‌ನ ಆರಂಭಿಕ ದಿನಗಳಲ್ಲಿ ನನ್ನ ದೊಡ್ಡ ಸಪೋರ್ಟ್ ಆಗಿದ್ದವರು. ವಿಶಿಂಗ್ ಯು ದಿ ಬೆಸ್ಟ್ ಮಾಮ ಎಂದಿದ್ದಾರೆ.
ಟ್ವೀಟ್‌ನಲ್ಲಿ ಸಿಎಂ ಅವರನ್ನು ಟ್ಯಾಗ್ ಮಾಡಿದ್ದು, ಬ್ಲಾಕ್ & ವೈಟ್ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಬೊಮ್ಮಾಯಿ ಸಂಪುಟಕ್ಕೆ ಹೊಸಬರ ಆಯ್ಕೆ ಬಗ್ಗೆಯೂ ಈಗ ಕುತೂಹಲ ಶುರುವಾಗಿದ್ದು, ಶೀಘ್ರ ಪಟ್ಟಿ ತಯಾರಾಗುವ ನಿರೀಕ್ಷೆ ಇದೆ.