ಬೆಂಗಳೂರು[ಅ. 30]  ಪುಟಾಣಿ ಐರಾ ಅಕ್ಕ  ಆಗಿದ್ದಾಳೆ. ಯಶ್-ರಾಧಿಕಾ ಪಂಡಿತ್ ಕುಟುಂಬಕ್ಕೆ ಹೊಸ ಸದಸ್ಯರ ಸೇರ್ಪಡೆಯಾಗಿದೆ.  ಸದ್ಯ ಸಂತಸದಲ್ಲಿರುವ ಯಶ್‌ ಮೊದಲ ಬಾರಿಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಶೇಷ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ ಯಶ್‌. ಅದರಲ್ಲಿ ಮೊದಲಿಗೆ ಅವರ ಮಗಳು ಆಯ್ರಾ ತೊದಲು ನುಡಿಯುತ್ತಾಳೆ. ನಂತರ ಯಶ್‌, 'ನನ್ನ ಮಗಳು ಏನು ಹೇಳುವುದಕ್ಕೆ ಪ್ರಯತ್ನಿಸುತ್ತಿದ್ದಾಳೆ ಎಂದರೆ, ಇಂದು ಅವಳು ತಮ್ಮನನ್ನು ಪಡೆದುಕೊಂಡಿದ್ದಾಳೆ ಎಂದು ಆಂಗ್ರ ಭಾಷೆಯಲ್ಲಿ ಮೊದಲು ಮಾತು ಆರಂಭಿಸುತ್ತಾರೆ.

ಯಶ್-ರಾಧಿಕಾ ನಂದಗೋಕುಲಕ್ಕೆ ಬಂದಾಯ್ತು ಹೊಸ ಅತಿಥಿ; ಅಕ್ಕ ಆಗಿದ್ದಾಳೆ 'ಐರಾ'!

ನಿಮ್ಮ ಹಾರೈಕೆ ಮತ್ತು ಪ್ರೀತಿ ನಮ್ಮ ಕುಟುಂಬದ ಮೇಲೆ ಸದಾ ಹೀಗೆ ಇರಲಿ.  'ಸ್ವಲ್ಪ ಬ್ಯುಸಿ ಕಣ್ರಪ್ಪ ಮಕ್ಳು ಜತೆ. ಸದ್ಯಕ್ಕೆ ಅಡ್ಜೆಸ್ಟ್ ಮಾಡ್ಕೋಳಿ'  ಎಂದು ಕನ್ನಡದಲ್ಲಿ ಹೇಳುವುದರೊಂದಿಗೆ ವಿಡಿಯೋ ಕೊನೆಯಾಗಿದೆ.

ಮೊಮ್ಮಗ ಬಂದ ಖುಷಿಯನ್ನ ಹಂಚಿಕೊಂಡಿದ್ದ ಯಶ್ ತಾಯಿ ಪುಷ್ಪ, 'ಮೊಮ್ಮಗ‌ ಹುಟ್ಟಿರೋದು ಖುಷಿ ತಂದಿದೆ. ಮೊಮ್ಮಗ ಯಶ್ ನಂತೆಯೇ ಕಾಣುತ್ತಾನೆ. ಇಂದು ಮತ್ತು ನಾಳೆ ಡೇಟ್ ಕೊಟ್ಟಿದ್ರು ಆದ್ರೆ ಇವತ್ತು 9 ಗಂಟೆಗೆ ಡೆಲಿವರಿ ಆಗಿದೆ. ರಾಧಿಕಾ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಡಿಸ್ಚಾರ್ಜ್ ಬಗ್ಗೆ ಇನ್ನು ನಿರ್ಧಾರ ಮಾಡಿಲ್ಲ. ನಮ್ಮ ಮೇಲೆ‌ ನೀವೆಲ್ಲ‌ ಇಟ್ಟಿರೋ ಪ್ರೀತಿಯನ್ನೇ ನಮ್ಮ ಮೊಮ್ಮಕ್ಕಳಿಗೂ ಕೊಡಿ' ಎಂದಿದ್ದರು.

ರಾಧಿಕಾ ಪಂಡಿತ್ ಹಾಗೂ ಮಗುವಿನ ಆರೋಗ್ಯದ ಬಗ್ಗೆ ಡಾಕ್ಟರ್ ಸ್ವರ್ಣಾ ಮಾತನಾಡಿದ್ದಾರೆ.  ತಾಯಿ,ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಮಗುವಿನ 3 ಕೆಜಿ ತೂಕ ಇದೆ.  ಐರಾಳಂತೆಯೇ ಇದ್ದಾನೆ ಯಶ್ ಎರಡನೇ ಮಗು. ಮೊದಲನೆಯದ್ದು ಸಿಸೇರಿಯನ್, ಎರಡನೆಯದ್ದೂ ಸಹ ಪ್ಲಾನ್ಡ್ ಸಿಸೇರಿಯನ್. ಮಗನನ್ನ ನೋಡಿ ಯಶ್ ಫುಲ್ ಖುಷಿಯಾಗಿದ್ದಾರೆ.  ಕುಟುಂಬದವರೆಲ್ಲಾ ತಾಯಿ-ಮಗುವನ್ನ ನೋಡಲು ಬಂದಿದ್ದಾರೆ ಎಂದು ತಿಳಿಸಿದ್ದರು.