ಭೈರತಿ ರಣಗಲ್ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್: ಮಫ್ತಿ-2 ಬಗ್ಗೆ ಮಹತ್ವದ ಅಪ್‌ಡೇಟ್ ಕೊಟ್ಟ ಶಿವಣ್ಣ
ಎಲ್ಲ ಕಡೆ ಸಿನಿಮಾಗೆ ರೆಸ್ಪಾನ್ಸ್ ತುಂಬಾ ಚೆನ್ನಾಗಿ ಬರ್ತಿದೆ. ಥಿಯೇಟರ್‌ಗೆ ಜನ ಬರ್ತಿಲ್ಲ ಎಂಬ ಕಂಪ್ಲೆಂಟ್ ಇತ್ತು, ಇವಾಗ ಜನ ಬರ್ತಿದಾರೆ. ಎಲ್ಲರೂ ಸಿನಿಮಾವನ್ನು ತುಂಬಾ ಇಷ್ಟ ಪಟ್ಟಿದ್ದಾರೆ. ಸಿನಿಮಾ ಉತ್ತಮ ಪ್ರದರ್ಶನ ಕಾಣ್ತಿರೋದ್ರಿಂದ ಮೊದಲು ಚಿತ್ರದುರ್ಗದಿಂದ ಶುರು ಮಾಡಿದ್ದೀವಿ. ಅಭಿಮಾನಿಗಳು ಸಿನಿಮಾ ನೋಡಲು ಬರುವುದೇ ನಮಗೆ ತುಂಬಾ ಖುಷಿ ವಿಚಾರವಾಗಿದೆ: ಡಾ.ಶಿವರಾಜ್ ಕುಮಾರ್
ಚಿತ್ರದುರ್ಗ(ನ.23): ಭೈರತಿ ರಣಗಲ್ ಸಿನಿಮಾ ಅದ್ಭುತ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಇಂದು(ಶುಕ್ರವಾರ) ಕೋಟೆನಾಡು ಚಿತ್ರದುರ್ಗಕ್ಕೆ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅವರು ಆಗಮಿಸಿದ್ದಾರೆ.
ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅಭಿನಯದ ಭೈರತಿ ರಣಗಲ್ ಸಿನಿಮಾ ಅದ್ಭುತ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ನಗರದ ಪ್ರಸನ್ನ ಚಿತ್ರಮಂದಿರಕ್ಕೆ ನಟ ಶಿವರಾಜ್ ಕುಮಾರ್ ಅವರು ಭೇಟಿ ನೀಡಿದ್ದಾರೆ. ಡಾ.ಶಿವರಾಜ್ ಕುಮಾರ್‌ಗೆ ಪತ್ನಿ ಹಾಗೂ ಸಿನಿಮಾದ ನಿರ್ಮಾಪಕಿ ಗೀತಾ ಸಾಥ್ ಕೊಟ್ಟಿದ್ದಾರೆ.
'ಭೈರತಿ ರಣಗಲ್' ಬಡ ಕುಟುಂಬ ಹುಡುಗಿ ಪಾತ್ರದಲ್ಲಿ 'ಚುಕ್ಕಿತಾರೆ' ಪುಟ್ಟಿ; ಯಾರು ಈ ಮಹಿತಾ?
ಇದೇ ವೇಳೆ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅವರು, ಎಲ್ಲ ಕಡೆ ಸಿನಿಮಾಗೆ ರೆಸ್ಪಾನ್ಸ್ ತುಂಬಾ ಚೆನ್ನಾಗಿ ಬರ್ತಿದೆ. ಥಿಯೇಟರ್‌ಗೆ ಜನ ಬರ್ತಿಲ್ಲ ಎಂಬ ಕಂಪ್ಲೆಂಟ್ ಇತ್ತು, ಇವಾಗ ಜನ ಬರ್ತಿದಾರೆ. ಎಲ್ಲರೂ ಸಿನಿಮಾವನ್ನು ತುಂಬಾ ಇಷ್ಟ ಪಟ್ಟಿದ್ದಾರೆ. ಸಿನಿಮಾ ಉತ್ತಮ ಪ್ರದರ್ಶನ ಕಾಣ್ತಿರೋದ್ರಿಂದ ಮೊದಲು ಚಿತ್ರದುರ್ಗದಿಂದ ಶುರು ಮಾಡಿದ್ದೀವಿ. ಅಭಿಮಾನಿಗಳು ಸಿನಿಮಾ ನೋಡಲು ಬರುವುದೇ ನಮಗೆ ತುಂಬಾ ಖುಷಿ ವಿಚಾರವಾಗಿದೆ. ಇತ್ತೀಚೆಗೆ ಒಳ್ಳೆಯ ಸಿನಿಮಾಗಳು ಬರ್ತಿರೋದು ಒಳ್ಳೆ ಬೆಳವಣಿಗೆಯಾಗಿದೆ ಎಂದು ತಿಳಿಸಿದ್ದಾರೆ.
ಆರೋಗ್ಯ ಚೆನ್ನಾಗಿದೆ ಒಂದು ಸರ್ಜರಿ ಇದೆ, ಮುಂದಿನ ತಿಂಗಳು ಅಮೆರಿಕಕ್ಕೆ ಹೋಗ್ತೀನಿ. ನಾವು ಯಾವಾಗಲೂ ಚಿತ್ರದುರ್ಗ ಮೂಲಕವೇ ಸಕ್ಸಸ್ ಮೀಟ್ ಶುರು ಮಾಡೋದು. ಮಫ್ತಿ-2 ಸಿನಿಮಾ ಖಂಡಿತ ಬರಲಿದೆ ಎಂದು ಶಿವಣ್ಣ ಸುಳಿವು ಕೊಟ್ಟಿದ್ದಾರೆ.
ನಿಮ್ಮ ಬಯೋಪಿಕ್ಗೆ ನಟ ಯಾರಾಗ್ಬೇಕು ಎಂಬ ಪ್ರಶ್ನೆಗೆ ಶಿವರಾಜ್ ಕುಮಾರ್ ಕೊಟ್ಟ ಉತ್ತರ ನೋಡಿ...
ಈಸೂರು ದಂಗೆ ಕಥೆ ಚೆನ್ನಾಗಿದೆ, ಅದನ್ನು ಮಾಡಿಯೇ ಮಾಡ್ತೀನಿ. ಅದು ಸಾಧಾರಣವಾಗಿ ಮಾಡುವ ಸಿನಿಮಾ ಅಲ್ಲ, ನಾವು ಕೇರ್ ಫುಲ್ ಆಗಿ ಮಾಡಬೇಕು. ಮುಂದಿನ ಸಿನಿಮಾ 45 ಬರ್ತಿದೆ. ಅದ್ರಲ್ಲಿ ನಾನು ಉಪೇಂದ್ರ, ರಾಜ್ ಬಿ ಶೆಟ್ಟಿ ಇದೀವಿ. ಭೈರತಿ ರಣಗಲ್ ನಲ್ಲಿ ಮಾಸ್ ಲುಕ್, 45 ರಲ್ಲಿ ಶಿವಣ್ಣ ಫುಲ್ ಕ್ಲಾಸ್ ಇದೆ. ನಮ್ಮ ಬ್ಯಾನರ್ ನಲ್ಲಿಯೇ A ಫಾರ್ ಆನಂದ್ ಎನ್ನುವ ಸಿನಿಮಾ ಬರ್ತಿದೆ. ಅದೊಂದು ಮಕ್ಕಳ ಸಿನಿಮಾ, ವಿಭಿನ್ನವಾಗಿ ನಾವು ಟ್ರೈ ಮಾಡ್ತಾ ಇರ್ತೀವಿ. ಬೇರೆ ದೇಶದಲ್ಲಿಯೂ ಭೈರತಿ ರಣಗಲ್ ರಿಲೀಸ್ ಆಗಿದೆ. ಮುಂದಿನ ವಾರದಲ್ಲಿ ತಮಿಳು, ತೆಲುಗು ಎರಡು ಭಾಷೆಯಲ್ಲಿ ರಿಲೀಸ್ ಆಗುತ್ತೆ ಎಂದು ಹೇಳಿದ್ದಾರೆ.
ನಾನು ಅಪ್ಪು ನೆನಪಿಸಿಕೊಳ್ಳದ ದಿನಗಳೇ ಇಲ್ಲ. ನೆನಪಿಸಿಕೊಳ್ಳದಿದ್ರೆ ನಾನು ಅಣ್ಣ ಹೇಗೆ ಆಗ್ತೀನಿ. ಅಪ್ಪು ನನ್ನೊಳಗೆ ಇರುವಾಗ ನಾನು ಯಾಕೆ ನೆನಪಿಸಿಕೊಳ್ಳಬೇಕು. ಅಪ್ಪು ಇದಾನೆ ಎಂದು ನಾವೆಲ್ಲರೂ ಅನ್ಕೊಬೇಕು. ನಿಮ್ಮಲ್ಲಿ, ನನ್ನಲ್ಲಿ, ಇಡೀ ಇಂಡಸ್ಟ್ರಿಲಿ ನಾನು ಅಪ್ಪು ನೋಡ್ತೀನಿ. ಅವರು ಹೋದ ತಕ್ಷಣ ಜೀವನ ಮುಗೀತು ಅಂತಲ್ಲ. ಅವರನ್ನು ಇಟ್ಕೊಂಡ್ ಹೇಗೆ ಬಾಳ್ತೀವಿ ಅನ್ನೋದೆ ಜೀವನ ಆಗಿದೆ. ಅಪ್ಪು ಎಲ್ಲೋ ಹೋಗಿಲ್ಲ ನಮ್ಮಲ್ಲೇ ಇದಾನೆ. ಅವನ ಕಣ್ಣುಗಳು, ಅಪ್ಪಾಜಿ ಕಣ್ಣುಗಳು ನಮ್ಮನ್ನೇ ನೋಡ್ತಿವೆ. ಅವರಿಂದಲೇ ತುಂಬಾ ಜನ ನಾವು ಅಗಾಂಗ ದಾನ ಮಾಡ್ತೀವಿ ಅಂತಿದಾರೆ. ಎಲ್ಲಾ ದಿನಗಳಲ್ಲೂ ನಾವು ಅಪ್ಪು ನೆನಪಿಸಿಕೊಳ್ತೀವಿ ಎಂದು ಶಿವರಾಜ್ ಕುಮಾರ್ ತಿಳಿಸಿದ್ದಾರೆ.