ದರ್ಶನ್‌ಗೆ ಜಾಮೀನು ಸಿಕ್ಕ ಬಗ್ಗೆ ಸುದೀಪ್ 'ಏನೂ ಹೇಳಲ್ಲ' ಎನ್ನುತ್ತಲೇ ಹೇಳಿದ್ದೇನು?
ನಟ ದರ್ಶನ್ ಅವರ ಜಾಮೀನಿನ ಬಗ್ಗೆ ಕಿಚ್ಚ ಸುದೀಪ್ ಅವರನ್ನು ಪ್ರಶ್ನಿಸಿದಾಗ, ಅವರು ತಮ್ಮನ್ನು ಈ ವಿಷಯದಿಂದ ದೂರವಿಟ್ಟುಕೊಂಡರು. ದರ್ಶನ್ ಜೀವನದಲ್ಲಿ ಏನಾಗುತ್ತಿದೆ ಎಂದು ಗೊತ್ತಿಲ್ಲ, ಹತ್ತು ವರ್ಷಗಳಿಂದ ದರ್ಶನ್ ಜೊತೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು..ಆದರೆ..
ಸದ್ಯ ಕರ್ನಾಟಕದಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ ನಟ ದರ್ಶನ್ (Darshan Thoogudeepa) ಅವರಿಗೆ ಜಾಮೀನು ಸಿಕ್ಕ ಬಗ್ಗೆಯೇ ಎಲ್ಲರೂ ಮಾತನಾಡುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲೂ ಸೇರಿದ್ದ ನಟ ದರ್ಶನ್‌ಗೆ ಜಾಮೀನು ಸಿಕ್ಕಿ ಈಗ ಹೊರಬಂದಿದ್ದಾರೆ. ಈ ಬಗ್ಗೆ ನಟ ದರ್ಶನ್ ಅವರ ಒಂದು ಕಾಲದ ಆಪ್ತ ಸ್ನೇಹಿತ ಕಿಚ್ಚ ಸುದೀಪ್ (Kichcha Sudeep) ಅವರಿಗೆ 'ಈ ಬಗ್ಗೆ ಏನ್ ಹೇಳ್ತೀರಾ' ಎಂಬ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಸುದೀಪ್ ಕೊಟ್ಟ ಉತ್ತರವೇನು? ಏನೂ ಹೇಳಲ್ಲ ಎನ್ನುತ್ತಲೇ ಹೇಳಿದ್ದೇನು? ಈ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..
ಹೌದು, ಕಿಚ್ಚ ಸುದೀಪ್ ಅವರಿಗೆ ದರ್ಶನ್ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ಅವರು ಅಲರ್ಟ್ ಆಗಿದ್ದಾರೆ. 'ದಯವಿಟ್ಟು ನನಗೆ ಸಂಬಂಧಿಸಿದ ಪ್ರಶ್ನೆ ಕೇಳಿ.. ನನ್ನ ಬಗ್ಗೆ ಕೇಳಿ, ನನ್ನ ಅತಾಯಿಯವರ ಬಗ್ಗೆ ಕೇಳಿ, ನನ್ನ ಮುಂಬರುವ ಸಿನಿಮಾ 'ಮ್ಯಾಕ್ಸ್' ಬಗ್ಗೆ ಕೇಳಿ, ಅಥವಾ ಬಿಗ್ ಬಾಸ್ ಬಗ್ಗೆಯಾದರೂ ಕೇಳಿ. ಆದರೆ, ನನಗೆ ಸಂಬಂಧವೇ ಇಲ್ಲದೇ, ಗೊತ್ತೇ ಇಲ್ಲದ ದರ್ಶನ್ ಜಾಮೀನಿನ ಬಗ್ಗೆ ಕೇಳಿದರೆ ನಾನೇನು ಹೇಳಲಿ?
ಜ್ಞಾನೋದಯಕ್ಕೆ ದಾರಿ ಎಂಬಂತಿದೆ ಸುದೀಪ್ ಮಾತು; ಒಮ್ಮೆ ಕೇಳಿದ್ರೆ ಮತ್ತೆ ಕೇಳ್ತೀರಾ!
ಫಸ್ಟ್ ಆಫ್ ಆಲ್ ನನಗೆ ಆ ಕೇಸ್‌ನಲ್ಲಿ ಏನಾಗಿದೆ ಎಂಬುದೇ ಗೊತ್ತಿಲ್ಲ. ಗೊತ್ತಿಲ್ಲದ ಸಂಗತಿಯ ಬಗ್ಗೆ ನಾನೇನು ಹೇಳಲಿ? ಹೌದು, ಹತ್ತು ವರ್ಷದ ಸ್ನೇಹಿತರಾಗಿದ್ದೆವು. ಅಂದು ನಡೆದ ಸಂಗತಿಗಳ ಬಗ್ಗೆ ಹೇಳಬಲ್ಲೆ. ಏಕೆಂದರೆ, ಅಂದು ನಾವಿಬ್ಬರೂ ಒಟ್ಟಿಗೇ ಇರುತ್ತಿದ್ದೆವು. ಆದರೆ, ಈಗ ಹತ್ತು ವರ್ಷಗಳಿಂದೀಚೆಗೆ ನಾವಿಬ್ಬರೂ ದೂರದೂರ ಇದ್ದೇವೆ. ಅವರ ಜೀವನದಲ್ಲಿ ಏನಾಗಿದೆ ಅಥವಾ ನನ್ನ ಜೀವನದಲ್ಲಿ ಏನಾಗಿದೆ ಎಂಬ ಬಗ್ಗೆ ಇಬ್ಬರಿಗೂ ಸರಿಯಾದ ಮಾಹಿತಿ ಇಲ್ಲ. ಅದರಲ್ಲೂ ಪ್ರಮುಖವಾಗಿ ಈ ಕೊಲೆ ಕೇಸ್, ಜಾಮೀನು ಇವುಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ.
ಗೊತ್ತಿಲ್ಲದ ಸಂಗತಿಗಳ ಬಗ್ಗೆ ನೀವು ನನ್ನನ್ನು ಕೇಳಿದರೆ 'ಗೊತ್ತಿಲ್ಲ' ಎನ್ನುವ ಉತ್ತರ ನನ್ನಿಂದ ಬರುತ್ತದೆ ಅಷ್ಟೇ. ಅದು ನಿಮಗೂ ಗೊತ್ತು. ನೀವು ನನ್ನ ಫ್ಯಾಮಿಲಿ ಬಗ್ಗೆ, ನನ್ನ ಅಮ್ಮನ ಬಗ್ಗೆ, ಬಿಗ್ ಬಾಸ್ ಬಗ್ಗೆ ಹಾಗೂ ನನ್ನ ಸಿನಿಮಾಗಳ ಬಗ್ಗೆ ಕೇಳಿದರೆ ಖಂಡಿತ ನಾನು ಉತ್ತರ ಕೊಡಬಲ್ಲೆ..' ಎಂದು ಹೇಳುವ ಮೂಲಕ ನಟ ಕಿಚ್ಚ ಸುದೀಪ್ ಅವರು ತಾವೀಗ 'ನಟ ದರ್ಶನ್ ಅವರಿಂದ ದೂರವಾಗಿದ್ದೇನೆ, ನಮ್ಮಿಬ್ಬರ ನಡುವೆ ಸ್ನೇಹ ಹಾಗಿರಲಿ, ಯಾವುದೇ ಸಂಬಂಧ ಇಲ್ಲ' ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ. ಅದು ಜಗತ್ತಿಗೇ ಗೊತ್ತಿರುವ ಸಂಗತಿ. ಆದರೆ, ಮತ್ತೆ ಮತ್ತೆ ಅದನ್ನು ಕನ್ಫರ್ಮ್ ಮಾಡಿಕೊಳ್ಳಲಾಗುತ್ತಿದೆ ಅಷ್ಟೇ!
ಅಪ್ಪು ಬಗ್ಗೆ ಅಂದು ರಮ್ಯಾ ಆಡಿದ್ದ ಮಾತು ಇಂದು ವೈರಲ್ ಆಗ್ತಿದೆ, ನೆಟ್ಟಿಗರ ಮಾಯೆ!