ಮುಧೋಳ: ಮತ್ತೆ ರಣಧೀರ, ಪ್ರೇಮಲೋಕದಂತ ಸಿನಿಮಾ ಮಾಡ್ತೇನೆ, ನಟ ರವಿಚಂದ್ರನ್

ವಿ.ರವಿಚಂದ್ರನ್ ಅವರು, ನಾನು ಸಿನಿಮಾಗಾಗಿ ನನ್ನ ಕುಟುಂಬಕ್ಕೆ ಸಮಯ ಕೊಡಲಾಗಲಿಲ್ಲ. ನನ್ನ ಪತ್ನಿಗೆ ಹುಷಾರ್ ಇರದಿದ್ದರೂ ನಾನೀಗ ನಿಮ್ಮ ಊರಿಗೆ ಬಂದಿದ್ದೇನೆ. ನಿಮ್ಮೆಲ್ಲರ ಪ್ರೀತಿ ಅಭಿಮಾನಕ್ಕೆ ನಾನು ಚಿರ ಋಣಿಯಾಗಿದ್ದೇನೆ: ರವಿಚಂದ್ರನ್.

Sandalwood Actor V Ravichandran Talks Over Movies grg

ಬಾಗಲಕೋಟೆ(ಜ.07): ಮತ್ತೆ ರಣಧೀರ, ಪ್ರೇಮಲೋಕದಂತ ಸಿನಿಮಾಗಳನ್ನ ಮಾಡುತ್ತೇನೆ. ಜೀವನದಲ್ಲಿ ಸೋತು ಗೆಲ್ಲಬೇಕು. ಅಂದಾಗ ಅದರ ಸಾರ್ಥಕತೆ ತಿಳಿಯುತ್ತದೆ. ಜೀವನದಲ್ಲಿ ಬೇಡ ಅಂದಿದ್ದನ್ನೇ ಮಾಡಿ ತೋರಿಸಿದ್ದೇನೆ. ನನ್ನ ಕೈಯಿಂದ ಸಿನಿಮಾ ಮಾಡೋಕೆ ಆಗಲ್ಲ ಅಂದಾಗಲೇ ನನ್ನಿಂದ ಪ್ರೇಮಲೋಕ ಹುಟ್ಟಿದ್ದು, ನಾನೆಲ್ಲೂ ಹೋಗಿಲ್ಲ, ಚೆನ್ನಾಗಿಯೇ ಇದ್ದೇನೆ. ಮತ್ತೆ ಜನರ ಪ್ರೀತಿಗಾಗಿ ಸಿನಿಮಾಗಳನ್ನ ಮಾಡುತ್ತೇನೆ ಅಂತ ಸ್ಯಾಂಡಲ್‌ವುಡ್ ಹೆಸರಾಂತ ನಟ ವಿ.ರವಿಚಂದ್ರನ್ ತಿಳಿಸಿದ್ದಾರೆ.

ಇಂದು(ಶನಿವಾರ) ಜಿಲ್ಲೆಯ ಮುಧೋಳ ನಗರದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ತಿಮ್ಮಣ್ಣ ಅರಳಿಕಟ್ಟಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ನಟ ವಿ.ರವಿಚಂದ್ರನ್ ಅವರು, ನಾನು ಸಿನಿಮಾಗಾಗಿ ನನ್ನ ಕುಟುಂಬಕ್ಕೆ ಸಮಯ ಕೊಡಲಾಗಲಿಲ್ಲ. ನನ್ನ ಪತ್ನಿಗೆ ಹುಷಾರ್ ಇರದಿದ್ದರೂ ನಾನೀಗ ನಿಮ್ಮ ಊರಿಗೆ ಬಂದಿದ್ದೇನೆ. ನಿಮ್ಮೆಲ್ಲರ ಪ್ರೀತಿ ಅಭಿಮಾನಕ್ಕೆ ನಾನು ಚಿರ ಋಣಿಯಾಗಿದ್ದೇನೆ ಅಂತ ರವಿಚಂದ್ರನ್ ಅವರು ವೇದಿಕೆಯಲ್ಲೇ ತಮ್ಮ ಮನದಾಳದ ಮಾತುಗಳನ್ನ ಹಂಚಿಕೊಂಡಿದ್ದಾರೆ.

ಯುವ ರಾಜ್‌ಕುಮಾರ್ ಜೊತೆ 'ಹೃದಯಂ' ನಟಿ ಕಲ್ಯಾಣಿ ಪ್ರಿಯದರ್ಶನ್ ರೊಮ್ಯಾನ್ಸ್

ಇಂದು ಬೆಳಗಾವಿಯಲ್ಲಿ ಪ್ಲೈಟ್ ಲ್ಯಾಂಡ್ ಆಗದೇ ತಕ್ಷಣ ಮತ್ತೇ ಹಾರಾಟ ಆರಂಭಿಸಿತು. ಮತ್ತೇ ಮೇಲೇರಿ 20 ನಿಮಿಷ ಹಾರಾಟ ಆರಂಭಿಸಿತು. ಒಂದು ಕ್ಷಣ ಏನಾಯ್ತು ಎಂಬುದು ತಿಳಿಯದೇ ಜೀವನವೆಲ್ಲಾ ನೆನಪಾಯ್ತು. 20  ನಿಮಿಷದ ನಂತರ ಲ್ಯಾಂಡ್ ಆದಾಗ ಮತ್ತೇ ನನ್ನ ಜೀವನ ಶುರುವಾಯ್ತು. ನಿಮ್ಮೆಲ್ಲರನ್ನ ನೋಡಲೇಬೇಕೆಂದು ಮುಧೋಳಕ್ಕೆ ಬಂದಿದ್ದೇನೆ. ರವಿಚಂದ್ರನ್ ಒಮ್ಮೆ ಮಾತು ಕೊಟ್ಟರೆ ತಪ್ಪೋನಲ್ಲ ಅಂತ ಹೇಳಿದ್ದಾರೆ.  ಇದೇ ಸಂದರ್ಭದಲ್ಲಿ ಅರಳಿಕಟ್ಟಿ ಕುಟುಂಬದಿಂದ ನಟ ವಿ‌.ರವಿಚಂದ್ರನ್‌ ಅವರಿಗೆ ಸನ್ಮಾನ ಮಾಡಲಾಯಿತು.

Latest Videos
Follow Us:
Download App:
  • android
  • ios