ತಂದೆ ವರನಟ ಡಾ.ರಾಜಕುಮಾರ್‌ ಹಾಗೂ ತಾಯಿ ಪಾರ್ವತಮ್ಮ ನವರಂತೆ ತಾವು ಕೂಡ ನೇತ್ರದಾನ ಮಾಡುವುದಾಗಿ ನಟ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ತಿಳಿಸಿದರು.

ಮಂಗಳವಾರ ನಾರಾಯಣ ನೇತ್ರಾಲಯದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ, ಅಪ್ಪಾಜಿಗೆ ಇಷ್ಟವಾದ ವಿಷಯಗಳಲ್ಲಿ ನೇತ್ರದಾನವು ಒಂದು ಎಂದು ತಿಳಿಸಿದ್ದಾರೆ. ನೇತ್ರದಾನ ಕುರಿತ ಪರಿಣಾಮಕಾರಿ ಅಂಶಗಳು ಹಾಗೂ ನೇತ್ರದಾನ ಉತ್ತೇಜಿಸುವ ‘ಅಕ್ಷಿ’ ಕನ್ನಡ ಚಲನಚಿತ್ರ ರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರವಾಗಿದ್ದು ಹೆಮ್ಮೆಯ ಸಂಗತಿ ಎಂದು ಚಿತ್ರತಂಡದ ಕಾರ್ಯವನ್ನು ಶ್ಲಾಘಿಸಿದರು.

ಪುನೀತ್‌ ರಾಜ್‌ಕುಮಾರ್, ಡಾಲಿ ಧನಂಜಯ್‌ ಜೊತೆ 'ಯುವರತ್ನ' ಚಿತ್ರದ ಬಗ್ಗೆ Exclusive ಸಂದರ್ಶನ!

ಚಿತ್ರಕ್ಕೆ ಪ್ರೇರೇಪಿಸಿದ ನಾರಾಯಣ ನೇತ್ರಾಲಯ ಸಂಸ್ಥೆಗೆ ಅಭಿನಂದನೆ ತಿಳಿಸಿದ ‘ಅಕ್ಷಿ’ ಚಿತ್ರಕಥೆ ಬರಹಗಾರ ದೇವೇಂದ್ರ ನಾಯ್ಡು ಅವರನ್ನು ಇದೇ ವೇಳೆ ಆಸ್ಪತ್ರೆ ಅಧ್ಯಕ್ಷ ಡಾ.ಕೆ.ಭುಜಂಗ್‌ ಶೆಟ್ಟಿಸನ್ಮಾನಿಸಿದರು.

ನಿರ್ದೇಶಕ ಮನೋಜ್‌ಕುಮಾರ್‌, ನಿರ್ಮಾಪಕ ಎಚ್‌.ಎಸ್‌.ರವಿ (ಹೊಳಲು), ಛಾಯಾಗ್ರಾಹಕ ಮುಕುಲ್‌ ಗೌಡ, ಸಹ ನಿರ್ದೇಶಕಿ ಮೀನಾ ರಘು ಮತ್ತು ಸುನೀಲ್‌ ರಾಜ್‌ ಇದ್ದರು.