Asianet Suvarna News Asianet Suvarna News

ಮಿಸ್ ನಂದಿನಿ ಚಿತ್ರಕ್ಕೆ ರವಿಚಂದ್ರನ್ ಕ್ಲಾಪ್

  • ‘ಮಿಸ್ ನಂದಿನಿ’ ಸಿನಿಮಾಗೆ ಕ್ರೇಜಿಸ್ಟಾರ್ ರವಿಚಂದ್ರನ್ ಕ್ಲಾಪ್
  • ಬೆಂಗಳೂರಿನ ಲಕ್ಷ್ಮೀ ವೆಂಕಟೇಶ್ವರ ದೇಗುಲದಲ್ಲಿ ಮುಹೂರ್ತ
Sandalwood actor Ravichandran clap for Miss Nandini movie starring Priyanka Upendra dpl
Author
Bangalore, First Published Oct 18, 2021, 11:35 AM IST
  • Facebook
  • Twitter
  • Whatsapp

ಪ್ರಿಯಾಂಕ ಉಪೇಂದ್ರ ಈಗ ಸರ್ಕಾರಿ ಶಾಲೆ ಉಳಿಸಲು ಹೊರಟಿದ್ದಾರೆ. ಅವರ ಈ ಸರ್ಕಾರಿ ಶಾಲೆ ಉಳಿಸಿ ಬೆಳೆಸುವ ಪ್ರಯತ್ನದ ಹೆಸರೇ ‘ಮಿಸ್ ನಂದಿನಿ’. ಗುರುದತ್ತ ಎಸ್ ಆರ್ ನಿರ್ದೇಶನದ ಈ ಸಿನಿಮಾ ಭಾರತದಲ್ಲಿರುವ ಅಷ್ಟೂ ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಉದ್ದೇಶ ಹೊಂದಿದೆ ಎಂದು ಚಿತ್ರತಂಡ ಘೋಷಿಸಿಕೊಂಡಿದೆ.

ಈ ಚಿತ್ರದ ಮುಹೂರ್ತ ಬೆಂಗಳೂರಿನ ಲಕ್ಷ್ಮೀ ವೆಂಕಟೇಶ್ವರ ದೇಗುಲದಲ್ಲಿ ನಡೆಯಿತು. ಕನ್ನಡ ಚಿತ್ರರಂಗದ ಲಕ್ಕಿ ಹ್ಯಾಂಡ್ ಎಂದೇ ಕರೆಸಿಕೊಳ್ಳುವ ಕ್ರೇಜಿಸ್ಟಾರ್ ರವಿಚಂದ್ರನ್ ಬಂದು ಕ್ಲಾಪ್ ಮಾಡಿದರು. ಅಪ್ಪಣ್ಣ, ಸಿದ್ಲಿಂಗು ಶ್ರೀಧರ್, ಮೈಸೂರು ಬಾಲಣ್ಣ ಅಭಿನಯಿಸುತ್ತಿರುವ ಈ ಚಿತ್ರದ ಶೂಟಿಂಗ್ ಇದೇ ತಿಂಗಳಾಂತ್ಯಕ್ಕೆ ಶುರುವಾಗಲಿದೆ.

ಒಂದೇ ತಿಂಗಳಲ್ಲಿ ಸಿನಿಮಾ ಮುಗಿಸುವ ಇರಾದೆ ನಿರ್ದೇಶಕರಿಗೆ ಇದೆ. ಸರ್ವೇಶ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ವೀರೇಶ್ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ಆರ್‌ಕೆ ಫಿಲಂಸ್‌ನ ರಾಮ್ ಕೆ. ಈ ಸಿನಿಮಾ ನಿರ್ಮಿಸುತ್ತಿದ್ದಾರೆ.  

Follow Us:
Download App:
  • android
  • ios