ಶಿವಣ್ಣ ಮನೆಗೆ ವಿನೋದ್ ರಾಜ್ ಭೇಟಿ, ಧೈರ್ಯ ತುಂಬಿ ಹಾರೈಸಿದ ಲೀಲಾವತಿ ಪುತ್ರ

ಲೀಲಾವತಿ ಪುತ್ರ, ನಟ ವಿನೋದ್‌ ರಾಜ್ ಅವರು ಅವರಿಗೆ ಡಾ ರಾಜ್‌ಕುಮಾರ್ ಹಾಗು ಅವರ ಕುಟುಂಬ ಎಂದರೆ ಯಾವತ್ತಿಗೂ ತುಂಬಾ ಗೌರವ ಹಾಗೂ ಅಕ್ಕರೆ. ಡಾ ರಾಜ್‌ಕುಮಾರ್ ಅವರ ದೊಡ್ಮನೆಯಲ್ಲಿ ಯಾವುದೇ ಸಮಸ್ಯೆ ತಲೆದೋರಿದರೂ ತಕ್ಷಣವೇ ಸ್ಪಂದಿಸಿ, ಅವರಿಗೆ ಒಳ್ಳೆಯದಾಗಲಿ ಎಂದು..

Vinod Raj visits Shivarajkumar in House and wishes for recovery srb

ಅಮೆರಿಕಕ್ಕೆ ಚಿಕಿತ್ಸೆ ಹಾಗೂ ಸರ್ಜರಿಗಾಗಿ ಹೊರಟು ನಿಂತಿರುವ ನಟ ಶಿವಣ್ಣ (Shiva Rajkumar) ಮನೆಗೆ ವಿನೋದ್ ರಾಜ್ (Vinod Raj) ಭೇಟಿ ನೀಡಿದ್ದಾರೆ. ನಾಗಾವರದಲ್ಲಿರುವ ನಟ ಶಿವರಾಜ್‌ಕುಮಾರ್ ಅವರ ಮನೆಗೆ ಹೋಗಿ, ಅಲ್ಲಿ ಅವರ ಜೊತೆ ಮಾತುಕತೆ ನಡೆಸಿದ್ದಾರೆ ನಟ ವಿನೋದ್ ರಾಜ್‌. ಈ ವೇಳೆ ಅವರು 'ನೀವು ಆರಾಮವಾಗಿ ಅಲ್ಲಿಂದ ಬರುತ್ತೀರಾ, ಏನೂ ಸಮಸ್ಯೆ ಆಗೋದಿಲ್ಲ. ನಾನು ನಿಮ್ಮ ಶ್ರೇಯಸ್ಸಿಗಾಗಿ ಪ್ರಾರ್ಥಿಸುತ್ತೇನೆ' ಎಂದು ಧೈರ್ಯ ತುಂಬಿಸಿ ಹಾರೈಸಿದ್ದಾರೆ. 

ಹೌದು, ಲೀಲಾವತಿ ಪುತ್ರ, ನಟ ವಿನೋದ್‌ ರಾಜ್ ಅವರು ಅವರಿಗೆ ಡಾ ರಾಜ್‌ಕುಮಾರ್ ಹಾಗು ಅವರ ಕುಟುಂಬ ಎಂದರೆ ಯಾವತ್ತಿಗೂ ತುಂಬಾ ಗೌರವ ಹಾಗೂ ಅಕ್ಕರೆ. ಡಾ ರಾಜ್‌ಕುಮಾರ್ ಅವರ ದೊಡ್ಮನೆಯಲ್ಲಿ ಯಾವುದೇ ಸಮಸ್ಯೆ ತಲೆದೋರಿದರೂ ತಕ್ಷಣವೇ ಸ್ಪಂದಿಸಿ, ಅವರಿಗೆ ಒಳ್ಳೆಯದಾಗಲಿ ಎಂದು ನಟಿ ಲೀಲಾವತಿ ಹಾಗೂ ವಿನೋದ್ ರಾಜ್ ಅವರಿಬ್ಬರೂ ಯಾವತ್ತಿಗೂ ಹರಸುತ್ತಾರೆ, ಹಾರೈಸುತ್ತಾರೆ. ಪುನೀತ್ ಅವರು ತೀರಿಕೊಂಡಾಗ ಕೂಡ ಅಮ್ಮ-ಮಗ ಇಬ್ಬರೂ ಹೋಗಿ ಸಾಂತ್ವನ ಹೇಳಿದ್ದರು. 

ನನ್ನ ಮಗಳಿಗೆ ನೇಚರ್ ಪ್ಲಾನ್ ಮಾಡಿರುತ್ತೆ, ನಾನು ಜಸ್ಟ್ ಸಪೋರ್ಟ್ ಮಾಡ್ತೀನಿ: ಕಿಚ್ಚ ಸುದೀಪ್ 

ಅಷ್ಟೇ ಅಲ್ಲ, ನಟಿ ಲೀಲಾವತಿ ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದು ಸಾವಿಗೆ ಸನಿಹವಾಗಿದ್ದ ಸಮಯದಲ್ಲಿ ಸ್ವತಃ ಶಿವಣ್ಣ ಅವರು ಹೋಗಿ ಲೀಲಾವತಿಯವರನ್ನು ನೋಡಿ ಬಂದಿದ್ದರು. ಹಾಗೇ, ಮಗ ವಿನೋದ್ ರಾಜ್ ಅವರಿಗೂ ಆ ಸಮಯದಲ್ಲಿ ಧೈರ್ಯ ತುಂಬಾ, ಆದಷ್ಟು ಬೇಗ ಅಮ್ಮ ಲೀಲಾವತಿಗೆ ಹುಶಾರಾಗಲಿ ಎಂದು ಆಶಿಸಿ, ಹೇಳಿಕೆ ನೀಡಿ ಹೊರಬಂದಿದ್ದಾರೆ. ಈಗ ಸ್ವತಃ ಶಿವಣ್ಣ ಅವರಿಗೆ ಅನಾರೋಗ್ಯ ಕಾಡುತ್ತಿದ್ದು, ಲೀಲಾವತಿ ಮಗ ವಿನೋದ್ ರಾಜ್ ಅವರು ಶಿವಣ್ಣ ಮನೆಗೆ ಹೋಗಿ ಶುಭ ಹಾರೈಸಿ ಬಂದಿದ್ದಾರೆ. ಆದರೆ ಲೀಲಾವತಿ ಈಗಿಲ್ಲ!

ಒಟ್ಟಿನಲ್ಲಿ, ನಟ ಶಿವರಾಜ್‌ಕುಮಾರ್ ಅವರು ಇಂದು 5 ಗಂಟೆಗೆ (20 December 2024) ಅಮೆರಿಕಕ್ಕೆ ಹೊರಡಲಿದ್ದಾರೆ, ಅವರ ಆಪ್ತರು, ಸುದೀಪ್ ಸೇರಿದಂತೆ ಚಿತ್ರರಂಗದ ಹಲವು ಹಿತೈಷಿಗಳು ಅವರನ್ನು ಭೇಟಿಯಾಗಿ ಶುಭ ಹಾರೈಸಿದ್ದಾರೆ. ಬೆಳಿಗ್ಗೆ ಶಿವಣ್ಣ ಮನೆಯಲ್ಲಿ ಕಾಡುಮಲ್ಲೇಶ್ವರ ದೇವಸ್ಥಾನದ ಅರ್ಚಕರಿಂದ ಪೂಜೆ ನಡೆದಿದೆ. ಹಾಗೇ, ನಟ ಶಿವಣ್ಣರ ನಾಗಾವರದ ಮನೆಗೆ ತೆರಳಿ,  ಅವರು ಕ್ಷೇಮವಾಗಿ ಬರಲೆಂದು ಪೂಜೆ ಮಾಡಿದ್ದಾರೆ ಅರ್ಚಕರು. 

ಉಪೇಂದ್ರ ಸಿನಿಮಾಗೆ ಕೌಂಟ್‌ಡೌನ್, ಸರ್ಜರಿ ಮರುದಿನವೇ UI ನೋಡಲಿರೋ ಶಿವಣ್ಣ!

Latest Videos
Follow Us:
Download App:
  • android
  • ios