Asianet Suvarna News Asianet Suvarna News

ಯುವ ರಾಜ್‌ಕುಮಾರ್ ಜೊತೆ 'ಹೃದಯಂ' ನಟಿ ಕಲ್ಯಾಣಿ ಪ್ರಿಯದರ್ಶನ್ ರೊಮ್ಯಾನ್ಸ್

ಯುವ ರಾಜ್‌ಕುಮಾರ್ ಜೊತೆ 'ಹೃದಯಂ' ನಟಿ ಕಲ್ಯಾಣಿ ಪ್ರಿಯದರ್ಶನ್ ರೊಮ್ಯಾನ್ಸ್ ಎನ್ನುವ ಸುದ್ದಿ ವೈರಲ್ ಆಗಿದೆ.

Actress Kalyani priyadarshan likely to play female lead opposite Yuvarajkumar sgk
Author
First Published Jan 7, 2023, 5:17 PM IST

ಡಾ. ರಾಜ್ ಕುಮಾರ್ ಮೊಮ್ಮಗ ಯುವ ರಾಜ್‌ಕುಮಾರ್ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಈಗಾಗಲೇ ಭರ್ಜರಿ ತಯಾರಿ ನಡೆಸಿರುವ ಯುವ ಪ್ರತಿಷ್ಠಿತ ಹೊಂಬಾಳೆ ಬ್ಯಾನರ್ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಯವ ರಾಜ್‌ಕುಮಾರ್ ಹೊಸ ಸಿನಿಮಾ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ. ಈಗಾಗಲೇ ಅನೇಕ ವಿಚಾರಗಳು ಕೇಳಿ ಬರುತ್ತಿದ್ದು ಯುವ ಜೊತೆ ಸೌತ್ ಖ್ಯಾತ ನಟಿ ಕಲ್ಯಾಣಿ ರೊಮ್ಯಾನ್ಸ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಹೌದು, ತಮಿಳು ಸುಂದರಿ ಹೃದಯಂ ಖ್ಯಾತಿಯ ಕಲ್ಯಾಣಿ ಪ್ರಿಯದರ್ಶಿನ್, ಡಾ.ರಾಜ್ ಮೊಮ್ಮಗನ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡಕ್ಕೆ ಎಂಟ್ರಿ ಕೊಡ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

ತಮಿಳು ನಾಡು ಮೂಲದ ನಟಿ ಕಲ್ಯಾಣಿ ಪ್ರಿಯದರ್ಶನ್ ಸೌತ್ ಸಿನಿಮಾರಂಗದಲ್ಲಿ ಸಿಕ್ಕಾಪಟ್ಟೆ ಫೇಮಸ್. ಈಗಾಗಲೇ ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಇದೀಗ ಕನ್ನಡಕ್ಕೆ ಎಂಟ್ರಿ ಕೊಡ್ತಿದ್ದಾರೆ ಎನ್ನಲಾಗಿದೆ. ಹಲೋ ಸಿನಿಮಾ ಮೂಲಕ 2017ರಲ್ಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಕಲ್ಯಾಣಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರೂ ಸಿಕ್ಕಾಪಟ್ಟೆ ಖ್ಯಾತಿ ಗಳಿಸಿದ್ದಾರೆ.  
   
ತಮಿಳಿನ ಮನಾಡು, ಮಲಯಾಳಂನ ಹೃದಯಂ ಮತ್ತು ಬ್ರೋ ಡ್ಯಾಡಿ ಸಿನಿಮಾಗಳು ದೊಡ್ಡ ಮಟ್ಟದ ಖ್ಯಾತಿ ತಂದು ಕೊಟ್ಟಿದೆ. ಹೃದಯಂ ಸಿನಿಮಾ ಮೂಲಕ ಸೌತ್ ಸಿನಿ ಅಭಿಮಾನಿಗಳ ಹೃದಯ ಗೆದ್ದಿರುವ ನಟಿ ಕಲ್ಯಾಣಿ ಇದೀಗ ಕನ್ನಡ ಪ್ರೇಕ್ಷಕರನ್ನು ಮೋಡಿ ಮಾಡಲು ಬರ್ತಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಸಿನಿಮಾತಂಡ ಕಲ್ಯಾಣಿ ಜೊತೆ ಮಾತುಕತೆ ನಡೆಸಿದ್ದು ಕಥೆಯ ಬಗ್ಗೆ ಚರ್ಚೆ ಮಾಡಲಾಗಿದೆ ಎನ್ನಲಾಗಿದೆ.  ಕಲ್ಯಾಣಿ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ರೆ ಯುವಗೆ ನಾಯಕಿಯಾಗಿ ಕನ್ನಡದಲ್ಲಿ ಮಿಂಚಲಿದ್ದಾರೆ. 

ಅಂದಹಾಗೆ ಯುವರಾಜ್ ರಾಜ್ ಕುಮಾರ್ ಮೊದಲ ಸಿನಿಮಾಗೆ ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಸಿನಿಮಾ ಅನೌನ್ಸ್ ಮಾಡಲಾಗಿದೆ. ಆದರೆ ಹೆಚ್ಚಿನ ಮಾಹಿತಿ ರಿವೀಲ್ ಮಾಡಿಲ್ಲ. ಸಿನಿಮಾದ ಟೈಟಲ್, ಉಳಿದ ಪಾತ್ರವರ್ಗ ಸೇರಿದಂತೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಹಾಗಾಗಿ ಯಾವಾಗ ಹೆಚ್ಚಿನ ಮಾಹಿತಿ ರಿವೀಲ್ ಆಗಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಏಪ್ರಿಲ್ ನಿಂದ ಸಿನಿಮಾದ ಶೂಟಿಂಗ್ ಪ್ರಾರಂಭವಾಗಲಿದೆ ಎನ್ನಲಾಗಿದೆ. ಶೂಟಿಂಗ್ ಪ್ರಾರಂಭಕ್ಕೂ ಮುನ್ನ ಸಿನಿಮಾತಂಡ ನಾಯಕಿ ಬಗ್ಗೆ ರಿವೀಲ್ ಮಾಡುವ ಸಾಧ್ಯತೆ ಇದೆ. ಆದರೆ ಅಲ್ಲಿಯವರೆಗೂ ಕಾಯಲೇ ಬೇಕು.

ಗೌರವ ಯಾವಾಗಲೂ ಪರಸ್ಪರ ಅಲ್ವಾ? ಸುಳ್ಳು ಸತ್ಯವಾಗುವುದಿಲ್ಲ : ಯುವ ರಾಜ್‌ಕುಮಾರ್

ಯುವ ರಾಜ್‌ಕುಮಾರ್ ಪೋಸ್ಟ್‌ 

ಇತ್ತೀಚಿಗಷ್ಟೆ ಯುವ ರಾಜ್‌ಕುಮಾರ್ ಪೋಸ್ಟ್ ಶೇರ್ ಮಾಡಿದ್ದರು, 'ನಡೆಯುತ್ತಿರುವ ಘಟನೆಗಳ ಬಗ್ಗೆ ಮಾತನಾಡಲು ನಾನು ತುಂಬಾ ಚಿಕ್ಕವನು ಆದ್ರೆ ತುಂಬಾ ಚಿಕ್ಕವನು ಆದರೆ ತುಂಬಾ ಹೆಮ್ಮೆಯಿಂದ ಒಂದು ವಿಷಯ ಹೇಳ್ಬೇಕೆಂದ್ರೆ...ನಮ್ಮ ಕುಟುಂಬದ ಅಭಿಮಾನಿಗಳು ನಮ್ಮ ತಾತನವರು ಕಾಲದಿಂದ ಇವತ್ತಿನವರೆಗೂ ಕನ್ನಡ ಚಿತ್ರರಂಗದ ಪ್ರತಿ ಕಲಾವಿದರಿಗೂ ಬೆಂಬಲವಾಗಿ ನಿಂತಿದ್ದಾರೆ. ಎಲ್ಲಾ ಸಂದರ್ಭದಲ್ಲೂ ಸಭ್ಯತೆ ಮತ್ತು ಘನತೆಯಿಂದಲೇ ನಡೆದುಕೊಂಡಿದ್ದಾರೆ. ಪ್ರತಿಯೊಬ್ಬರನ್ನು ಗೌರವದಿಂದ ಕಾಣುವ ಪ್ರೀತಿ ವಿಶ್ವಾಸವನ್ನು ಹಂಚುವ ಸಂಸ್ಕೃತಿಯುಳ್ಳ ಅಭಿಮಾನಿಗಳೇ ದೇವರು. 

Yuva Rajkumar: ಪುನೀತ್ ಉತ್ತರಾಧಿಕಾರಿ ಯುವ: ದೊಡ್ಮನೆ ಹುಡುಗನಿಗೆ ಭಾರೀ ಡಿಮ್ಯಾಂಡ್

ಆದರೆ, ಗೌರವ ಯಾವಾಗಲೂ ಪರಸ್ಪರ ಅಲ್ವಾ? ಅಪ್ಪು ಚಿಕ್ಕಪ್ಪನ ನಡವಳಿಕೆ, ಸಾಮಾಜಿಕ ಪ್ರಜ್ಞೆ, ಮಹಿಳೆಯರನ್ನು ಗೌರವಿಸುವುದು, ಎಲ್ಲರಿನ್ನೂ ಪ್ರೀತಿಸುವ ಅವರ ವ್ಯಕ್ತಿತ್ವದ ಬಗ್ಗೆ ಪ್ರತಿಯೊಬ್ಬರಿಗೂ ಚೆನ್ನಾಗಿಯೇ ತಿಳಿದಿದೆ. ಅವರ ವ್ಯಕ್ತಿತ್ವ ಎಂದೆಂದಿಗೂ ಎಲ್ಲರಿಗೂ ಮಾದರಿಯಾಗಿ ಇರುತ್ತದೆ. ಅವರ ಬಗ್ಗೆ ಅಗೌರವದಿಂದ ಅವಹೇಳನಕಾರಿಯಾಗಿ ಮಾತನಾಡಿ ಅವರ ಅಭಿಮಾನಿಗಳನ್ನು ಕೆಣಕಿದರೆ ಅವರ ಭಾವನೆಗಳನ್ನು ನೋಯಿಸಿದರೆ, ಅಭಿಮಾನಿಗಳು ನಿರ್ದಿಷ್ಟ ರೀತಿಯಲ್ಲಿ ಪ್ರತಿಕ್ರಿಯಿಸುವುದು 'ಬಹಿಂರಗವಾಗಿಯೇ' ವಿನಃ ನಡೆಯುವ ಪ್ರತಿಯೊಂದು ಘಟನೆಗೂ ಅವರೇ ಕಾರಣಕರ್ತರು ಅಗೋದಿಲ್ಲ' ಎಂದು ದೀರ್ಘವಾಗಿ ಬರೆದುಕೊಂಡಿದ್ದರು.
 

Follow Us:
Download App:
  • android
  • ios