Asianet Suvarna News Asianet Suvarna News

ಮೂರೇ ವರ್ಷದಲ್ಲಿ ನಾನು ಹೇಗೆ ಬೆಳೆದೆ ಎಂದು ಎಲ್ಲರೂ ಕೇಳುತ್ತಾರೆ. ಅದರ ಹಿಂದೆ....: ರಕ್ಷಕ್ ಬುಲೆಟ್ ವಿಡಿಯೋ ರಿಲೀಸ್!

ನಟ ಬುಲೆಟ್‌ ಪ್ರಕಾಶ್‌ ಅವರ ಪುತ್ರ ರಕ್ಷಕ್‌ ಬುಲೆಟ್‌ ಯಾವಾಗಲೂ ಸುದ್ದಿಯಲ್ಲಿಯೇ ಇರುತ್ತಾರೆ. ಕೆಲವೊಮ್ಮೆ ಅವರು ಬಿಲ್ಡಪ್​ ಕೊಟ್ಟಿಕೊಂಡು ಓಡಾಡುತ್ತಾರೆ. ಈಗ ಅವರ ಹೊಸ ವಿಡಿಯೋವೊಂದು ವೈರಲ್ ಆಗಿದೆ. 

Sandalwood Actor Rakshak Bulllet Washed His Father Bullet Prakash Grave gvd
Author
First Published Jul 1, 2024, 4:53 PM IST

ನಟ ಬುಲೆಟ್‌ ಪ್ರಕಾಶ್‌ ಅವರ ಪುತ್ರ ರಕ್ಷಕ್‌ ಬುಲೆಟ್‌ ಯಾವಾಗಲೂ ಸುದ್ದಿಯಲ್ಲಿಯೇ ಇರುತ್ತಾರೆ. ಟ್ರೋಲ್, ಹೇಳಿಕೆಗಳ ಜೊತೆ ಜೊತೆಗೆ ತಮ್ಮ ತಂದೆಯ ವಿಷಯಕ್ಕೂ ಸಕತ್ ಸುದ್ದಿಯಾಗುತ್ತಾರೆ. ಸತ್ಯಕ್ಕೆ ದೂರವಾದ ಮಾತನ್ನು ಹೇಳುತ್ತಾ ಅವರು ಚರ್ಚೆ ಆಗುತ್ತಾರೆ. ಕೆಲವೊಮ್ಮೆ ಅವರು ಬಿಲ್ಡಪ್​ ಕೊಟ್ಟಿಕೊಂಡು ಓಡಾಡುತ್ತಾರೆ. ಈ ಕಾರಣಕ್ಕೆ ಅವರು ಅನೇಕ ಬಾರಿ ಟ್ರೋಲ್ ಆಗಿದ್ದೂ ಇದೆ. ಈಗ ಅವರ ಹೊಸ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ತಂದೆ ಬುಲೆಟ್ ಪ್ರಕಾಶ್ ಹಾಗೂ ಅಜ್ಜಿ ಗೌರಮ್ಮ ಅವರ ಸಮಾಧಿಯನ್ನು ತೊಳೆದಿದ್ದಾರೆ. ಈ ವಿಡಿಯೋಗೆ ಎಲ್ಲಾ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ.

ಗೌರಮ್ಮ ಹಾಗೂ ಬುಲೆಟ್ ಪ್ರಕಾಶ್ ಸಮಾಧಿ ಅಕ್ಕ ಪಕ್ಕದಲ್ಲೇ ಇದೆ. ಈ ಸಮಾಧಿಗೆ ರಕ್ಷಕ್ ಬುಲೆಟ್ ಭೇಟಿ ನೀಡಿದ್ದಾರೆ. ‘ನನಗೆ ಎಷ್ಟೇ ಖುಷಿ ಆಗಲಿ, ಬೇಸರ ಆಗಲಿ ನಾನು ಇಲ್ಲಿಗೆ ಬಂದು ಐದು ನಿಮಿಷ ಕುಳಿತು ನನ್ನ ಮನಸ್ಸಿನ ಮಾತನ್ನು ಹೇಳಿದಾಗ ತುಂಬಾ ಖುಷಿ ಎನಿಸುತ್ತದೆ. ನಾವು ಕ್ಲೀನ್ ಆಗಿದ್ದಂತೆ, ಇವರು ಕ್ಲೀನ್ ಆಗಿರಬೇಕು. ಹೀಗಾಗಿ, ವಾರಕ್ಕೆ ಒಮ್ಮೆ ಬಂದು ಇಲ್ಲಿ ಸಮಾಧಿ ತೊಳೆದು ಹೋಗುತ್ತೇನೆ’ ಎಂದಿದ್ದಾರೆ ರಕ್ಷಕ್.
 


‘ರಕ್ಷಕ್ ಮೂರೇ ವರ್ಷದಲ್ಲಿ ಹೇಗೆ ಬೆಳೆದ ಎಂದು ಎಲ್ಲರೂ ಕೇಳುತ್ತಾರೆ. ಅದರ ಹಿಂದೆ ಒಂದು ಶ್ರಮ ಇದೆ. ನಮ್ಮ ಅಜ್ಜಿ, ತಂದೆನ ತುಂಬಾ ಚೆನ್ನಾಗಿ ನೋಡಿಕೊಂಡಿದ್ದೇನೆ. ಮಗು ರೀತಿ ನೋಡಿಕೊಂಡಿದ್ದೇನೆ. ಊದಿನಕಡ್ಡಿ ಹಚ್ಚಿ, ಅವರಿಷ್ಟದ ತಿಂಡಿನ ಇಟ್ಟು ಹೋಗುತ್ತೇನೆ. ನಮಸ್ಕಾರ ಮಾಡಿ ಹೋಗುತ್ತೇನೆ. ದೊಡ್ಡವರ ಆಶೀರ್ವಾದ ಇದ್ದರೆ ಬೆಳೆಯುತ್ತೀರಾ. ದೊಡ್ಡವರ ಆಶೀರ್ವಾದವೇ ಇದಕ್ಕೆ ಕಾರಣ’ ಎಂದಿದ್ದಾರೆ ರಕ್ಷಕ್.

ರಕ್ಷಕ್ ಅವರು ವಿಡಿಯೋಗಳನ್ನು ಹಂಚಿಕೊಂಡಾಗ ನೆಗೆಟಿವ್ ಕಮೆಂಟ್​ಗಳು ಬರೋದೆ ಹೆಚ್ಚು. ಆದರೆ, ಈಗ ಅವರು ಹಂಚಿಕೊಂಡಿರೋ ಈ ವಿಡಿಯೋಗೆ ಎಲ್ಲ ಕಡೆಗಳಿಂದ ಭರ್ಜರಿ ಮೆಚ್ಚುಗೆ ಸಿಗುತ್ತಿದೆ. ಎಲ್ಲರೂ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. "ನೀನು ಯಾರಿಗೆ ಪರಿಚಯ ಇಲ್ಲ ಗುರು ಎಲ್ಲರಿಗೂ ಪರಿಚಯ ಇದ್ದೀಯ ನಿನ್ನ ಬಗ್ಗೆ ತುಂಬಾ ಹೆಮ್ಮೆ ಇದೆ. 

ಆ ದೇವರು ನಿನಗೆ ಒಳ್ಳೆಯದು ಮಾಡಲಿ ಕನ್ನಡ ಚಿತ್ರರಂಗಲ್ಲಿ ನೀವು ಸ್ಟಾರ್ ಆಗಿರು....". "ಜೀವನದಲ್ಲಿ ನೀನು ಮುಂದೆ ಬರ್ತೀಯ ಬ್ರೋ.. ನಿಮ್ ತಂದೆ ತಾಯಿ ಆಶೀರ್ವಾದ ನಿಮ್ ಮೇಲೆ ಇದ್ದೆ ಇರುತ್ತೆ.. ನಿನ್ ಕ್ಯೆಲಾದಷ್ಟು ಒಳ್ಳೆ ಕೆಲ್ಸ ಮಾಡು, ಬಡವರ ಕಷ್ಟಕ್ಕೆ ನೆರವಾಗು ಬ್ರೋ.. ನಿನ್ನನ್ನ ದೇವ್ರು ಚೆನ್ನಾಗಿ ಇಟ್ಟಿರಲಿ..." ಎಂದು ಜನ ಹರಸುತ್ತಿದ್ದಾರೆ. ರಕ್ಷಕ್ ಅವರು ‘ಬಿಗ್ ಬಾಸ್​ ಕನ್ನಡ ಸೀನ್ 10’ರಲ್ಲಿ ಭಾಗಿ ಆಗಿದ್ದರು. ಒಂದೇ ತಿಂಗಳಿಗೆ ಅವರು ಎಲಿಮಿನೇಟ್ ಆದರು.

ಇನ್ಮುಂದೆ ನಂದೇ ರೌಂಡು, ನಂದೇ ಸೌಂಡು ಎಂದ ಮರಿ ಬುಲೆಟ್‌: ಮೊದಲ ಚಿತ್ರದಲ್ಲೇ ಮಚ್ಚು ಹಿಡಿಯಲಿದ್ದಾರೆ ರಕ್ಷಕ್‌!

ಸುದೀಪ್‌ ವಿಚಾರವಾಗಿ ಸುದ್ದಿಯಾಗಿದ್ದ ರಕ್ಷಕ್‌: ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ʻʻಸುದೀಪಣ್ಣ ಬಂದ ಬಳಿಕ, ದೇವರು ನಿಂತಿದ್ದಾರೆ. ನಾವೆಲ್ಲ ಭಕ್ತಾದಿಗಳು. ಅವರು ಹೆಂಗೆ ವರ ಕೊಡ್ತಾರೋ, ಹಂಗೆ ತೆಗೋಬೇಕು ಅನ್ನೋ ಥರ ಎಲ್ಲರೂ ಇರ್ತಾರೆʼʼಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಸುದೀಪ್‌ ಫ್ಯಾನ್ಸ್‌ ಕೂಡ ರಕ್ಷಕ್‌ ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ಅದರಂತೆ ರಕ್ಷಕ್‌ ಕ್ಷಮೆ ಕೇಳಿದ್ದರು.

Latest Videos
Follow Us:
Download App:
  • android
  • ios