Asianet Suvarna News Asianet Suvarna News

ನಟ ಮೈಕೆಲ್ ಮಧು ಆಕಸ್ಮಿಕ ಸಾವಿನ ಬಳಿಕ ಕುಟುಂಬ ಎದುರಿಸಿದ್ದು ಅದೆಂಥಾ ಆರೋಪ...!?

ಸತ್ಯ ಸಂಗತಿ ಏನೇ ಇರಲಿ, ಮಾನವೀಯತೆಯಿಂದ ಎಲ್ಲರೂ ನಡೆದುಕೊಂಡು ಕಷ್ಟ ಬಂದಾಗ ಯಾರಿಗೇ ಆದರೂ ಊಟ ಸಿಗುವಂತಾಗಬೇಕು. ಮೂಲಭೂತ ಅಗತ್ಯಗಳಲ್ಲಿ ಒಂದಾದ ಊಟ, ನೀರು ಯಾರೇ ಕಷ್ಟದಲ್ಲಿದ್ದರೂ ಸಿಗುವಂತಾಗಬೇಕು ಎಂಬುದು ಎಲ್ಲರ ಹಾರೈಕೆಯಾಗಬೇಕು. 

Sandalwood actor Michael Madhu family is suffering lot after his death srb
Author
First Published Feb 4, 2024, 7:43 PM IST

ಮೈಕೆಲ್ ಮಧು ಕನ್ನಡ ಚಿತ್ರರಂಗ ಕಂಡ ಅಪರೂಪದ ಕಲಾವಿದರಲ್ಲಿ ಒಬ್ಬರು. ತಮ್ಮ 50ನೇ ವಯಸ್ಸಿನಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ನಟ ಮೈಕೆಲ್ ಮಧು, ಹೆಂಡತಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 13 ಮೇ 2020ರಂದು ಇಹಲೋಕ ತ್ಯಜಿಸಿದ ನಟ ಮೈಕೆಲ್ ಮದು ಅವರು ಹಲವಾರು ಸಿನಿಮಾಗಳಲ್ಲಿ ಪೋಷಕ ನಟರಾಗಿ ನಟಿಸಿ ಗಮನಸೆಳೆದವರು. ಆದರೆ, ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ಅವರು ಬೆಂಗಳೂರಿನ 'ಕೆಂಪೇಗೌಡ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್'ನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು. 

ಕೆಲವು ಕಲಾವಿದರ ಬದುಕು ಅದಷ್ಟು ಕಷ್ಟಕರವಾಗಿರುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ನಟ ಮೈಕೆಲ್ ಮಧು ಅವರನ್ನು ಕೂಡ ಹೆಸರಿಸಬಹುದು. ಏಕಂದರೆ, ಚಿಕ್ಕ ಓಣಿಯ ಮನೆಯೊಂದರಲ್ಲಿ ಸಂಸಾರ ಸಮೇತ ವಾಸವಾಗಿದ್ದ ನಟ ಮೈಕೆಲ್ ಮಧು ಅವರು ಆಕಸ್ಮಿಕ ಸಾವು ಕಂಡರು. ಅವರ ನಿಧನದ ಬಳಿಕ ಸಂಸಾರ ಯಜಮಾನನನ್ನು ಕಳೆದುಕೊಂಡು ದುಃಖದ ಜತೆಗೆ ಜೀವನ ಸಾಗಿಸಲು ಬಹಳಷ್ಟು ಕಷ್ಟಗಳನ್ನು ಅನುಭವಿಸಿದರು. ಆದರೆ, ಮಧು ಹೆಂಡತಿ ಕೆಲಸಕ್ಕೆ ಹೋಗಿ ಮಕ್ಕಳನ್ನು ಸಾಕುತ್ತಿದ್ದಾರೆ ಎನ್ನಲಾಗಿದೆ. 

ಸದ್ಯದಲ್ಲೇ ಅಧಿಕೃತ ಮಾಹಿತಿ ನೀಡುತ್ತೇವೆ, ಅಲ್ಲಿಯವರೆಗೆ ಯಾವುದನ್ನೂ ನಂಬಬೇಡಿ; 'ಡೆವಿಲ್' ಪ್ರಕಾಶ್ ವೀರ್ ಮನವಿ

ಮೈಕೆಲ್ ಮಧು ಅವರನ್ನು ಕಳೆದುಕೊಂಡ ಕುಟುಂಬ ತುತ್ತು ಅನ್ನಕ್ಕಾಗಿ ಪರದಾಡಿದ ಆ ದಿನಗಳಲ್ಲಿ ಮಧು ಹೆಂಡತಿಯವರ ಮೇಲೆ ಆಪಾದನೆಯೊಂದು ಬಂದಿತ್ತು ಎನ್ನಲಾಗಿದೆ. ಅವರು ಕಾರ್ಪೋರೇಷನ್‌ನಿಂದ ಮಕ್ಕಳಿಗೆ ಊಟವನ್ನು ತರುತ್ತಾರೆ ಎನ್ನಲಾಗಿತ್ತಂತೆ. ಆದರೆ, ಅವರು ಅಲ್ಲಿ ಕೆಲಸ ಮಾಡಿ ಬರುವಾಗ ಅಲ್ಲೇ ಎಲ್ಲಿಂದಲೋ ಊಟವನ್ನು ತರುತ್ತಿದ್ದರು ಎನ್ನಲಾಗಿದೆ. ಆದರೆ ಅದನ್ನೇ ತಪ್ಪಾಗಿ ತಳಿದ ಜನರು ಸರ್ಕಾರದ ಊಟವನ್ನು ತಾವು ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪವನ್ನು ಹೊರಿಸಿದ್ದರು ಎನ್ನಲಾಗುತ್ತಿದೆ. 

'ಮಲೆನಾಡ ಗೊಂಬೆ'ಗೆ ಮನಸೋತ ಮನೆಹಾಳನಿಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್..!

ಸತ್ಯ ಸಂಗತಿ ಏನೇ ಇರಲಿ, ಮಾನವೀಯತೆಯಿಂದ ಎಲ್ಲರೂ ನಡೆದುಕೊಂಡು ಕಷ್ಟ ಬಂದಾಗ ಯಾರಿಗೇ ಆದರೂ ಊಟ ಸಿಗುವಂತಾಗಬೇಕು. ಏಕೆಂದರೆ, ಊಟ ಎಂಬುದು ಮನುಷ್ಯ ಸೇರಿದಂತೆ ಯಾವುದೇ ಪ್ರಾಣಿಗೆ ಬೇಸಿಕ್ ನೀಡ್ಸ್. ಮೂಲಭೂತ ಅಗತ್ಯಗಳಲ್ಲಿ ಒಂದಾದ ಊಟ, ನೀರು ಯಾರೇ ಕಷ್ಟದಲ್ಲಿದ್ದರೂ ಸಿಗುವಂತಾಗಬೇಕು ಎಂಬುದು ಎಲ್ಲರ ಹಾರೈಕೆಯಾಗಬೇಕು. ಕಲಾವಿದರು ಸೇರಿದಂತೆ ಯಾರೇ ಆಗಲೀ ಊಟಕ್ಕೆ ತೊಂದರೆಯಾದರೆ ಆರೋಪಗಳನ್ನು ಮಾಡುವ ಬದಲು ಊಟಕ್ಕೆ ವ್ಯವಸ್ಥೆ ಮಾಡಬೇಕಾಗಿರುವುದು ನಾಗರೀಕ ಸಮಾಜದ ಕರ್ತವ್ಯ ಎಂಬಂತಾಗಬೇಕು.

ಇದು ಚೀಲದ ವಿಚಾರ ಅಲ್ಲ, ಶೀಲದ ವಿಚಾರ; ಶೃತಿ ಹರಿಹರನ್ ವಿರುದ್ದ ಗುಡುಗಿದ 'ಮಠ' ಗುರುಪ್ರಸಾದ್

Follow Us:
Download App:
  • android
  • ios