ಜ್ಞಾನೋದಯಕ್ಕೆ ದಾರಿ ಎಂಬಂತಿದೆ ಸುದೀಪ್ ಮಾತು; ಒಮ್ಮೆ ಕೇಳಿದ್ರೆ ಮತ್ತೆ ಕೇಳ್ತೀರಾ!
ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ಅದೇನು ಹೇಳಿದ್ದಾರೆ? ಇಲ್ಲಿ ಬರೆಯುತ್ತಿರುವ ಮ್ಯಾಟರ್ ಏನು ಅಂದ್ರೆ, ಅವರು ನಮ್ಮನ್ನು ನಂಬಿಕೊಂಡು ಬಂದಿರುವ ವ್ಯಕ್ತಿಗಳನ್ನು ನಾವು ಹೇಗೆ ನಡೆಸಿಕೊಳ್ಳಬೇಕು ಎಂಬುದರ ಬಗ್ಗೆ ಹೇಳಿದ್ದಾರೆ. ನಮ್ಮನ್ನು ಪ್ರೀತಿಸುವವರ ಬಗ್ಗೆ ನಾವು ಯಾವ ಧೋರಣೆ..
ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಅವರು ಕೆಲವು ವೇದಿಕೆಗಳಲ್ಲಿ ಹಾಗೂ ಸಂದರ್ಶನಗಳಲ್ಲಿ ಮಾತನ್ನಾಡಿರುವ ವೀಡಿಯೋ ವೈರಲ್ ಆಗುತ್ತವೆ. ಇತ್ತೀಚೆಗಂತೂ ನಟ ಸುದೀಪ್ ಅವರು ಮಾತನಾಡಿರುವ ವಿಡಿಯೋಗಳು ಅದೆಷ್ಟು ನೋಡಲು ಸಿಗುತ್ತವೆ ಎಂದರೆ, ನಿಜವಾಗಿಯೂ ಸುದೀಪ್ ಅವರು ಅಷ್ಟೊಂದು ಮಾತನ್ನಾಡಿದ್ದು ಯಾವಾಗ ಎಂಬುದೇ ಅರ್ಥವಾಗುವುದಿಲ್ಲ. ಆದರೆ, ಅವೆಲ್ಲವೂ ಮಾತಿನ ತುಣುಕುಗಳು! ಆದರೆ, ಇವೆಲ್ಲವೂ ಹಲವರ ಕಣ್ಣು ತೆರೆಸಬಲ್ಲಂತ ಅಪೂರ್ವ ಮತ್ತು-ಮಾಣಿಕ್ಯಗಳು ಎನ್ನಬಹುದು.
ಅಂದರೆ, ನಟ ಸುದೀಪ್ ಅವರು ಎಲ್ಲೋ ವೇದಿಕೆಗಳಲ್ಲಿ ಸ್ವಲ್ಪ ಹೊತ್ತು ಮಾತನ್ನಾಡಿರುತ್ತಾರೆ. ಕೆಲವು ಸಂದರ್ಶನಗಳಲ್ಲಿ ಗಂಟೆಗಟ್ಟಲೆ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿರುತ್ತಾರೆ. ಅವೆಲ್ಲವನ್ನೂ ಕಟ್ ಮಾಡಿ ಹಲವು ವಿಡಿಯೋಗಳನ್ನಾಗಿ ಮಾಡಲಾಗುತ್ತದೆ. ಹೀಗಾಗಿ ಅವು ಬಹಳಷ್ಟು ಎನ್ನಿಸುತ್ತವೆ. ಆದರೆ, ಕಿಚ್ಚ ಸುದೀಪ್ ಅವರನ್ನು ಮೋಟಿವೇಶನಲ್ ಸ್ಪೀಕರ್ ಎನ್ನುವ ರೀತಿಯಲ್ಲಿ ಹಲವರು ಅವರ ಮಾತುಗಳನ್ನು ಕೇಳುತ್ತಾರೆ, ಅನುಸರಿಸುತ್ತಾರೆ. ಅವರು ಮೋಟಿವೇಶನಲ್ ಸ್ಪೀಕರ್ ಅಲ್ಲ ಅಂತಲ್ಲ, ಆದರೆ ಆ ಹಣೆಪಟ್ಟಿ ಅವರಿಗೇ ಬೇಕೋ ಬೇಡವೋ ಗೊತ್ತಿಲ್ಲ.
UI ಗೊಂಬೆ KD ಲೀಡಿಂಗ್ ಲೇಡಿ, ಕೊಡಗಿನ ಕುವರಿ ರೀಷ್ಮಾಗೆ ಫುಲ್ ಡಿಮ್ಯಾಂಡ್!
ಅದಿರಲಿ, ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ಅದೇನು ಹೇಳಿದ್ದಾರೆ? ಇಲ್ಲಿ ಬರೆಯುತ್ತಿರುವ ಮ್ಯಾಟರ್ ಏನು ಅಂದ್ರೆ, ಅವರು ನಮ್ಮನ್ನು ನಂಬಿಕೊಂಡು ಬಂದಿರುವ ವ್ಯಕ್ತಿಗಳನ್ನು ನಾವು ಹೇಗೆ ನಡೆಸಿಕೊಳ್ಳಬೇಕು ಎಂಬುದರ ಬಗ್ಗೆ ಹೇಳಿದ್ದಾರೆ. ನಮ್ಮನ್ನು ಪ್ರೀತಿಸುವವರ ಬಗ್ಗೆ ನಾವು ಯಾವ ಧೋರಣೆ ಹೊಂದಿರಬೇಕು, ಅವರ ಜೊತೆ ಹೇಗಿರಬೇಕು ಎಂಬುದನ್ನು ಬಹಳ ಚೆನ್ನಾಗಿ ಮನಮುಟ್ಟುವಂತೆ ಹೇಳಿದ್ದಾರೆ. ಅದೇನಿರಬಹುದು ಎಂಬ ಕುತೂಹಲ ನಿಮಗಿದ್ದರೆ ಕೊನೆಯವರೆಗೂ ಓದಿ..
'ಲೈಫಲ್ಲಿ ಕೊನೆವರೆಗೂ ಇರ್ತೀವಿ ಅಂತ ಯಾರೋ ಬರ್ತಾರಲ್ಲ, ನಾವು ಅವ್ರನ್ನ ಕೈ ಬಿಡಬಾರ್ದು. ಪಕ್ಕದಲ್ಲಿ ಇರೋರು ಯಾರೋ ದೊಡ್ಡ ವ್ಯಕ್ತಿ ಅಂದ್ಕೊಂಡು ನಾವು ಇವ್ರನ್ನ ನೆಗ್ಲೆಕ್ಟ್ ಮಾಡಿ ಅವ್ರ ಹತ್ರ ಮಾತಾಡ್ಕೊಂಡು ನಿಜವಾಗ್ಲೂ ನಾವು ಯಾರೋ ಒಬ್ರು ನಮ್ಗೆ ಪ್ರೀತಿನ ಕೊಡೋಕೆ ಬಂದಿರ್ತಾರಲ್ಲ, ಅವ್ರನ್ನ ನೆಗ್ಲೆಕ್ಟ್ ಮಾಡ್ಬಿಡ್ತೀವಿ.. ಅದ್ಯಾಕೆ ಅಂತಂದ್ರೆ, ನಾವು ಯಾರನ್ನೋ ಇಂಪ್ರೆಸ್ ಮಾಡೋಕೆ ನೋಡ್ತೀವಿ..' ಎಂದಿದ್ದಾರೆ ಕನ್ನಡದ ನಟ ಕಿಚ್ಚ ಸುದೀಪ್.
ಅಪ್ಪು ಬಗ್ಗೆ ಅಂದು ರಮ್ಯಾ ಆಡಿದ್ದ ಮಾತು ಇಂದು ವೈರಲ್ ಆಗ್ತಿದೆ, ನೆಟ್ಟಿಗರ ಮಾಯೆ!