ಟಾಲಿವುಡ್‌ನಲ್ಲಿ ಮತ್ತೊಮ್ಮೆ ಉಪ್ಪಿ, ಈ ಬಾರಿ ಯಾವ ರೋಲ್..?
ಉಪ್ಪಿ ಮೆಗಾಸ್ಟಾರ್ ಕುಟುಂಬದ ಅಂಗಳಕ್ಕೆ ಕಾಲಿಟ್ಟಿದ್ದಾರೆ. ವರುಣ್ ತೇಜ್ ನಟನೆಯ ‘ಬಾಕ್ಸರ್’ ಚಿತ್ರದಲ್ಲಿ ಉಪೇಂದ್ರ ಕೋಚ್ ಆಗಿ ನಟಿಸುತ್ತಿದ್ದಾರೆ. ಚಿರಂಜೀವಿ ಅವರ ಸೋದರ ನಾಗಬಾಬು ಪುತ್ರನೇ ಈ ವರುಣ್ ತೇಜ್.
ಬೇರೆ ಭಾಷಿಕರಿಗೆ ಕನ್ನಡದ ಕೆಲವು ನಟರ ಮೇಲೆ ಸದಾ ಕಣ್ಣು. ತಮ್ಮ ಚಿತ್ರಗಳಿಗೆ ಈ ನಟರನ್ನು ಕರೆಸುವುದಕ್ಕೆ ಆಗಾಗ ಪ್ಲಾನ್ ಮಾಡುತ್ತಲೇ ಇರುತ್ತಾರೆ. ಹೀಗೆ ಪರಭಾಷಿಗರನ್ನು ಸೆಳೆಯುವ ನಟರಲ್ಲಿ ಉಪೇಂದ್ರ ಪ್ರಮುಖರು.
ಈಗ ಅವರು ಮತ್ತೆ ಮೆಗಾಸ್ಟಾರ್ ಕುಟುಂಬದ ಅಂಗಳಕ್ಕೆ ಕಾಲಿಟ್ಟಿದ್ದಾರೆ. ವರುಣ್ ತೇಜ್ ನಟನೆಯ ‘ಬಾಕ್ಸರ್’ ಚಿತ್ರದಲ್ಲಿ ಉಪೇಂದ್ರ ಕೋಚ್ ಆಗಿ ನಟಿಸುತ್ತಿದ್ದಾರೆ. ಚಿರಂಜೀವಿ ಅವರ ಸೋದರ ನಾಗಬಾಬು ಪುತ್ರನೇ ಈ ವರುಣ್ ತೇಜ್.
ನನ್ನ ನಟನೆಯ 50ನೇ ಚಿತ್ರಕ್ಕೆ ನಾನೇ ನಿರ್ದೇಶಕ: ಉಪೇಂದ್ರ
ಅಲ್ಲು ಅರ್ಜುನ್ ನಿರ್ಮಾಣದ, ಕಿರಣ್ ಕೊರಪಾಟಿ ನಿರ್ದೇಶನ ಮಾಡುತ್ತಿರುವ ‘ಬಾಕ್ಸರ್’ ಚಿತ್ರಕ್ಕೆ ಈಗಾಗಲೇ ಶೂಟಿಂಗ್ ಆರಂಭವಾಗಿದೆ. ಈ ಚಿತ್ರದಲ್ಲಿ ಬಾಕ್ಸಿಂಗ್ ಕೋಚ್ ಆಗಲು ಉಪೇಂದ್ರ ಸಾಕಷ್ಟುತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅವರು ಸಿಕ್ಕಾಪಟ್ಟೆವರ್ಕ್ಔಟ್ ಮಾಡುತ್ತಿರುವುದು ಇದೇ ‘ಬಾಕ್ಸರ್’ ಚಿತ್ರಕ್ಕಾಗಿ ಎಂಬುದು ಈಗ ಬಂದಿರುವ ಸುದ್ದಿ.
ಉಪೇಂದ್ರ ತೆಲುಗು ಸಿನಿಮಾ ಸನ್ ಆಫ್ ಸತ್ಯಮೂರ್ತಿಯಲ್ಲಿ ಅಲ್ಲು ಅರ್ಜುನ್ ಜೊತೆ ನಟಿಸಿದ್ದರು. ಈ ಸಿನಿಮಾದಲ್ಲಿ ಉಪೇಂದ್ರಗೆ ಜೋಡಿಯಾಗಿದ್ದು, ಕಾಲಿವುಡ್‌ನ ಖ್ಯಾತ ನಟಿ ಸ್ನೇಹಾ.